janadhvani

Kannada Online News Paper

ಸುನ್ನೀ ಸ್ಟೂಡೆಂಟ್ಸ್ ಪೇಡರೇಶನ್ (SSF) ಚೆನ್ನಾವರ ಶಾಖೆಗೆ ನವ ಸಾರಥ್ಯ

ಪುತ್ತೂರು: SSF ಚೆನ್ನಾವರ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಚೆನ್ನಾವರ ಫಯಾಝ್ ಹಾಜಿಯವರ ನಿವಾಸದಲ್ಲಿ ಜರುಗಿತು. ನಿಝಾರ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಾಫಿಳ್ ಅಬ್ದುಸ್ಸಲಾಂ ನಿಝಾಮಿಯವರು ಉದ್ಘಾಟಿಸಿದರು. ಕಳೆದ ಒಂದು ವರ್ಷದ ಸಂಘಟನಾ ಚಟುವಟಿಕೆಗಳ ವರದಿ ಮತ್ತು ಲೆಕ್ಕ ಪತ್ರವನ್ನು ಪ್ರ.ಕಾರ್ಯದರ್ಶಿ ಮುನಾಝ್ ಮಂಡಿಸಿದರು . ಬಳಿಕ ಅಧ್ಯಕ್ಷ ಭಾಷಣ ನಿಝಾರ್ ಮುಸ್ಲಿಯಾರ್ ನಡೆಸಿದರು.

ಚುನಾವಣಾ ವೀಕ್ಷಕರಾಗಿ ಸೆಕ್ಟರ್ ನಾಯಕರಾದ ಶಮೀರ್ ಸಖಾಫಿ ಮತ್ತು ರಫೀಕ್ ಪರಾಡ್ ಭಾಗವಹಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯ್ತು.

SSF ನೂತನ ಸಮಿತಿ

ಅಧ್ಯಕ್ಷರು – ನಿಝಾರ್ ಮುಸ್ಲಿಯಾರ್
ಪ್ರಧಾನ ಕಾರ್ಯರ್ಶಿ – ಖಾಲಿದ್ ಮುಕ್ಕೂರು
ಕೋಶಾಧಿಕಾರಿ – ಇಬ್ರಾಹಿಂ ಮುನಾಝ್

Dawa – ವಫೀಖ್ ಅಹ್ಮದ್ ಸಿ.ಎ
QD – ಆಝಿಂ ಪಿ.ವಿ
Rainbow – ಹಾಫಿಳ್ ಶಫೀಖ್ ಅಂಕತಡ್ಕ
Culture – ಮುಹಮ್ಮದ್ ರಾಫಿ
Publication – ನುಐಮಾನ್
media – ತ್ವಾಹಿರ್ ಚೆನ್ನಾವರ
campus – ಮಕ್ಸೂದ್ ಸಿ.ಪಿ
wisdom -ಮುಂಝಿರ್ ಬಿ.

ಕಾರ್ಯಕ್ರಮದಲ್ಲಿ ಫಯಾಝ್ ಹಾಜಿ , ಖಾದರ್ ಹಾಜಿ, ಯೂಸುಫ್ ಹಾಜಿ ರಹ್ಮಾನಿಯಾ , ಮಹಮ್ಮದ್ ಕುಂಡಡ್ಕ , ಅಬ್ದುರ್ರಹ್ಮಾನ್ ಮುಕ್ಕೂರು, ಅಬ್ದುರ್ರಹ್ಮಾನ್ ಅಂಕತಡ್ಕ, ಅಬ್ಬಾಸ್. ಎನ್, ಉಮರ್ ಮೊದಲಾದವರು ಉಸ್ಥಿತಿಯಿದ್ಧರು.

ನೂತನ ಕಾರ್ಯದರ್ಶಿ ಖಾಲಿದ್ ಮುಕ್ಕೂರು ವಂದಿಸಿದರು.

error: Content is protected !! Not allowed copy content from janadhvani.com