‘ತ್ರಿವಳಿ ತಲಾಖ್’ ಸುಪ್ರೀಂ ಮೆಟ್ಟಿಲೇರಿದ್ದ ಇಶ್ರತ್ ಜಹಾನ್ ಬಿಜೆಪಿಗೆ ಸೇರ್ಪಡೆ

ಕೋಲ್ಕತ್ತಾ,ಜ.1-ಮುಸ್ಲಿಂ ಸಮುದಾಯದಲ್ಲಿದ್ದ ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಮಹಿಳೆ ಇಶ್ರತ್ ಜಹಾನ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ವಿಷಯವನ್ನು ಪಶ್ಚಿಮ ಬಂಗಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ಖಚಿತಪಡಿಸಿದ್ದು, ಇಶ್ರತ್ ಪಕ್ಷ ಸೇರ್ಪಡೆ ಹಿನ್ನೆಲೆಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. 2014ರಲ್ಲಿ ದುಬೈನಿಂದಲೇ ಇಶ್ರತ್‍ಗೆ ಆಕೆಯ ಪತಿ ಫೋನ್ ಮೂಲಕ ತಲಾಖ್ ನೀಡಿ ವಿಚ್ಚೇಧನ ಪಡೆದಿದ್ದರು. ಇದಾದ ಬಳಿಕ ಇಶ್ರತ್ ಕಾನೂನು ಹೋರಾಟ ನಡೆಸಿದ್ದರು.

 

ಕಳೆದ ಆಗಸ್ಟ್​ 22 ರಂದು ಸುಪ್ರೀಂಕೋರ್ಟ್​ 3-2 ಬಹುಮತದ ತೀರ್ಪಿನಲ್ಲಿ ತ್ರಿವಳಿ ತಲಾಕ್​ ಅನ್ನು ಅಮಾನ್ಯಗೊಳಿಸಿ ಈ ಇಸ್ಲಾಮ್ ಸಂಪ್ರದಾಯ ಅಸಾಂವಿಧಾನಿಕ ಎಂದು ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಗುರುವಾರ ಮಂಡಿಸಲಾಗಿದ್ದ ಮುಸ್ಲಿಂ ವಿಮೆನ್ ಬಿನ್ (ವಿವಾಹಗಳ ಹಕ್ಕುಗಳ ರಕ್ಷಣೆ) 2017ನ್ನು ಲೋಕಸಭೆ ಅಂಗೀಕರಿಸಿತ್ತು. ಹೊಸ ಮಸೂದೆಯಲ್ಲಿ ಕ್ಷಣ ಮಾತ್ರದಲ್ಲಿ ತ್ರಿವಳಿ ತಲಾಕ್ ಹೇಳುವ ಪತಿಯನ್ನು ಗರಿಷ್ಠ 3 ವರ್ಷದವರೆಗೆ ಜೈಲಿಗೆ ಕಳುಹಿಸಬಹುದಾಗಿದೆ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!