janadhvani

Kannada Online News Paper

ಎಮಿರೇಟ್ಸ್ ಐಡಿ ಯಲ್ಲಿನ ಬದಲಾವಣೆ ಬಗ್ಗೆ ICA ಗೆ ಮಾಹಿತಿ ನೀಡಬೇಕು

ಇದು ಯುಎಇ ಪ್ರಜೆಗಳು ಮತ್ತು ವಿದೇಶಿಯರಿಗೆ ಸಮಾನವಾಗಿ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಮಾಹಿತಿ ನೀಡಿದ್ದಾರೆ.

ಅಬುಧಾಬಿ: ಎಮಿರೇಟ್ಸ್ ಐಡಿಯಲ್ಲಿ ತಿದ್ದುಪಡಿ ನಡೆಸಿದ್ದಲ್ಲಿ 30 ದಿನಗಳ ಒಳಗಾಗಿ ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್‌ಶಿಪ್ (ICA)ಗೆ ವರದಿ ಮಾಡುವ ಅಗತ್ಯವಿದೆ ಯುಎಇ ಸರ್ಕಾರ ಸ್ಪಷ್ಟಪಡಿಸಿದೆ. ಇದು ಯುಎಇ ಪ್ರಜೆಗಳು ಮತ್ತು ವಿದೇಶಿಯರಿಗೆ ಸಮಾನವಾಗಿ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಮಾಹಿತಿ ನೀಡಿದ್ದಾರೆ.

ಐಡಿ ಕಾರ್ಡ್ ಮತ್ತು ಜನಸಂಖ್ಯೆ ನೋಂದಣಿ ವ್ಯವಸ್ಥೆಯಲ್ಲಿನ ಮಾಹಿತಿಯನ್ನು ನವೀಕರಿಸುವುದು ಹೊಸ ಪ್ರಕ್ರಿಯೆಯ ಉದ್ದೇಶವಾಗಿದೆ. ಯುಎಇ ಪ್ರಜೆಗಳು ಮತ್ತು ವಿದೇಶಿ ನಿವಾಸಿಗಳಿಗೆ ಮಾನ್ಯವಾದ ಎಮಿರೇಟ್ಸ್ ಐಡಿ ಕಾರ್ಡ್ ಕಡ್ಡಾಯವಾಗಿದೆ. ಐಡಿ ನವೀಕರಿಸುವಲ್ಲಿ ವಿಳಂಬವಾದರೆ ದಂಡ ವಿಧಿಸಲಾಗುತ್ತದೆ.

ಮಾನ್ಯವಾದ ID ಕಾರ್ಡ್‌ ನಲ್ಲಿ ಬದಲಾವಣೆಗಳನ್ನು ಮಾಡಲು ICA. ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದಕ್ಕಾಗಿ ಗ್ರಾಹಕರಿಗೆ 50 ದಿರ್ಹಮ್‌ಗಳ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.

ಯುಎಇ ನಿವಾಸ ವೀಸಾವನ್ನು ರದ್ದುಗೊಳಿಸಲು ಅಥವಾ ಉದ್ಯೋಗವನ್ನು ಬದಲಾಯಿಸಲು ID ಕಾರ್ಡ್‌ಗಳನ್ನು ಆಯಾ ಜನರಲ್ ಡೈರೆಕ್ಟರೇಟ್ ಫಾರ್ ರೆಸಿಡೆನ್ಸಿ ಆಂಡ್ ಫಾರಿನರ್ಸ್ ಅಫೇರ್ಸ್ (ಜಿಡಿಆರ್‌ಎಫ್‌ಎ) ವಿಭಾಗಕ್ಕೆ ಹಸ್ತಾಂತರಿಸಬೇಕು. GDRFA ಕಾರ್ಡ್ ಅನ್ನು ಐಸಿಎ ಇಲಾಖೆಗೆ ಹಸ್ತಾಂತರಿಸಲಿದೆ.

error: Content is protected !! Not allowed copy content from janadhvani.com