ಅತ್ಯಾಚಾರಿಗಳ ವಿರುದ್ದ ಕಠಿಣ ಕಾನೂನು ಜಾರಿಯಾಗಬೇಕು – ಶಫೀಕ್ ತಿಂಗಳಾಡಿ

ಬನ್ನೂರು :  ಕಾಶ್ಮೀರದ ಕಥುವಾ ಎಂಬಲ್ಲಿ ಆಸಿಫಾ ಎಂಬ 8 ವರ್ಷದ ಬಾಲಕಿಯನ್ನು ದೇವಸ್ಥಾನದಲ್ಲಿ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣವನ್ನು ಖಂಡಿಸಿ ಎಸ್ಸೆಸ್ಸೆಫ್ ಬನ್ನೂರು ಶಾಖೆ ವತಿಯಿಂದ ಪ್ರತಿಭಟನೆಯು ಬನ್ನೂರು ಜಂಕ್ಷನಿನಲ್ಲಿ ನಡೆಯಿತು

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ಸೆಸ್ಸೆಫ್ ಪುತ್ತೂರು ಡಿವಿಜನ್ ಪ್ರಧಾನ ಕಾರ್ಯದರ್ಶಿ ಶಫೀಕ್ ತಿಂಗಳಾಡಿ ಮಾತನಾಡಿ ದೇಶವೇ ತಲೆ ತಗ್ಗಿಸುವಂತೆ ಮಾಡಿರುವ ದುರುಳರ ಪೈಶಾಚಿಕ ಕೃತ್ಯದ ವಿರುದ್ಧ ಜಾತಿ ಧರ್ಮ ಬಿಟ್ಟು ಎಲ್ಲರೂ ಧ್ವನಿಗೊಡಿಸಬೇಕು,ಅತ್ಯಾಚಾರ ಕೊಲೆ ನಡೆಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನುಗಳು ಜಾರಿಯಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸೈಯದ್ ಉಮರ್ ತಂಙಳ್ ಬನ್ನೂರು, ಎಸ್ ವೈ ಎಸ್ ಬನ್ನೂರು ಬ್ರಾಂಚ್ ಕಾರ್ಯದರ್ಶಿ ಅಬ್ದುಲ್ಲಾ ಮುಸ್ಲಿಯಾರ್,ಸುನ್ನೀ ಸೆಂಟರ್ ಬನ್ನೂರು ಅಧ್ಯಕ್ಷರಾದ ಫಾರೂಕ್ ಬನ್ನೂರು , ಎಸ್ಸೆಸ್ಸೆಫ್ ಬನ್ನೂರು ಶಾಖೆ ಉಪಾಧ್ಯಕ್ಷರಾದ ಸಮೀರ್, ಮಜೀದ್, ಕಾರ್ಯದರ್ಶಿ ಇಬ್ರಾಹಿಂ ಖಲೀಲ್,ಪುತ್ತೂರು ಎಸ್ಸೆಸ್ಸೆಫ್ ಪ್ರಮುಖರಾದ ಸಲೀಂ ಮುರ , ಹಂಝ ಸಂಪ್ಯ ,ಜಿ,ಸಿ,ಸಿ ಸುನ್ನೀ ಫ್ರೆಂಡ್ಸ್ ಪ್ರಮುಖರಾದ ಸಯ್ಯದ್ ಆಬಿದ್ ತಂಙಳ್ ದುಬೈ,ಬಶೀರ್, ಎಮ್ ವೈ ಫ್ ಅಧ್ಯಕ್ಷರಾದ ಅಝರ್ ಕಾರ್ಯದರ್ಶಿ ಸ್ವಾಬಿರ್,ಡಿ ಯು ವೈ ಎಂ ಎ ಅಧ್ಯಕ್ಷರಾದ ನಿಝಾಂ ಸಿಲ್ ಸಿಲಾ ಬನ್ನೂರು ಗೌರವಧ್ಯಕ್ಷರಾದ ಇಸ್ಮಾಯಿಲ್ ಪಾಪ್ಲಿ ಹಾಗೂ ಎಸ್ಸೆಸ್ಸೆಫ್ ಹಾಗೂ ಎಸ್.ವೈ.ಎಸ್ ಸಂಘಟನೆಯ ನಾಯಕರು , ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!