ಪಾಕಿಸ್ತಾನಕ್ಕೆ ನೀಡುತ್ತಿದ್ದ ಅನುದಾನವನ್ನು ತಡೆಹಿಡಿಯಲು ಅಮೇರಿಕಾ ನಿರ್ಧಾರ

ವಾಷಿಂಗ್ಟನ್‌:  ಉಗ್ರರ ವಿರುದ್ಧ ಕ್ರಮ ಕೈಗೊಳ್ಳದ ಪಾಕಿಸ್ಥಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲು 1,600 ಕೋಟಿ ರೂ. ಅನುದಾನವನ್ನು  ತಡೆಹಿಡಿವ ಅಮೆರಿಕ ನಿರ್ಧರಿಸಿದೆ.

ಅಮೆರಿಕ ನೀಡುತ್ತಿರುವ ಅಪಾರ ನೆರವಿಗೆ ಬದಲಾಗಿ ಪಾಕಿಸ್ತಾನ ಸುಳ್ಳನ್ನು ನೀಡುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.ಸೋಮವಾರ ಹೊಸ ವರ್ಷದ ಶುಭಾಶಯದ ಟ್ವೀಟ್‌ ಬಳಿಕ ಮಾಡಿರುವ ಟ್ವೀಟ್‌ನಲ್ಲಿ ಟ್ರಂಪ್‌ ಪಾಕಿಸ್ತಾನದ ವಿರುದ್ಧದ ಕಿಡಿಕಾರಿದ್ದಾರೆ.

‘ಅಮೆರಿಕವು ಮೂರ್ಖತನದಿಂದ 15 ವರ್ಷಗಳಿಂದ ಪಾಕಿಸ್ತಾನಕ್ಕೆ 33 ಬಿಲಿಯನ್‌ ಡಾಲರ್‌ಗೂ ಹೆಚ್ಚು ನೆರವು ನೀಡುತ್ತಾ ಬಂದಿದೆ. ಪಾಕಿಸ್ತಾನ ಇದಕ್ಕೆ ಬದಲಾಗಿ ನಮಗೆ ನೀಡಿರುವುದು ಸುಳ್ಳು ಮತ್ತು ಕೃತಘ್ನತೆಯನ್ನು ಮಾತ್ರ. ಇದನ್ನು ನೋಡಿದರೆ ನಮ್ಮ ನಾಯಕರು ಎಂಥ ಮೂರ್ಖರು ಎಂಬುದು ಗೊತ್ತಾಗುತ್ತದೆ. ಅವರು ಉಗ್ರರಿಗೆ ರಕ್ಷಣೆ ನೀಡುತ್ತಿದ್ದಾರೆ. ಆಫ್ಗಾನಿಸ್ತಾನದಲ್ಲಿ ಉಗ್ರರನ್ನು ಬೇಟೆಯಾಡಲು ಸ್ವಲ್ಪ ಪ್ರಮಾಣದಲ್ಲಿ ಅವರ ಸಹಾಯ ಸಿಕ್ಕಿದೆ ಅಷ್ಟೆ. ಮತ್ತೇನೂ ಇಲ್ಲ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ಈ ಬಗ್ಗೆ ಸರಕಾರದ ಆಂತರಿಕ ಚರ್ಚೆ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ಟ್ರಂಪ್‌ ನಿರ್ಧಾರ ಘೋಷಿಸುವ ಸಾಧ್ಯತೆಯಿದೆ. ಆಗಸ್ಟ್‌ನಲ್ಲೇ ಈ ಅನುದಾನ ತಡೆಹಿಡಿಯಲಾಗಿತ್ತು. ಆದರೆ ಹೊಸ ಸರಕಾರ ರಚನೆಯಾದ ಅನಂತರ ಈ ಬಗ್ಗೆ ಇದೇ ಮೊದಲ ಬಾರಿಗೆ ಚರ್ಚೆ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಅಮೆರಿಕ- ಪಾಕ್‌ ಸಂಬಂಧ ಕ್ಷೀಣಿಸುತ್ತಿದ್ದು, ಅನುದಾನ ಸ್ಥಗಿತ ನಿರ್ಧಾರ ಪ್ರಕಟಿಸಿದರೆ ಇನ್ನೂ ಕೆಳಮಟ್ಟಕ್ಕೆ ಸಾಗುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!