ಕುವೈತ್: ಸಿರಿಯಾದಲ್ಲಿ ಮುಗ್ಧ ನಾಗರಿಕರ ವಿರುದ್ಧ ಆಕ್ರಮಣವು ಅಧಿಕಗೊಂಡಿದ್ದು, ಕದನ ವಿರಾಮದ ಬೇಡಿಕೆಯೊಂದಿಗೆ ಕುವೈತ್ ಮತ್ತೊಮ್ಮೆ ರಂಗ ಪ್ರವೇಶನ ಗೈದಿದೆ. ಸಿರಿಯನ್ ವಿಷಯದಲ್ಲಿ ಯುಎನ್ ಸೆಕ್ಯುರಿಟಿ ಕೌನ್ಸಿಲ್ ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಕುವೈಟ್ ನ ಪ್ರತಿನಿಧಿ ಬದರ್ ಅಬ್ದುಲ್ಲ ಅಲ್-ಮುನೀಖ್ ಈ ಬೇಡಿಕೆ ಇಟ್ಟಿದ್ದಾರೆ.
ಎಲ್ಲಾ ಅಂತರರಾಷ್ಟ್ರೀಯ ಮಾನದಂಡ ಗಳನ್ನು ಗಾಳಿಗೆತೂರಿ ನಾಗರಿಕರ ವಿರುದ್ಧ ಬಶರ್ ಸೇನೆಯು, ರಾಸಾಯನಿಕ ದಾಳಿ ನಡೆಸುತ್ತಿದ್ದು, ಪ್ರತೀ ದಾಳಿಯಲ್ಲೂ ನೂರಾರು ಜನರು ಮೃತಪಟ್ಟು, ಸಾವಿರಾರು ಜನರು ಗಾಯಗೊಂಡಿದ್ದಾರೆ.
ಸ್ವಯಂಸೇವಕ ಗುಂಪುಗಳಿಗೆ ಕೊಲ್ಲಲ್ಪಟ್ಟವರನ್ನು ಸಮಾಧಿ ಮಾಡಲು ಅಥವಾ ಗಾಯಗೊಂಡವರಿಗೆ ಚಿಕಿತ್ಸೆಯನ್ನು ನೀಡಲು ಕೂಡಾ ಸಾಧ್ಯವಾಗುತ್ತಿಲ್ಲ.ಈ ಅವಸ್ಥೆಯಲ್ಲಿ ಸಂತ್ರಸ್ತರಿಗೆ ಮಾನವೀಯ ನೆರವು ನೀಡಲು ಸಿರಿಯಾದಲ್ಲಿ ಕಡಿಮೆ ಪಕ್ಷ ಒಂದು ತಿಂಗಳ ಮಟ್ಟಿಗಾದರೂ ಕದನ ವಿರಾಮ ಘೋಷಿಸುವಂತೆ ಕುವೈತ್ ಕರೆ ನೀಡಿದೆ.