janadhvani

Kannada Online News Paper

ಜಿಲ್ಲಾಡಳಿತವು ‘ಒಂದೇ ಕುಲ, ಮತ, ದೇವರು’ ದಾರ್ಶನಿಕ ಧ್ಯೇಯ ವಾಕ್ಯ ಘೋಷಿಸಿ ಶಾಂತಿ ಸ್ಥಾಪಿಸಲಿ- ಮುಸ್ಲಿಮ್ ಒಕ್ಕೂಟ

ವಾಣಿಜ್ಯ ಮಳಿಗೆಗಳು ಜಿಲ್ಲೆಯಿಂದ ವಲಸೆ ಪ್ರಾರಂಭಿಸಿದೆ.ಕಳೆದ ಹಲವು ದಿನಗಳಿಂದ ಜನರಿಗೆ ಬೇಡದ ನಿಷೇದಾಜ್ಞೆ ಜಾರಿಯಲ್ಲಿದೆ.

ಮಂಗಳೂರು: ಕರಾವಳಿ ಕರ್ನಾಟಕದ ವಿಷಯದಲ್ಲಿ ರಾಜ್ಯದ ಜನರು ಹೆಮ್ಮೆ ಪಡುವ ಕಾಲವೊಂದಿತ್ತು. ಆದರೆ ಇತ್ತೀಚಿಗಿನ ಹಲವು ದಶಕಗಳಿಂದ ಕರಾವಳಿ ಜಿಲ್ಲೆಯ ಜನತೆಯನ್ನು ಮತೀಯ ಧ್ರುವೀಕರಣ ಕಾರಣದಿಂದ ವಿಭಜಿಸುತ್ತಾ ಬಂದು, ಜನರು ಪ್ರಸ್ತುತ ಸಾಮಾನ್ಯ ಬದುಕು ನಿರ್ವಹಿಸುವ ಕನಿಷ್ಠ ಸಾಮರ್ಥ್ಯದಿಂದ ವಂಚಿತಾರಗಿದ್ದಾರೆ.

ಜಿಲ್ಲೆಯ ಉದ್ಯಮ, ಶಿಕ್ಷಣ, ಶಾಂತಿ ಸುವ್ಯವಸ್ಥೆ ದಿನೇ ದಿನೇ ಕುಸಿಯುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ವಾಣಿಜ್ಯ ಮಳಿಗೆಗಳು ಜಿಲ್ಲೆಯಿಂದ ವಲಸೆ ಪ್ರಾರಂಭಿಸಿದೆ.ಕಳೆದ ಹಲವು ದಿನಗಳಿಂದ ಜನರಿಗೆ ಬೇಡದ ನಿಷೇದಾಜ್ಞೆ ಜಾರಿಯಲ್ಲಿದೆ.

ಜನತೆಗೆ ಜಿಲ್ಲಾಡಳಿತ, ಸರ್ಕಾರ ಮತ್ತು ಸರ್ಕಾರೇತರ ಶಿಕ್ಷಣ ಸಂಸ್ಥೆಗಳು, ಸ್ವಯಂ ಸೇವಕರ ನೆರವಿನಿಂದ ಜನತೆಗೆ ನೈತಿಕ ಉತ್ತೇಜನ ನೀಡಿ ಸಾಮರಸ್ಯ ಬೆಸೆಯಲು ಖ್ಯಾತ ದಾರ್ಶನಿಕರಾದ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪ್ರಸಿದ್ಧ ಮಾತುಗಳನ್ನು ಅಂಗೀಕರಿಸಿ ‘ ಒಂದೇ ಕುಲ – ಮತ – ದೇವರು ‘ ಎಂಬ ಧ್ಯೇಯ ವಾಕ್ಯ ಘೋಷಣೆಯ ಪ್ರಚಾರ ಮೂಲಕ ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಲಿ.

ಜನರು ಅತ್ಯಂತ ಶೀಘ್ರ ಸಹಜ ಜೀವನಕ್ಕೆ ಮರಳುವ ಶಾಂತಿ ಸುವ್ಯವಸ್ಥೆ ಸ್ಥಾಪನೆಗೆ ಜಿಲ್ಲಾಡಳಿತ ಮಾದರಿಯಾಗಲಿ, ಅದರೊಂದಿಗೆ ಜನರು ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರ ವಹಿಸಿ,ಗೊಂದಲಗಳಿಂದ ದೂರ ಉಳಿಯಲು ಪ್ರಯತ್ನಿಸಲಿ ಎಂದು ಕೆ.ಅಶ್ರಫ್.
(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com