‘ಖತಾರ್ ಬಿಕ್ಕಟ್ಟು’ ಮಧ್ಯಸ್ಥಿಕೆ ಮುಂದುವರಿಕೆ, ಜಿಸಿಸಿ ಯ ಅಸ್ತಿತ್ವದ ಬಗ್ಗೆ ಅನುಮಾನ ಬೇಡ- ಕುವೈಟ್

ದೋಹ: ಖತ್ತರಿನೊಂದಿಗೆ ಬಿಕ್ಕಟ್ಟು ನೆಲೆನಿಂತಿರುವ ಸಂದರ್ಭದಲ್ಲಿ ಜಿಸಿಸಿಯ ಚಟುವಟಿಕೆಗಳಿಗೆ ತಡೆ ಅಥವಾ ಸ್ಥಗಿತಗೊಳಿಸಬಾರದೆಂದು ಕುವೈಟ್ ಸಂಬಂಧಪಟ್ಟವರೊಂದಿದೆ ಅಪೇಕ್ಷಿಸಿಸಿದೆ.

ಕುವೈಟ್ ನ ವಿದೇಶಾಂಗ ಸಹ ಸಚಿವ ಖಾಲಿದ್ ಅಲ್ ಜರಲ್ಲಾ ಈ ವಿಷಯವನ್ನು ವ್ಯಕ್ತಪಡಿಸಿದ್ದಾರೆ. ಮಧ್ಯಸ್ಥಿಕೆ ಮುಂದುವರಿಯುತ್ತಿದೆ, ಜಿಸಿಸಿಯ ಅಸ್ತಿತ್ವದ ಬಗ್ಗೆ ಕುವೈಟ್ ‌ಗೆ ಶುಭ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

ಜನವರಿ ಪ್ರಥಮ ವಾರದಲ್ಲಿ ಗಲ್ಫ್ ಪಾರ್ಲಿಮೆಂಟ್ ಸ್ಪೀಕರ್ ರ ಸಭೆ ನಡೆಯುಲಿರುವ  ಹಿನ್ನಲೆಯಲ್ಲಿ ದರ್ಭದಲ್ಲಿ ಕುವೈಟ್ ಈ ಹೇಳಿಕೆ ನೀಡಿದೆ. ಜನವರಿ ಎಂಟು, ಒಂಬತ್ತು ತಾರೀಖುಗಳಲ್ಲಿ ಪ್ರಸ್ತುತ ಸಭೆ ನಡೆಯಲಿದೆ ಎಂದು ಅಲ್ ಜಝೀರ ವರದಿ ಮಾಡಿದೆ.

ಈ ಹಿಂದೆ ಕುವೈಟ್ ನಲ್ಲಿ ನಡೆದ ಜಿಸಿಸಿ ಅಧಿವೇಶನದಲ್ಲಿ ಸೌದಿ ಐಕ್ಯರಂಗದ ಆಡಳಿತಗಾರರು ಭಾಗವಹಿಸಿರಲಿಲ್ಲ. ಈ ಕಾರಣಕ್ಕಾಗಿ ಎರಡು ದಿನಗಳ ಕಾಲ ನಡೆಯಬೇಕಾಗಿದ್ದ ಅಧಿವೇಶನವನ್ನು ಒಂದೇ ದಿನದಲ್ಲಿ ಮುಗಿಸಲಾಗಿತ್ತು.ಖತ್ತರ್ ಅಮೀರ್ ಮಾತ್ರ ಭಾಗವಹಿಸಿದ್ದರು. ಭಯೋತ್ಪಾದಕ ಸಂಘಟನೆಯೊಂದಿಗೆ ನಂಟಿದೆ ಎನ್ನುವ ಆರೋಪ ಹೊರಿಸಿ ಖತ್ತರ್ ಮೇಲೆ ಸೌದಿ ಐಕ್ಯರಂಗವು ಜೂನ್ ಐದಕ್ಕೆ ಬಹಿಷ್ಕಾರ ಹೇರಿದ ಅಂದಿನಿಂದ ಕುವೈಟ್ ಮಧ್ಯಸ್ಥಿಕೆ ವಹಿಸುತ್ತಿದೆ. ಅಮೆರಿಕ ಸಮೇತ ಹಲವು ದೇಶಗಳು ಮಧ್ಯಸ್ಥಿಕೆಯಿಂದ ಪರಿಹಾರ ಕಾಣಲು ಅಪೇಕ್ಷಿಸಿದರೂ ಸೌದಿ ಒಪ್ಪಲಿಲ್ಲ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!