10 ಸೆಕೆಂಡ್ ನಲ್ಲಿ ಎಮಿಗ್ರೇಷನ್ ಕ್ಲಿಯರೆನ್ಸ್: ದುಬೈ ಏರ್ಪೋರ್ಟ್ ನಲ್ಲಿ ಸ್ಮಾರ್ಟ್ ಟನಲ್

ದುಬೈ: ಎಮಿಗ್ರೇಷನ್ ಚಟುವಟಿಕೆಗಳು ಹತ್ತು ಸೆಕೆಂಡುಗಳಲ್ಲಿ ಪೂರ್ಣ ಗೊಳ್ಳುವ ಸ್ಮಾರ್ಟ್ ಟನಲ್ ಗಳನ್ನು ಮುಂದಿನ ತಿಂಗಳು ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯು ಪ್ರಾಯೋಗಿಕ ಆಧಾರದ ಮೇಲೆ ಕಾರ್ಯಗತಗೊಳ್ಳಲಿದೆ ಎಂದು ಜನರಲ್ ಡೈರೆಕ್ಟರಿ ಆಫ್ ರೆಸಿಡೆನ್ಸಿ ಮತ್ತು ವಿದೇಶಿ ವ್ಯವಹಾರಗಳ ನಿರ್ದೇಶಕ ಜನರಲ್ ಮೇಜರ್ ಜನರಲ್ ಮುಹಮ್ಮದ್ ಅಲ್ ಮರ್ರಿ ತಿಳಿಸಿದ್ದಾರೆ. ರಚನಾತ್ಮಕ ತಂತ್ರಜ್ಞಾನದ ಸಹಾಯದಿಂದ ಟನಲ್ ಕಾರ್ಯನಿರ್ವಹಿಸುತ್ತದೆ.

ಇಂತಹ ವ್ಯವಸ್ಥೆಯನ್ನು ಜಗತ್ತಿನಲ್ಲಿಯೇ ಪ್ರಥಮ ಬಾರಿಗೆ ಸ್ಥಾಪಿಸಲಾಗಿದೆಯೆಂದು ಮೇಜರ್ ಜನರಲ್ ಅಲ್-ಮರ್ರಿ ಹೇಳಿದ್ದಾರೆ.
ಕಳೆದ ವರ್ಷ, ಸ್ಮಾರ್ಟ್ ಟನಲ್ ತಂತ್ರಜ್ಞಾನ ಯೋಜನೆಯನ್ನು ಜಿಯೊಟೆಕ್ಸ್ ಟೆಕ್ನಾಲಜಿ ವೀಕ್ ನಲ್ಲಿ ಅನಾವರಣಗೊಳಿಸಲಾಗಿತ್ತು.

ಸ್ಮಾರ್ಟ್ ಸುರಂಗವು ಬಯೋಮೆಟ್ರಿಕ್ ವ್ಯವಸ್ಥೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು, ಪ್ರಯಾಣಿಕರು ಸ್ಮಾರ್ಟ್ ಸುರಂಗ ಮಾರ್ಗದಿಂದ ಚಲಿಸಿದರೆ ಮಾತ್ರ ಸಾಕು. ಪಾಸ್‌ಪೋರ್ಟ್ ಎಮಿರೇಟ್ ಐಡಿಯನ್ನು ತೋರಿಸಬೇಕಾಗಿಲ್ಲ.

ಹತ್ತು ಸೆಕೆಂಡುಗಳಲ್ಲಿ ಮುಖ ಚಹರೆ ಪತ್ತೆ ಹಚ್ಚುವ ಪ್ರಕ್ರಿಯೆ ತಂತ್ರಜ್ಞಾನದ ಮೂಲಕ ಪೂರ್ಣಗೊಳಿಸಲಾಗುವುದು ಎಂದು ಮೇಜರ್ ಜನರಲ್ ಅಲ್ ಮರ್ರಿ ಹೇಳಿದರು.

ಸ್ಮಾರ್ಟ್ ಟನೆಲ್ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಉದ್ದೇಶಕ್ಕಾಗಿ ಎಮಿರೇಟ್ಸ್ ಏರ್ಲೈನ್ಸ್ ನೊಂದಿಗೆ ದುಬೈ ಜಿಡಿಆರ್ಎಫ್ಎ ಯನ್ನು ಸಂಯೋಜಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಣ್ಣಿನ ಗುರುತಿಸುವಿಕೆ ತಂತ್ರಜ್ಞಾನವನ್ನು ಈ ಯೋಜನೆಗಾಗಿ ಬಳಸಲಾತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪಾಸ್‌ಪೋರ್ಟ್ ಸ್ಟ್ಯಾಂಪಿಂಗ್ ಮುಂತಾದ ಅಗತ್ಯವಿಲ್ಲ. ಮಾನವ ಹಸ್ತಕ್ಷೇಪವಿಲ್ಲದೆಯೇ ಎಮಿಗ್ರೇಷನ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದು ಎಂಬುದು ಇದರ ವಿಷೇಶತೆಯಾಗಿದೆ.

ಡಿಜಿಟಲ್ ಫಲಕಗಳನ್ನು ಬಿಳಿ ಟಣಲ್‌ನಲ್ಲಿ ಸ್ಥಾಪಿಸಲಾಗಿದೆ. ಪ್ರಯಾಣಿಕರು ಹಾದುಹೋದಾಗ, ಸುರಂಗದ ಬಣ್ಣವು ಕೆಂಪು ಬಣ್ಣಕ್ಕೆ ತಿರುಗುತ್ತದೆ.

Leave a Reply

Your email address will not be published. Required fields are marked *

error: Content is protected !!