janadhvani

Kannada Online News Paper

ದುಬೈ: ಅತಿ ದೊಡ್ಡ ರೈಲ್ವೆ ಸೇತುವೆ ‘ಅಲ್ ಖುದ್ರಾ’ ನಿರ್ಮಾಣ ಪೂರ್ಣ

ಯುಎಇಯ ರಾಷ್ಟ್ರೀಯ 'ಇತ್ತಿಹಾದ್ ರೈಲ್ವೆ'ಯ ಭಾಗವಾಗಿದೆ ಅಲ್ ಖುದ್ರಾ

ದುಬೈನಲ್ಲಿ ಅತಿ ದೊಡ್ಡ ರೈಲ್ವೆ ಸೇತುವೆ ಅಲ್ ಖುದ್ರಾ(Dubai Al Qudra Bridge) ದ ನಿರ್ಮಾಣ ಪೂರ್ಣಗೊಂಡಿದೆ. ಯುಎಇಯ ರಾಷ್ಟ್ರೀಯ ರೈಲು ಜಾಲವಾದ ಇತ್ತಿಹಾದ್ ರೈಲ್ವೆಯ ಭಾಗವಾಗಿ ಸೇತುವೆಯನ್ನು ನಿರ್ಮಿಸಲಾಗಿದೆ.

ದುಬೈನ ಅಲ್ ಖುದ್ರಾ ಸೇತುವೆಯನ್ನು ದಾಟಿ ದೇಶದ ಅತಿ ದೊಡ್ಡ ಇತ್ತಿಹಾದ್ ರೈಲ್ವೆ (UAE Etihad Rail) ಹಳಿ ಸಾಗಲಿದೆ. ಈ ಸೇತುವೆ ನಿರ್ಮಾಣವು ಮಹತ್ವದ ಹೆಜ್ಜೆಯಾಗಿದೆ ಎಂದು ಇತ್ತಿಹಾದ್ ರೈಲು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !! Not allowed copy content from janadhvani.com