“ಜಸ್ಟೀಸ್ ಫಾರ್ ಆಸಿಫಾ”ಎಸ್ಸೆಸ್ಸೆಫ್ ಕಳಂಜಿಬೈಲ್ ಯುನಿಟ್ ಪ್ರತಿಭಟನೆ

ಕಳಂಜಿಬೈಲ್: ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ 8ರ ಹರೆಯದ ಬಾಲಕಿ ಆಸಿಫಾ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಹಾಗೂ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಎಸ್ಸೆಸ್ಸೆಫ್ ಕಳಂಜಿಬೈಲ್ ಯುನಿಟ್ ಇದರ ವತಿಯಿಂದ ಹೇರಾಜೆ ಶಾಲಾ ಸಮೀಪದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಯುನಿಟ್ ಮಾಜಿ ಅಧ್ಯಕ್ಷ ಝಕರಿಯಾ ಲತ್ವೀಫಿ ದೇಶದಲ್ಲಿ ಇಂತಹ ಅಮಾನವೀಯ ಕೃತ್ಯಗಳು ನಿರಂತರ ನಡೆಯುತ್ತಿದ್ದರೂ ಅದರ ಬಗ್ಗೆ ಅಧಿಕೃತರು ತೋರುವ ಅಸಡ್ಡೆ ಮತ್ತು ನಿಷ್ಕ್ರಿಯತೆ ಸಮಾನ ಕೃತ್ಯಗಳು ಸಾರ್ವತ್ರಿಕವಾಗಿ ನಡೆಯಲು ಕಾರಣವಾಗುತ್ತದೆ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಆರೋಪಿಗಳನ್ನು ಕಠಿಣ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಯುನಿಟ್ ಅಧ್ಯಕ್ಷ ಎ.ಕೆ ಇಬ್ರಾಹಿಂ ಸ ಅದಿ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿದ್ದರು. ಲತೀಫ್ ಸ ಅದಿ ಉದ್ಘಾಟಿಸಿದರು. ಮುಹಿಯುದ್ದೀನ್ ಜುಮಾ ಮಸ್ಜಿದ್ ಕಳಂಜಿಬೈಲ್ ಅಧ್ಯಕ್ಷರಾದ ಅಶ್ರಫ್ ಪಿ.ಹೆಚ್, ಎಸ್ ವೈ.ಎಸ್ ನಾಯಕರಾದ ಕೆ.ವಿ ಇಲ್ಯಾಸ್ ಸಖಾಫಿ, ಉಪ್ಪಿನಂಗಡಿ ಡಿವಿಶನ್ ಉಪಾಧ್ಯಕ್ಷರಾದ ಕೆ.ಎಸ್ ಹಕೀಂ, ಹಾಗೂ ಊರಿನ ಯುವಕರು, ಹಿರಿಯರು ಉಪಸ್ಥಿತರಿದ್ದರು.
ಪ್ರ. ಕಾರ್ಯದರ್ಶಿ ಇರ್ಫಾದ್ ಕಲ್ಲಕಟ್ಟ ಸ್ವಾಗತಿಸಿ. ಅಶ್ರಫ್ ಮದನಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!