janadhvani

Kannada Online News Paper

ಕುವೈಟ್: ಸಾರ್ವಜನಿಕ ಕ್ಷಮಾಧಾನ ಅಂತ್ಯ- ಬಿರುಸಿನ ಶೋಧ ಕಾರ್ಯ

ಕುವೈಟ್ ಸಿಟಿ :ಕುವೈಟ್ ನಲ್ಲಿ ಅನಧಿಕೃತ ವಲಸಿಗರಿಗೆ ನೀಡಲಾಗಿದ್ದ ಸಾರ್ವಜನಿಕ ಕ್ಷಮಾಧಾನ ಏಪ್ರಿಲ್ 22 ಕ್ಕೆ ಕೊನೆಗೊಂಡಿದೆ. ದೇಶದಲ್ಲಿ ಇನ್ನೂ  1,10,000 ಅನಧಿಕೃತ ವಲಸಿಗರಿದ್ದಾರೆ ಎಂದು ಗೃಹಸಚಿವಾಲಯ ತಿಳಿಸಿದೆ. 16,000 ಭಾರತೀಯರು ಸಾರ್ವಜನಿಕ ಕ್ಷಮಾಧಾನವನ್ನು ಬಳಸಿದ್ದಾರೆಂದು ಭಾರತೀಯ ದೂತಾವಾಸ ತಿಳಿಸಿದೆ.

ಏಳು ವರ್ಷಗಳ ಬಳಿಕ, ದೇಶದಲ್ಲಿ ವಾಸಿಸುತ್ತಿರುವ ಅಕ್ರಮ ನಿವಾಸಿಗಳಿಗೆ ಸರ್ಕಾರ ಸಾರ್ವಜನಿಕವಾಗಿ ಕ್ಷಮಾಧಾನವನ್ನು ಪ್ರಕಟಿಸಿದ್ದವು.ಇದು ಜನವರಿ 29 ರಿಂದ ಒಂದು ತಿಂಗಳ ಮಟ್ಟಿಗೆ ಆರಂಭಗೊಡಿತ್ತು, ನಂತರ ಅದನ್ನು ಏಪ್ರಿಲ್ 22 ರ ವರೆಗೆ ವಿಸ್ತರಿಸಲಾಯಿತು.

ಸಾರ್ವಜನಿಕ ಕ್ಷಮಾಧಾನ ಎನ್ನುವುದು ಕಾನೂನು ಉಲ್ಲಂಘಿಸುವವರನ್ನು ಯಾವುದೇ ದಂಡ ಪಾವತಿಸದೆ ದೇಶತೊರೆಯಲು  ,ಇಲ್ಲವೇ ತನ್ನ ವಾಸ ದಾಖಲೆಗಳನ್ನು ನವೀಕರಿಸಿ ಕಾನೂನುಬದ್ಧವಾಗಿ ದೇಶದಲ್ಲಿ ನೆಲೆಸಲು ಅನುಮತಿಸುವ ಒಂದು ಕಾರ್ಯವಾಗಿದೆ.

ಗೃಹ ಸಚಿವಾಲಯದ ದಾಖಲೆಗಳ ಪ್ರಕಾರ ದೇಶದಲ್ಲಿ 1,54,000 ಅಕ್ರಮ ವಲಸಿಗರಿದ್ದರು.ಇವರ ಪೈಕಿ ಕೇವಲ 50,000 ಜನರು ಮಾತ್ರ ಅದರ ಪ್ರಯೋಜನ ಪಡೆದಿದ್ದಾರೆ. ಉಳಿದವರಿಗಾಗಿ ಅಧಿಕಾರಿಗಳು ಶೋಧ ಕಾರ್ಯವನ್ನು ಬಲಪಡಿಸಿದ್ದಾರೆ ಎಂದು ಸಚಿವಾಲಯ ವ್ಯಕ್ತಪಡಿಸಿದೆ. ಸೆರೆ ಹಿಡಿಯಲ್ಪಟ್ಟವರನ್ನು ಕಪ್ಪು ಪಟ್ಟಿಗೆ ಸೇರಿಸಿ, ಬೆರಳಚ್ಚು ಪಡೆದು ಮತ್ತೆ ದೇಶವನ್ನು ಪ್ರವೇಶಿಸದಂತೆ ಗಡೀಪಾರು ಮಾಡಲಾಗುವುದು.ಸಾರ್ವಜನಿಕ ಕ್ಷಮಾಧಾನವನ್ನು ಇನ್ನು ಶೀಘ್ರದಲ್ಲಿ ಯಾರೂ ನಿರೀಕ್ಷಿಸುವ ಅಗತ್ಯವಿಲ್ಲ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ದೂತಾವಾಸದ ಪ್ರಕಾರ,ಸಾರ್ವಜನಿಕ ಕ್ಷಮಾಧಾನ ಸಮಯದಲ್ಲಿ 11,000 ತುರ್ತು ಪ್ರಮಾಣಪತ್ರಗಳನ್ನು ಅನುಮತಿಸಲಾಗಿತ್ತು. ಲೆಕ್ಕ ಪ್ರಕಾರ ದೇಶದಲ್ಲಿ 30,000 ಕ್ಕಿಂತ ಹೆಚ್ಚು ಭಾರತೀಯರು ಕಾನೂನು ಬಾಹಿರವಾಗಿ ದೇಶದಲ್ಲಿ ನೆಲೆಸಿದ್ದರು. ಅವರಲ್ಲಿ ಅರ್ಧದಷ್ಟು ಜನರು ಇನ್ನೂ ದೇಶದಲ್ಲಿ ವಾಸಿಸುತ್ತಿದ್ದಾರೆ.

ಹಣ ಸಂಗ್ರಹ ಮಾಡುವವರನ್ನು ಗಡೀಪಾರು ಮಾಡಲಾಗುವುದು.

ರಮಝಾನ್ ಸಮಯದಲ್ಲಿ ಹಣ ಸಂಗ್ರಹ ಮಾಡುವ ವಿದೇಶಿಯರನ್ನು ದೇಶದಿಂದ ಗಡಿಪಾರು ಮಾಡಲಾಗುವುದು ಎಂದು ಕುವೈತ್ ನ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಹೆಚ್ಚಿನ ಬೆಲೆಗಳನ್ನು ವಿಧಿಸುವ ವ್ಯಾಪಾರಿಗಳ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.ಚಾರಿಟಿ ಚಟುವಟಿಕೆಗಳಿಗಾಗಿ ಕಾನೂನುಬದ್ಧ ಸಂಘಟನೆಗಳು  ಮತ್ತು ವ್ಯವಸ್ಥೆಗಳು ಇನ್ನೂ ದೇಶದಲ್ಲಿವೆ.ಈ ಪರಿಸ್ಥಿತಿಯಲ್ಲಿ ಹಣ ಸಂಗ್ರಹಿಸುವುದನ್ನು ಅನಧಿಕೃತ ಎಂದು ಪರಿಗಣಿಸಲಾಗುವುದು.ವಿದೇಶಿ ವ್ಯವಹಾರಗಳ ಸಚಿವಾಲಯ ಮತ್ತು ಪುರಸಭೆಯ ಅಧಿಕಾರಿಗಳು ಮತ್ತು ಇತರ ಸರ್ಕಾರಿ ಇಲಾಖೆಗಳು ಅಕ್ರಮ ಹಣ ಸಂಗ್ರಹದ ವಿರುದ್ಧ ಹೋರಾಟದಲ್ಲಿ ಸಹಕರಿಸಲಿದೆ.

ಔಖಾಫ್ ಸಚಿವಾಲಯವು ಮೂಲ ನಿವಾಸಿಗಳು ಮತ್ತು ವಿದೇಶಿಯರನ್ನು ಅಕ್ರಮ ಹಣ ಸಂಗ್ರಹಿಸುವುಸುದನ್ನು ಗಮನಿಸಿದರೆ ತಿಳಿಸುವಂತೆ ಕೇಳಿಕೊಂಡಿದೆ. ವಿದೇಶೀ ಪ್ರಜೆಗಳು ಬಂಧನಕ್ಕೊಳಗಾದರೆ ಅವರನ್ನು ಗಡೀಪಾರು ಮಾಡಲಾಗುವುದು.ಇಂತಹ ಪ್ರಕರಣಗಳಲ್ಲಿ, ಸ್ವದೇಶಿಗಳು ಬಂಧನಕ್ಕೊಳಗಾದರೆ ಅವರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಮಾಡಲಾಗುತ್ತದೆ.

error: Content is protected !! Not allowed copy content from janadhvani.com