janadhvani

Kannada Online News Paper

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿಕೆಯಸ್ಸಿ): ಜುಬೈಲ್ ಘಟಕದ ನೂತನ ಸಾರಥಿಗಳು

ದಮ್ಮಾಮ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನಕ್ಕೊಳಪಟ್ಟ ಜುಬೈಲ್ ಘಟಕದ 28 ನೇ ವಾರ್ಷಿಕ ಮಹಾಸಭೆಯು 24, ಫೆಬ್ರವರಿ 2023 ಶುಕ್ರವಾರ, ಜುಬೈಲ್ ಡಿಕೆಯಸ್ಸಿ ಹಾಲ್ ನಲ್ಲಿ ನಡೆಯಿತು.

ಡಿಕೆಯಸ್ಸಿ ಖಾದಿಂ ಇಸ್ಮಾಯೀಲ್ ಕಾಟಿಪಳ್ಳರವರ ದುಆ ದೊಂದಿಗೆ ಪ್ರಾರಂಭಗೊಂಡ ಮಹಾಸಭೆಯಲ್ಲಿ, ಮುಸ್ತಫ ಮೈನಾ ಖಿರಾಅತ್ ಪಠಿಸಿದರು.ಹಾತಿಂ ಕೂಳೂರುಸಭೆಯನ್ನು ಉದ್ಘಾಟಿಸಿ,ಡಿಕೆಯಸ್ಸಿಯ ಅಭಿವೃದ್ಧಿ ಕಾರ್ಯಕ್ರಮಗಳ ಅವಲೋಕನದ ಬಗ್ಗೆ ವಿವರಿಸಿದರು. ಅಬ್ದುಲ್ ಹಮೀದ್ ಉಳ್ಳಾಲ ಸ್ವಾಗತಿಸಿದರು.ಮುಹಮ್ಮದ್ ಅಲೀ ಅಲ್ ಮುಝೈನ್ ಕಾರ್ಯಕ್ರಮ ನಿರೂಪಿಸಿದರು.

ಉಪಾಧ್ಯಕ್ಷ ಅನ್ವರ್ ಪಡುಬಿದ್ರಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಅಬ್ದುಲ್ ಕರೀಂ ಪಾಣೆಮಂಗಳೂರು ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿದರು.

ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ದಮ್ಮಾಂ ಝೋನ್ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ, ಡಿಕೆಯಸ್ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿಂಜೆ, ಜುಬೈಲ್ ಉಸ್ತುವಾರಿ ಅಬ್ದುಲ್ ಅಝೀಝ್ ಅತೂರು ಹಾಗೂ ಡಿಕೆಯಸ್ಸಿ ಸ್ಥಾಪಕ ಸದಸ್ಯ ಊರಿನಿಂದ ಬಂದ ಅಬ್ದುಲ್ ಖಾದರ್ ಹಾಜಿ ಸಕಲೇಶಪುರ ಆಗಮಿಸಿದ್ದರು.

ಡಿಕೆಯಸ್ಸಿ ಜುಬೈಲ್ ಅಧ್ಯಕ್ಷ ಫಾರೂಖ್ ಕರ್ನಿರೆ ಯವರ ಅನುಪಸ್ಥಿತಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಇನ್ ಚಾರ್ಜ್ ಅಧ್ಯಕ್ಷ ಅಬ್ದುಲ್ ಹಮೀದ್ ಕಾಪು ಮಾತನಾಡಿ ಡಿಕೆಯಸ್ಸಿಯ ಅಭಿವ್ರಧ್ಧಿ ಗಾಗಿ ಇನ್ನು ಮುಂದಕ್ಕೂ ಶ್ರಮ ವಹಿಸಿ ದುಡಿದು ಯಶಸ್ವಿಗೊಳಿಸಲು ವಿನಂತಿಸಿದರು.

ದಮ್ಮಾಂ ಝೋನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತ್ರತ್ವ ದಲ್ಲಿ 2023-24 ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷ ರಾಗಿ ಅಶ್ರಫ್ ನಾಳ, ಗೌರವಾಧ್ಯಕ್ಷ ರಾಗಿ ಮುಹಮ್ಮದ್ ಅಲೀ ಗಲ್ಫ್ ಬೇಕರಿ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಬರ್ವ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಕರೀಂ ಪಾಣೆಮಂಗಳೂರು ರವರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಕಾಪು, ಹಾತಿಂ ಕೂಳೂರು, ಸ್ವಲಾಹುದ್ದೀನ್ ಜೋಕಟ್ಟೆ ಆಯ್ಕೆಗೊಂಡರು.
ಕಾರ್ಯದರ್ಶಿಗಳಾಗಿ ಮುಹಮ್ಮದ್ ಅಲೀ ಅಲ್ ಮುಝೈನ್, ಉಬೈದ್ ಸುರಿಬೈಲ್ ಹಾಗೂ ಅಬ್ದುಲ್ ಗಫೂರ್ ಎಣ್ಣೆಹೊಳೆ ನೇಮಕಗೊಂಡರು.
ಅನ್ವರ್ ಪಡುಬಿದ್ರಿ,ಇಖ್ಬಾಲ್ ಮಲ್ಲೂರು, ಜಮಾಲ್ ಕಣ್ಣಂಗಾರ್ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.
ಸಲಹಾ ಸಮಿತಿಗೆ ಅಬ್ದುಲ್ ಹಮೀದ್ ಉಳ್ಳಾಲ, ಅಬ್ದುಲ್ ಗಫೂರ್ ಸಜಿಪ ಮತ್ತು ಸುಲೈಮಾನ್ ಸೂರಿಂಜೆ.
ಆರ್ಗನೈಝರ್ ಗಳಾಗಿ ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ , ಅಹ್ಮದ್ ಫಾರೂಖ್ ಕರ್ನಿರೆ,ಮುಸ್ಥಫ ಮೈನಾ,ಸಮೀರ್ ಪಲಿಮಾರ್ ಮತ್ತು ಅಹ್ಮದ್ ಕಣ್ಣಂಗಾರ್.

ಡಿಕೆಯಸ್ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿಂಜೆ, ಜುಬೈಲ್ ಯೂತ್ ವಿಂಗ್ ಅಧ್ಯಕ್ಷ ಸಫ್ವಾನ್ ಕಣ್ಣಂಗಾರ್ ಹಾಗೂ ತುಖ್ಬಾ ಘಟಕ ಅಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು.
ಡಿಕೆಯಸ್ಸಿ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿಂಜೆ ಕಾರ್ಯಕ್ರಮಕ್ಕೆ ಶುಭಕೋರಿದರು.

ನೂತನ ಅಧ್ಯಕ್ಷರಾಗಿ ನೇಮಕಗೊಂಡ ಅಶ್ರಫ್ ನಾಳ ಮಾತನಾಡುತ್ತಾ ಡಿಕೆಯಸ್ಸಿ ಯ ಅಭಿವ್ರಧ್ಧಿಗಾಗಿ ನಮ್ಮೊಂದಿಗೆ ಕೈಜೋಡಿಸಿ ಸಹಕರಿಸಬೇಕೆಂದು ವಿನಂತಿಸಿದರು.
ಸಭೆಯ ಕೊನೆಯಲ್ಲಿ ನೂತನ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಬರ್ವ ಧನ್ಯವಾದಗೈದರು.

ವರದಿ:ಇಸ್ಮಾಯೀಲ್ ಕಾಟಿಪಳ್ಳ ದಮ್ಮಾಂ

error: Content is protected !! Not allowed copy content from janadhvani.com