janadhvani

Kannada Online News Paper

ಶೈಕ್ಷಣಿಕ ಕಾರ್ಯಾಗಾರಕ್ಕೆ ಸಂಘಪರಿವಾರ ಅಡ್ಡಿ- ಸಂಘಟಕರ ವಿರುದ್ಧವೇ ಪ್ರಕರಣ ದಾಖಲಿಸಿದ ಪೋಲಿಸ್

ವಿಟ್ಲ : ಇಲ್ಲಿನ ಅಡ್ಯನಡ್ಕ ಎಂಬಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಾಗಾರ ನಡೆಯುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿ ಸಂಘ ಪರಿವಾರ ಅಡ್ಡಿ ಪಡಿಸಿದ ಪ್ರಕರಣವು ವರದಿಯಾಗಿದೆ. ಆದರೆ, ಕಾರ್ಯಾಗಾರ ನಡೆಸಿದ ಸಂಘಟಕರ ವಿರುದ್ಧವೇ ಪೋಲೀಸರು ಪ್ರಕರಣ ದಾಖಲಿಸಿದ್ದನ್ನು ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವ ಜನ ಸಂಘ, ಸುನ್ನೀ ಸ್ಟೂಡೆಂಟ್ ಫೆಡರೇಶನ್ ಮೂಡಂಬೈಲ್ ಅಡ್ಯನಡ್ಕ ಯುನಿಟ್ ಸಮಿತಿ ಖಂಡಿಸಿದೆ.

ಇಲ್ಲಿನ ನುಸುರತ್ತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಷನ್ ವತಿಯಿಂದ ನಡೆಸಲಾದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಪ್ರಚೋದನಕಾರಿ ಭಾಷಣ, ಇಸ್ಲಾಂ ಮತ ಪ್ರವಚನ ನಡೆಸಲಾಗಿದೆ ಎಂದು ಸಂಘ ಪರಿವಾರ ಸಂಘಟನೆಗಳು ಹೊರಿಸಿದ ಸುಳ್ಳಾರೋಪ ಮತ್ತು ನೀಡಿದ ಪ್ರಕರಣವನ್ನು ಸ್ವೀಕರಿಸಿ FIR ದಾಖಲಿಸಿದ ಪೊಲೀಸರ ನಡೆ ಖಂಡನೀಯವಾಗಿದೆ.

ಕಾರ್ಯಾಗಾರಕ್ಕೆ ನೇತೃತ್ವ ನೀಡಿದ ರಫೀಖ್ ಮಾಸ್ಟರ್ ರವರು ಅನೇಕ ಸ್ಥಳಗಳಲ್ಲಿ ಶೈಕ್ಷಣಿಕ ಕಾರ್ಯಾಗಾರ ನಡೆಸಿದ ಇತಿಹಾಸ ಹೊಂದಿರುವ ಉತ್ತಮ ವ್ಯಕ್ತಿಯಾಗಿದ್ದಾರೆ.ಅವರ ವಿರುದ್ಧ ಸುಳ್ಳಾರೋಪ ಹೊರಿಸಿರುವುದು ಖೇದಕರ.

ಅಡ್ಯನಡ್ಕ ಎಂಬ ಈ ಪ್ರದೇಶವು ಶಾಂತಿ, ಸೌಹಾರ್ದತೆಯ ಸುಂದರ ನಾಡಾಗಿದೆ. ಇಲ್ಲಿ ನುಸುರತ್ತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಷನ್ ಸಂಘಟನೆಯು ಅನೇಕ ವರ್ಷಗಳಿಂದ ಉತ್ತಮ ಕಾರ್ಯಗಳನ್ನು ನಡೆಸುತ್ತಿದೆ.ಪ್ರತಿ ವರ್ಷ ಶೈಕ್ಷಣಿಕ ಕಾರ್ಯಾಗಾರವನ್ನು ನಡೆಸುತ್ತಾ ಬಂದಿದೆ.

ಇಂತಹಾ ಉನ್ನತ ಕಾರ್ಯಗಳಿಗೆ ದಕ್ಕೆ ತರುವ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರವನ್ನು ನಡೆಸುತ್ತಿರುವ ಸಂಘ ಪರಿವಾರದ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಡ್ಯನಡ್ಕ,ಮೂಡಂಬೈಲ್ KMJ, SYS, SSF ಸಮಿತಿ ಆಗ್ರಹಿಸಿದೆ.

error: Content is protected !! Not allowed copy content from janadhvani.com