ಮುಜಾಹಿದ್ ಸಮ್ಮೇಳನದಲ್ಲಿ ಚೇಲಾರಿ ಸಮಸ್ತ ನಾಯಕರು: ತಾರಕಕ್ಕೇರಿದ ವಿವಾದ

ಮಲಪ್ಪುರಂ: ಚೇಲಾರಿ ಸಮಸ್ತದ ಎಚ್ಚರಿಕೆಯನ್ನು ಕಡೆಗಣಿಸಿ, ವಕ್ಫ್ ಬೋರ್ಡ್ ಅಧ್ಯಕ್ಷ ಪಾಣಕ್ಕಾಡ್ ರಷೀದಲಿ ಶಿಹಾಬ್ ತಂಙಳ್ ಮತ್ತು ಮುನವ್ವರ್ ಅಲಿ ಶಿಹಾಬ್ ತಂಙಳ್ ರವರು ಮುಜಾಹಿದ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು, ತೀವ್ರ ವಿವಾದಕ್ಕೀಡಾಗಿದೆ.
ಇಬ್ಬರ ವಿರುದ್ಧ ಸಮಸ್ತದ ಒಳಗೂ ಹೊರಗೂ ವಾಗ್ವಾದಗಳು ತಾರಕಕ್ಕೇರಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಸಂಘಟನೆಯ ಸಾರಥ್ಯದಲ್ಲಿರುವ ರಷೀದಲಿ ತಂಙಳ್‌ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಚೇಲಾರಿ ವಿಭಾಗದ ಯುವ, ವಿದ್ಯಾರ್ಥಿ ಸಂಘಟನೆಗಳು ತಮ್ಮ ನಾಯಕತ್ವಕ್ಕೆ ತಿಳಿಸಿದೆ ಎಂದು ಹೇಳಲಾಗಿದೆ.

ತಂಙಳ್‌ರನ್ನು ಮಲಪ್ಪುರಂ ಜಿಲ್ಲಾ ಸುನ್ನೀ ಮಹಲ್ಲ್ ಫೆಡರೇಷನ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಅಪಸ್ವರಗಳು ಕೇಳಿಬರುತ್ತಿದೆ . ಮುಂದಿನ ಮುಶಾವರದಲ್ಲಿ ಈ ಕುರಿತು ಸ್ಪಷ್ಟವಾದ ತೀರ್ಮಾನ ಉಂಟಾಗಳಿದೆ ಎಂದು ಯುವ ನಾಯಕತ್ವಕ್ಕೆ ಸಮಸ್ತದ ನಾಯಕರು ಬರವಸೆ ನೀಡಿದ್ದು, ಆ ವರೆಗೆ ಯಾರು ಕೂಡ ಬಹಿರಂಗ ಹೇಳಿಕೆ ನೀಡದಂತೆ ನಾಯಕರು ಆದೇಶಿಸಿದ್ದಾರೆ.

ಮಲಪ್ಪುರಂ ಕೂರಿಯಾಡ್ ನಲ್ಲಿ ನಡೆಯುವ ಒಂಬತ್ತನೇ ಮುಜಾಹಿದ್ ರಾಜ್ಯ ಸಮ್ಮೇಳನದ ಜಮಾಅತ್ ಸೆಮಿನಾರ್ ನಲ್ಲಿ ರಷೀದಲಿ ತಂಙಳ್ ಭಾಗವಹಿಸಿ ಭಾಷಣ ಮಾಡಿದರೆ,ಸಂಜೆ ನಡೆದ ಯುವ ಸಮಾವೇಶದಲ್ಲಿ ಮುನವ್ವರಲಿ ತಂಙಳ್ ಭಾಗವಹಿಸಿದ್ದರು. ತಂಙಳ್ ರಿಗೆ ಸಮ್ಮೇಳನಕ್ಕೆ ಆಹ್ವಾನ ನೀಡಿದಾಗಲೇ ಸಮಸ್ತ ನಾಯಕರೆಡೆಯಲ್ಲಿ ಅಪಸ್ವರಗಳು ಕೇಳಿಬಂದಿದ್ದವು. ಸಮಸ್ತವು ಸಭೆ ಸೇರಿ ಸಮ್ಮೇಳನದಲ್ಲಿ ಭಾಗವಹಿಸದಂತೆ ಎಚ್ಚರಿಕೆಯನ್ನು ಕೂಡ ನೀಡಿತ್ತು. ಮುಜಾಹಿದ್, ಜಮಾಅತ್ ಮುಂತಾದ ನೋತನ ವಾದಿಗಳ ಸಮ್ಮೇಳನದಲ್ಲಿ ಭಾಗವಹಿಸದಂತೆ ಮತ್ತು ಸಹರಿಸದಂತೆ ಎಚ್ಚರಿಕೆಯನ್ನು ನೀಡಿದ ನಾಯಕತ್ವವು, ಸಲಫೀಸಂನ್ನು ಕಳಂಕ ರಹಿತವಾಗಿ ಚಿತ್ರಿಸುವುದರ ಭಾಗವಾಗಿ ಕೆಲವು ಸುನ್ನೀ ನಾಯಕರನ್ನು ಸಮ್ಮೇಳನದಲ್ಲಿ ಭಾಗವಸುಹಿಸುವಂತೆ ಮಾಡುತ್ತಿರುವುದರ ಹಿಂದಿನ ಷಢ್ಯಂತರವನ್ನು ತಿಳಿಯುವಂತೆ ಚೇಲಾರಿ ಸಮಸ್ತದ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಎಚ್ಚರಿಕೆ ನೀಡಿದ್ದರು.
ರಹ್ಮತುಲ್ಲಾ ಖಾಸಿಮಿ, ಎಸ್ಕೆಎಸ್ಸೆಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರ್ ಮುಂತಾದವರು ಕೂಡ ಜಾಲತಾಣದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದೆಲ್ಲವನ್ನು ಗಣನೆಗೆ ತೆಗೆದು ಕೊಳ್ಳದೆ ಇಬ್ಬರು ನಾಯಕರು ಮುಜಾಹಿದ್ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ಮುಸ್ಲಿಂ ಸಂಘಟನೆಗಳಲ್ಲಿ ವಿಂಗಡನೆಯ ಸ್ವರವಲ್ಲ, ಬದಲಾಗಿ ಐಕ್ಯತೆಯ ಹಾದಿಯನ್ನು ತೆರೆಯಬೇಕೆಂದು ಸಮ್ಮೇಳನದಲ್ಲಿ ಹೇಳಿದ ರಷೀದಲಿ ತಂಙಳ್,ಸಮಸ್ತದ ಆದರ್ಶದಲ್ಲಿ ಅಚಲವಾಗಿ ನೆಲೆನಿಂತವನಾಗಿ ನಾನು ಈ ಹೇಳಿಕೆ ನೀಡುತ್ತಿದ್ದೇನೆ ಎಂದಿದ್ದರು.

ಆದರೆ, ಯುವ ಸಂಘಟನೆಯ ಸಾರಥ್ಯದಲ್ಲಿ ಇರುವ ಕಾರಣದಿಂದ ಕೆಲವು ಧಾರ್ಮಿಕ ಜವಾಬ್ದಾರಿ ಇರುವುದರಿಂದ ಭಾಗವಸುತ್ತಿರುವುದಾಗಿ ಮುನವ್ವರಲಿ ತಂಙಳ್ ಹೇಳಿಕೆ ನೀಡಿದ್ದರು. ಆತಿಥ್ಯವನ್ನು ಸ್ವೀಕರಿಸುದು ಪ್ರವಾದಿ ಚರ್ಯೆಯಾಗಿದೆ ಎನ್ನುವುದನ್ನು ಅವರು ಬೆಟ್ಟು ಮಾಡಿದ್ದರು. ಭಯೋತ್ಪಾದನೆಯನ್ನು ಬೆಂಬಲಿಸದ ಯಾವುದೇ ಸಂಘನೆಯೊಂದಿಗೆ ಸಹಕರಿಸಲು ತಾನು ತಯಾರಿರುವುದಾಗಿ ಹೇಳುತ್ತಾ ತನ್ನ ಪ್ರಸಂಗವನ್ನು ಕೊನೆಗೊಳಿಸಿದ್ದರು.

ಇವುಗಳನ್ನೂ ಓದಿ

2 thoughts on “ಮುಜಾಹಿದ್ ಸಮ್ಮೇಳನದಲ್ಲಿ ಚೇಲಾರಿ ಸಮಸ್ತ ನಾಯಕರು: ತಾರಕಕ್ಕೇರಿದ ವಿವಾದ

  1. Salafi ಗಳು ಇಸ್ಲಾಂ ದೀನ್ ನಲ್ಲಿ ಮಾಡಿದ ನೂತನ ವಾದ ವೇನು?
    ಅವರು ಮಾಡುತ್ತಿರುವ ನೂತನವಾದ ಯಾವುದು?

    1. ಜುಮುಅ ಕುತುಬ ಅರಬಿ‌ ಭಾಷೆ ಬಿಟ್ಟು ಸ್ವಂತ (ಮಲಯಾಳಂ) ಭಾಷೆಯಲ್ಲಿ ಮಾಡಿದ್ದು ಇದೇ ಸಲಫಿಗಳು.
      ನಮಾಝಿನ ನಂತರವರುವ ಕೂಟು ಪ್ರಾರ್ಥನೆ ಬಿದ್ಅತ್ ಎಂದು ವಾದಮಾಡಿದವವರು ಇದೇ ಸಲಫಿಗಳು

Leave a Reply

Your email address will not be published. Required fields are marked *

error: Content is protected !!