ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಶನ್ ಪ್ರತಿಭೋತ್ಸವ

ಕೈಕಂಬ,ಡಿ.31: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಮೂಡಬಿದ್ರೆ ಡಿವಿಶನ್ ಮಟ್ಟದ ಪ್ರತಿಭೋತ್ಸವವು ರವಿವಾರ ಕೈಕಂಬ ಪೋಂಪೈ ಇಂಗ್ಲಿಷ್ ಮೀಡಿಯಂ ಶಾಲಾ ಸಭಾಂಗಣದಲ್ಲಿ ನಡೆಯಿತು.ಡಿವಿಶನ್ ಅಧ್ಯಕ್ಷ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಅಲ್ ಕಾಮಿಲ್ ಅಧ್ಯಕ್ಷತೆ ವಹಿಸಿದ್ದರು.ಕಂದಾವರ ಬದ್ರಿಯಾ ಜುಮಾ ಮಸ್ಜಿದ್ ಖತೀಬ್ ಶಾಫಿ ಮದನಿ ಕರಾಯ ದುಆ ನೆರವೇರಿಸಿದರು.
ಎಸ್ಸೆಸ್ಸೆಫ್ ದ.ಕ ಜಿಲ್ಲಾ ಉಪಾಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ ಉದ್ಘಾಟಿಸಿದರು. ಕೈಕಂಬ ಮರ್ಕಝ್ ಚೇರ್‌ಮೆನ್ ಬದ್ರುದ್ದೀನ್ ಅಝ್‌ಹರಿ ಅಲ್ ಕಾಮಿಲ್ ಸಂದೇಶ ಭಾಷಣ ಮಾಡಿದರು. ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮತ್ತು ಮಂಗಳೂರು ಉತ್ತರ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಆಳ್ವಾ ಮಾತನಾಡಿ ಶುಭಹಾರೈಸಿದರು. ಡಿವಿಶನ್ ಮಟ್ಟದ ಪ್ರತಿಭೋತ್ಸವದಲ್ಲಿ ಡಿವಿಶನ್ ವ್ಯಾಪ್ತಿಯ ಕೈಕಂಬ, ಬಜ್ಪೆ, ಅಮ್ಮುಂಜೆ ಮತ್ತು ಮೂಡಬಿದ್ರೆ ಸೆಕ್ಟರ್‌ಗಳ ನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು. ಕೈಕಂಬ ಸೆಕ್ಟರ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಜ್ಪೆ ಸೆಕ್ಟರ್ ದ್ವಿತೀಯ ಸ್ಥಾನ ಪಡೆಯಿತು. ಇದೇ ವೇಳೆ ಪೊಂಪೈ ಶಾಲಾ ಆಡಳಿತ ಮಂಡಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ದ.ಕ ಜಿಲ್ಲಾ ಎಸ್ಸೆಸ್ಸೆಫ್ ಸದಸ್ಯ ಮಜೀದ್ ಕಾಮಿಲ್ ಸಖಾಫಿ ಅಮ್ಮುಂಜೆ, ಎಸ್‌ವೈಎಸ್ ಕೈಕಂಬ ಸೆಂಟರ್ ಅಧ್ಯಕ್ಷ ಹಸನ್ ಮದನಿ, ದ.ಕ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ ಇಬ್ರಾಹಿಂ, ಕಂದಾವರ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ದುರ್ರಹ್ಮಾನ್ ಮೂನ್‌ಲೈಟ್, ಎಸ್‌ವೈಎಸ್ ಬಜ್ಪೆ ಸೆಂಟರ್ ಅಧ್ಯಕ್ಷ ಹನೀಫ್ ಹಾಜಿ ಬಜ್ಪೆ, ಎಸ್‌ವೈಎಸ್ ಕೈಕಂಬ ಸೆಂಟರ್ ಕಾರ್ಯದರ್ಶಿ ಅಬ್ದುಲ್ ಅಝೀಝ್ ವೆನ್ಝ್, ಎಸ್‌ವೈಎಸ್ ಕೈಕಂಬ ಸೆಂಟರ್ ಕೋಶಾಧಿಕಾರಿ ಅಬ್ದುಲ್ ರಝಾಖ್ ಹಾಜಿ, ಎಸ್‌ವೈಎಸ್ ಅಮ್ಮುಂಜೆ ಸೆಂಟರ್ ಅಧ್ಯಕ್ಷ ಅಬ್ದುಲ್ ಬಶೀರ್ ಗಾಣೆಮಾರ್, ಎಸ್ಸೆಸ್ಸೆಫ್ ಕೈಕಂಬ ಸೆಕ್ಟರ್ ಅಧ್ಯಕ್ಷ ರಿಯಾಝ್ ಸ‌ಅದಿ ಗುರುಪುರ, ಎಸ್‌ವೈಎಸ್ ಮೂಡಬಿದ್ರೆ ಸೆಂಟರ್ ಕೋಶಾಧಿಕಾರಿ ಉಸ್ಮಾನ್ ಕೆರೆಬಳಿ, ಜಿಲ್ಲಾ ಎಸ್‌ವೈಎಸ್ ಕಾರ್ಯದರ್ಶಿ ಸಲೀಲ್ ಹಾಜಿ ಬಜ್ಪೆ, ಎಸ್‌ವೈಎಸ್ ಬಜ್ಪೆ ಸೆಂಟರ್ ಕಾರ್ಯದರ್ಶಿ ಬಶೀರ್ ಅಲ್ ರಫಾ ಬಜ್ಪೆ, ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯ ಇಬ್ರಾಹಿಂ ನವಾಝ್ ಬಡಕಬೈಲು, ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಸಚಿನ್ ಕುಮಾರ್ ಅಡಪ, ಗುರುಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಭಟ್, ಶರೀಫ್ ಅಡ್ಡೂರು, ಆರ್‌ಟಿಒ ಇಸ್ಮಾಯಿಲ್ ಅಮ್ಮುಂಜೆ, ಅಬ್ದುರ್ರಹ್ಮಾನ್ ಬಡಕಬೈಲು ಮುಂತಾದವರು ಉಪಸ್ಥಿತರಿದ್ದರು. ಪ್ರತಿಭೋತ್ಸವ ಸಮಿತಿ ಕನ್ವೀನರ್ ಉವೈಸ್ ಉದ್ದಬ್ಬೆಟ್ಟು ನಿರೂಪಣೆ ನಡೆಸಿದರು. ಡಿವಿಶನ್ ಕ್ಯಾಂಪಸ್ ಕಾರ್ಯದರ್ಶಿ ಶಾಕಿರ್ ಎಮ್ಮೆಸ್ಸಿ ಸ್ವಾಗತಿಸಿ ಕಾರ್ಯದರ್ಶಿ ಸವಾದ್ ಉದ್ದಬ್ಬೆಟ್ಟು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!