ಆನ್ ಲೈನ್ ಮೂಲಕ ವಿಚ್ಚೇದನ ಸಮ್ಮತಿ-ಬಾಂಬೆ ಹೈಕೋರ್ಟ್ ಅನುಮೋದನೆ

ಮುಂಬೈ, – ಪತಿಗೆ ವಿಚ್ಛೇದನ ನೀಡುವ ಕುರಿತಂತೆ ತನ್ನ ಸಮ್ಮತಿಯನ್ನು ಸ್ಕೈಫ್ (ಆನ್ ಲೈನ್ ವ್ಯವಸ್ಥೆ) ಮೂಲಕ ದಾಖಲಿಸಲು ಬಾಂಬೆ ಹೈಕೋರ್ಟ್ ಅನಿವಾಸಿ ಮಹಿಳೆಗೆ ಅನುಮತಿ ನೀಡಿದೆ.

ಅಮೆರಿಕಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಮಹಿಳೆ, ಪರಸ್ಪರ ಸಮ್ಮತಿಯೊಂದಿಗೆ ವಿವಾಹ ವಿಚ್ಛೇದನಕ್ಕಾಗಿ ತನ್ನ ಸಮ್ಮತಿಯನ್ನು ಆನ್ ಲೈನ್ ಮೂಲಕ ಕಳುಹಿಸಿದಕ್ಕೆ ತಿರಸ್ಕರಿಸಿದ್ದ ಮುಂಬೈನ  ಕೌಟುಂಬಿಕ ನ್ಯಾಯಾಲಯ, ಮಹಿಳೆ ಖುದ್ದಾಗಿ ಹಾಜರಾಗಿ ತನ್ನ ಸಮ್ಮತಿಯನ್ನು ದಾಖಲಿಸಬೇಕು ಎಂದು ಹೇಳಿ ಆನ್ ಲೈನ್ ಸಮ್ಮತಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿತ್ತು.

ಕೌಟುಂಬಿಕ ನ್ಯಾಯಾಲಯದ ಈ ನಿಲುವನ್ನು ಪ್ರಶ್ನಿಸಿದ್ದ ಮಹಿಳೆ ಬಾಂಬೆ ಹೈ ಕೋರ್ಟ್ಡನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಈ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಭಾರತೀ ಡಾಂಗೆ, ಕೌಟುಂಬಿಕ ನ್ಯಾಯಾಲಯದ ಈ ತೀರ್ಪನ್ನು ವಜಾಗೊಳಿಸಿ, ಮಹಿಳೆಯ ತಂದೆಗೆ ಮಹಿಳೆಯ ಪರವಾಗಿ ಪವರ್ ಆಫ್ ಅಟಾರ್ನಿಯೊಂದಿಗೆ ಈ ಸಂಬದಿತ ವ್ಯವಹಾರದಲ್ಲಿ ಮುಂದುವರೆಯಲು ಅನುಮತಿಸಿದೆ. ಹಾಗೆಯೇ ಮಹಿಳೆಯ ಸಮ್ಮತಿಯನ್ನು ಆನ್ ಲೈನ್‌ನಲ್ಲಿ ದಾಖಲಿಸಿಕೊಳ್ಳಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿರುವ ನ್ಯಾಯಧೀಶೆ ಆನ್ ಲೈನ್ ಮೂಲಕ ನೀಡುವ ಮಹಿಳೆಯ ಸಮ್ಮತಿಯನ್ನು ದಾಖಲಿಸಿಕೊಳ್ಳಲು ಸೂಚಿಸಿದೆ.

2016ರಲ್ಲಿ ಮದುವೆಯಾಗಿದ್ದ ಪತಿ ಪತ್ನಿ ಕಳೆದ ವರ್ಷ ವಿಚ್ಛೇಧನಕ್ಕೆ ಪರಸ್ಪರರೂ ಒಪ್ಪಿಕೊಂಡಿದ್ದರು. ಆದರೆ ಮಹಿಳೆ ಅಮೆರಿಕಾದಲ್ಲಿ ನೆಲೆಸಿರುವ ಕಾರಣ ತನ್ನ ಸಮ್ಮತಿ ಖುದ್ದಾಗಿ ಸೂಚಿಸಲು ಸಾಧ್ಯವಾಗಿರಲಿಲ್ಲ.

Leave a Reply

Your email address will not be published. Required fields are marked *

error: Content is protected !!