janadhvani

Kannada Online News Paper

ಕರ್ನಾಟಕ ಚುನಾವಣೆ ಅಂತ್ಯ -ಪೆಟ್ರೋಲ್ ದರ ಹೆಚ್ಚಿಸಿದ ಕೇಂದ್ರ ಸರಕಾರ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಇದೀಗ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ ಪ್ರತಿ ಲೀಟರ್‌ಗೆ 17 ಪೈಸೆ ಮತ್ತು 21 ಪೈಸೆ ಹೆಚ್ಚಳ ಮಾಡಿವೆ.

ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ ಈಗ ₹74.80 ಆಗಿದೆ. ಈ ಹಿಂದೆ ಇದು ₹74.63 ಆಗಿತ್ತು. ₹65.93 ಇದ್ದ ಒಂದು ಲೀಟರ್ ಡೀಸೆಲ್ ದರ ಈಗ ₹66.14 ಆಗಿದೆ.

ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಪರಿಷ್ಕೃತ ದರ ₹82.65 ಆಗಿದ್ದರೆ, ಡೀಸೆಲ್ ದರ ₹70.43 ಆಗಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಪರಿಷ್ಕೃತ ದರ ₹77.61 ಆಗಿದ್ದು, ಡೀಸೆಲ್ ದರ ₹69.79 ಆಗಿದೆ.

ದರ ಏರಿಕೆ ಸಮರ್ಥಿಸಿದ್ದ ಸಚಿವ: ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಕಳೆದ ತಿಂಗಳು ಸಮರ್ಥಿಸಿಕೊಂಡಿದ್ದರು. ‘ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚಳಕ್ಕೆ ಸ್ಥಳೀಯ ಕಾರಣಗಳಿಲ್ಲ. ಅಂತರರಾಷ್ಟ್ರೀಯ ಮಟ್ಟದ ಕಾರಣಗಳಿಂದ ದರ ಏರಿಕೆಯಾಗಿದೆ’ ಎಂದು ಅವರು ಹೇಳಿದ್ದರು.

error: Content is protected !! Not allowed copy content from janadhvani.com