janadhvani

Kannada Online News Paper

ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್

ನಿಂತಿದ್ದ ಮಹಿಳೆಯ ಬ್ಯಾಗ್ ಹಿಡಿದು ಸಹಕರಿಸಿದ ಇಸ್ಹಾಕ್

ಮಂಗಳೂರು: ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಬಸ್ ಪ್ರಯಾಣಿಕರೊಬ್ಬರಿಗೆ ಬಸ್ ಕಂಡೆಕ್ಟರ್ ಮತ್ತು ಸ್ಥಳೀಯ ಸಂಘ ಪರಿವಾರದ ಪುಂಡರು ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು, ಆರೋಪಿಗಳ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಮೂಲರಪಟ್ನ ನಿವಾಸಿ ಇಸಾಕ್ (45) ಎಂದು ಗುರುತಿಸಲಾಗಿದೆ.ನಿನ್ನೆ ಮೂಲರಪಟ್ನ ರಾಯಿ ಎಂಬಲ್ಲಿ ಬಸ್ಸು ಪ್ರಯಾಣಿಕ ಮುಸ್ಲಿಮ್ ವ್ಯಕ್ತಿಯ ಮೇಲೆ,ಸಹ ಪ್ರಯಾಣಿಕೆಯೊಂದಿಗೆ ದುರ್ವರ್ತನೆ ತೋರಿರುವುದಾಗಿ ಅಪಪ್ರಚಾರ ನಡೆಸಿ ಬಸ್ಸು ನಿರ್ವಾಹಕ ಮತ್ತು ಸ್ಥಳೀಯ ಸಂಘ ಪರಿವಾರದ ಪುಂಡರು ತೀವ್ರ ಹಲ್ಲೆ ನಡೆಸಿ ಸಂತ್ರಸ್ತ ಗಾಯಾಳುವನ್ನು ಅಜ್ಞಾತ ಸ್ಥಳದಿಂದ ಪೊಲೀಸರಿಗೆ ನೀಡಿದ ಘಟನೆಯ ಬಗ್ಗೆ ನಿನ್ನೆಯೇ ಪೊಲೀಸರಿಗೆ ಮಾಹಿತಿ ಇದ್ದರೂ ಮತ್ತು ಸಂತ್ರಸ್ತ ವ್ಯಕ್ತಿಯು ಪೊಲೀಸು ಸ್ಟೇಶನ್ ನಲ್ಲಿ ದೂರು ನೀಡಲು ತೆರಳಿದರೂ ಕೂಡಾ ಬೆಳಿಗ್ಗಿನಿಂದ ಸಂಜೆಯವರೆಗೆ ಸ್ಟೇಶನ್ ನಲ್ಲಿಯೇ ಇರಿಸಿ ಕ್ರಮ ಕೈಗೊಳ್ಳದೇ ಈ ಬಗ್ಗೆ ಮೌನ ವಹಿಸಿದ್ದು,ಆರೋಪಿತರ ವಿರುದ್ಧ ಯಾವುದೇ ಕಾನೂನು ಪ್ರಕ್ರಿಯೆ ನಡೆಸದೆ ಇರುವುದನ್ನು ಅವರು ಖಂಡಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿರುವ ಈ ಹಂತದಲ್ಲಿ ಸಂಘ ಪರಿವಾರ ಜಿಲ್ಲೆಯ ಕೋಮು ತಾಪಮಾನವನ್ನು ಬಿಸಿ ಇಡುವ ಹುನ್ನಾರದಿಂದ ಇಂತಹ ಅನೈತಿಕ ಗಿರಿಯನ್ನು ಉತ್ತೇಜಿಸುತ್ತಿರುವುದು ಸ್ಪಷ್ಟ. ಜಿಲ್ಲೆಯಲ್ಲಿ ಇತ್ತೀಚೆಗೆ ಹಲವಾರು ಅನೈತಿಕ ಗೂಂಡಾಗಿರಿ ನಡೆಯುತ್ತಿದ್ದರೂ ಪೊಲೀಸರು ನಿಯಂತ್ರಣಗೊಳಿಸುವಲ್ಲಿ ವಿಫಲ ಹೊಂದಿರುತ್ತಾರೆ.

ಈ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕಾನೂನು ಪ್ರಕ್ರಿಯೆ ನಡೆಸಬೇಕು ಮತ್ತು ಬಸ್ಸು ನಿರ್ವಾಹಕ ಮತ್ತು ಇತರ ಆರೋಪಿತರನ್ನು ಶೀಘ್ರ ಬಂಧಿಸಬೇಕು. ಖಾಸಗಿ ಸಾರಿಗೆ ಸಿಬ್ಬಂದಿಗಳು ಇಂತಹ ಕೋಮು ಪ್ರಚೋದಿತ ವ್ಯವಸ್ಥೆ ಸೃಷ್ಟಿಸುವುದರ ವಿರುದ್ಧ ತೀವ್ರ ಜಾಗೃತಿ ಮತ್ತು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ನಿಂತ ಮಹಿಳೆಯ ಬ್ಯಾಗ್ ಹಿಡಿದು ಸಹಕರಿಸಿದ ಇಸ್ಹಾಕ್

ವಿಪರೀತ ಪ್ರಯಾಣಿಕ ದಟ್ಟಣೆ ಉಂಟಾದ ಸಂದರ್ಭದಲ್ಲಿ ಇಸಾಕ್ ಅವರು ಕುಳಿತಿದ್ದ ಸೀಟಿನ ಬಳಿ ನಿಂತಿದ್ದ ಮಹಿಳೆಯೊಬ್ಬರು ಬ್ಯಾಗ್ ಹಿಡಿದುಕೊಳ್ಳುವಂತೆ ತಿಳಿಸಿದ್ದಾರೆ. ಬಳಿಕ ಮಹಿಳೆ ತಾನು ಇಳಿಯುವ ಜಾಗದಲ್ಲಿ ಇಸಾಕ್ರಿಂದ ಬ್ಯಾಗ್ ಪಡೆದು ತೆರಳಿದ್ದಾರೆ.

ಇದಾದ ಬಳಿಕ ಬಸ್ ಕಂಡೆಕ್ಟರ್ ಇಸಾಕ್ ಬಳಿ ಬಂದು ನೀವು ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದೀರಿ ಎಂದು ಆರೋಪಿಸಿ ಬಸ್ನಿಂದ ಕೆಳಗಿಳಿಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗ್ತಿದೆ. ಹಲ್ಲೆ ವೇಳೆ ಬಸ್ ಕಂಡಕ್ಟರ್ ಕೆಲವರಿಗೆ ಮೊಬೈಲ್ನಲ್ಲಿ ಕರೆ ಮಾಡಿ ಕೆಲವು ಯುವಕರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಕಂಡಕ್ಟರ್ ಯುವಕರ ಗುಂಪಿಗೆ ಇಸಾಕ್ರನ್ನು ಹಸ್ತಾಂತರಿಸಿದ್ದಾರೆ.ಆ ಯುವಕರ ಗುಂಪು ಇಸಾಕ್ರನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ಇಸಾಕ್ ತೀವ್ರ ಅಸ್ವಸ್ಥರಾದ ಮೇಲೆ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಇಸಾಕ್ರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರು ಹೇಳುವುದೇನು?:ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಾಣೆ, ಈ ಹಲ್ಲೆ ಬಗ್ಗೆ ಗಮನಕ್ಕೆ ಬಂದಿದೆ. ವಿಡಿಯೋ ಪರಿಶೀಲಿಸಲಾಗಿದೆ. ಆಸ್ಪತ್ರೆಯಿಂದ ವರದಿ ಬಂದ ಬಳಿಕ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

error: Content is protected !! Not allowed copy content from janadhvani.com