janadhvani

Kannada Online News Paper

ಮಸೀದಿ ಆಡಳಿತ ಸಮಿತಿಗಳು ಮೊಹಲ್ಲಾ ಆಡಳಿತ ಸಮಿತಿಗಳಾಗಿ ಬದಲಾಗಬೇಕು: ತೋಕೆ ಉಸ್ತಾದ್

ಸುರತ್ಕಲ್ SMA ಝೋನಲ್ ಸಮಿತಿ ಹಮ್ಮಿಕೊಂಡ ಮೊಹಲ್ಲಾ ಸಬಲೀಕರಣ ಮತ್ತು ಸಮಸ್ಯೆ ಗಳಿಗೆ ಪರಿಹಾರ ಎಂಬ ಅಧ್ಯಯನ ತರಗತಿಯಲ್ಲಿ ಜಮಾಅತ್ ಸಮಿತಿಗಳು ಹೇಗಿರಬೇಕು ? ಆ ಜಮಾಅತ್‌ನ ಖತೀಬರುಗಳ ಹೇಗೆ ಕಾರ್ಯನಿರ್ವಹಿಸ ಬೇಕೆಂದು ಬಹಳ ಅರ್ಥ ಪೂರ್ವವಾಗಿ ಕರ್ನಾಟಕ ಜಂಇಯತುಲ್ ಉಲಮಾ ಕಾರ್ಯದರ್ಶಿ ತೋಕೆ ಮುಹ್‌ಯಿದ್ದೀನ್ ಕಾಮಿಲ್ ಸಖಾಫಿ ಉಸ್ತಾದ್ ವಿವರಿಸಿಕೊಟ್ಟರು.ಮಸೀದಿ ಆಡಳಿತ ಸಮಿತಿಗಳು ಕೇವಲ ಸಂಬಳ ಕೊಡಲು ಸೀಮಿತವಾಗಬಾರದು ಅವರು ಜಮಾಅತ್ ಆಡಳಿತ ಸಮಿತಿಯಾಗಿ ಬದಲಾಗಬೇಕು. ಶಿಕ್ಷಣ, ಧಾರ್ಮಿಕತೆ, ಆರ್ಥಿಕ‌ತೆ, ಕೋಮು ಸಮಸ್ಯೆ, ಮಾದಕದ್ರವ್ಯ, ಯುವ ಸಮೂಹದ ದಾರಿ ತಪ್ಪುವಿಕೆ ಮೊದಲಾದ ಹಲವಾರು ಸಮಸ್ಯೆ ಗಳಿಂದ ಮುಸ್ಲಿಂ ಸಮುದಾಯದ ಬಳಲುತ್ತಿದೆ. ಇದಕ್ಕೆ ಅರ್ಹವಾದ ಪರಿಹಾರ ಕಾಣಬೇಕು.

ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ರೂಪವನ್ನು ಸೂಚಿಸಿ ಅದರಂತೆ ಜಮಾಅತ್ ಸಮಿತಿಗಳು ಮುನ್ನಡೆಯಬೇಕು ಎಂದರು. ಖತೀಬ್ ಗಳು ಮಿಂಬರ್ ಮತ್ತು ರೂಮ್‌ಗೆ ಮಾತ್ರ ಸೀಮಿತವಾಗ ಬಾರದು. ಅವರನ್ನು ಉಪಯೋಗಿಸಿ ಜಮಾಅತ್ ನಲ್ಲಿ ಒಂದು‌ ಅದ್ಭುತ ಕ್ರಾಂತಿ ಜಮಾಅತ್ ಆಡಳಿತ ಸಮಿತಿ ಮಾಡಬೇಕು. ಹಾಗಾದರೆ ಮುಸ್ಲಿಂ ಸಮುದಾಯದ ಭವಿಷ್ಯ ಅತ್ಯಂತ ತೃಪ್ತಿ ಕರವಾಗಿರಬಹುದು ಎಂದು ಅಭಿಪ್ರಾಯ ಪಟ್ಟರು.

ಸಮಸ್ಯೆ ಗಳು ಮತ್ತು ಅದಕ್ಕೆ ಸೂಕ್ತ ಅರ್ಹವಾದ ಪರಿಹಾರ ಸೂಚಿಸುವ ಮೂಲಕ ತೋಕೆ ಸಖಾಫಿ ಯವರು ನಡೆಸಿದ ತರಗತಿ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಇಂತಹ ತರಗತಿಗಳು ಪ್ರತಿ ಮೊಹಲ್ಲ ದಲ್ಲಿ ನಡೆದರೆ ಬದಲಾವಣೆ ಸಾಧ್ಯ ಎಂದು ಸಭೆಗೆ ಹಾಜರಾದ ಜನರು ಅಭಿಪ್ರಾಯ ವಾಗಿತ್ತು.ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಮೊಯಿದಿನ್ ಬಾವ ಇದೊಂದು ಅತ್ಯುತ್ತಮ ತರಗತಿ ಇದನ್ನು ಜಾರಿಗೊಳಿಸಲು ಜಮಾಅತ್ ಗಳು ಮುಂದೆ ಬರಬೇಕೆಂದು ಕರೆ ನೀಡಿದರು.

error: Content is protected !! Not allowed copy content from janadhvani.com