‘ಜಸ್ಟೀಸ್ ಫಾರ್ ಆಸಿಫಾ’ ಮರ್ಕಝ್ ಲಾ ಕಾಲೇಜಿನಿಂದ ಕಾನೂನು ನೆರವು

ಕಲ್ಲಿಕೋಟೆ : ಜಮ್ಮುವಿನ ಕಠುವಾ ಪ್ರದೇಶದಲ್ಲಿ  ಎಂಟರ ಹರೆಯದ ಆಸಿಫಾ ಬಾನು ಎಂಬ ಬಾಲೆಯನ್ನು ಸರಣಿ ಅತ್ಯಾಚಾರಗೈದು ಹತ್ಯೆಗೈದ ಕೇಸಿನಲ್ಲಿ ಸಂತ್ರಸ್ತೆಯ ಕುಟುಂಬದವರಿಗೆ ನ್ಯಾಯ ಒದಗಿಸುವಂತೆಯೂ, ಆರೋಪಿಗಳಿಗೆ ಕಠಿಣ ಶಿಕ್ಷೆ ಲಭ್ಯವಾಗಿಸುವ ನಿಟ್ಟಿನಲ್ಲಿ ಅಗತ್ಯವಾದ ಕಾನೂನು ನೆರವು ನೀಡಲು ಮರ್ಕಝ್ ಲೊ ಕಾಲೇಜು ಡೈರಕ್ಟರೇಟ್ ತೀರ್ಮಾನಿಸಿದೆ. ಸಂಸ್ಥೆಯಲ್ಲಿ ಕಾರ್ಯಾಚರಿಸುವ ಲೀಗಲ್ ಎಯ್ಡ್ ಕ್ಲಿನಿಕ್ಕ್ ಮುಖಾಂತರ ಕಾನೂನು ನೆರವು ನೀಡಲಿದೆ.

ದೇಶ ಕಂಡ ಅತ್ಯಂತ ಭೀಕರವಾದ ಕ್ರತ್ಯದ ಹಿಂದಿರುವ ಆರೋಪಿಗಳು ರಾಜಕೀಯವಾಗಿಯೂ ಆರ್ಥಿಕವಾಗಿಯೂ ಪ್ರಭಾವಿಗಳಾಗಿದ್ದಾರೆ.ಸಂತ್ರಸ್ತೆಯ ಪರವಾಗಿ ಕಾನೂನು ಹೋರಾಟ ಮಾಡಿದ ವಕೀಲರಾದ ದೀಪಿಕಾ ರಜಾವತ್ ಈಗಾಗಲೇ ಅನೇಕ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ.ಜಮ್ಮುವಿನ ಒಂದು ಸಂಘ ವಕೀಲರು ತೀವ್ರವಾಗಿ ಒತ್ತಡ ಹೇರಿದ್ದುದರ ಹೊರತಾಗಿಯೂ ಆಸಿಫಾ ಕೇಸನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ದೀಪಿಕಾ ರಜಾವತರಿಗೆ ಡೈರಕ್ಟರೇಟ್ ಅಭಿನಂದನೆ ಸಲ್ಲಿಸಿದೆ.

ಮರ್ಕಝ್ ಅಧೀನದಲ್ಲಿ ಕಾಶ್ಮೀರದಲ್ಲಿ ಕಾರ್ಯಚರಿಸುತ್ತಿರುವ ಸಂಸ್ಥೆಗಳ ಮೇಧಾವಿ ಶೌಖತ್ ನ‌ಈಮಿಯವರ ನೇತೃತ್ವದಲ್ಲಿ ಬೆದರಿಕೆಗೆ ಹೆದರಿ ಪಲಾಯನಗೈದ ಆಸಿಫಾಳ ಕುಟುಂಬವನ್ನು ಪತ್ತೆ ಹಚ್ಚಿ ಸಾಂತ್ವನ ಹೇಳಿ ಸಹಾಯಧನ ನೀಡಿ ಧೈರ್ಯ ತುಂಬಲಾಗಿತ್ತು.ಆಸಿಫಾಳ ಕುಟುಂಬ ಸಹಿತ ಬಖರ್ ವಾಲ್ ವಿಭಾಗಕ್ಕೆ ವಿದ್ಯಾಭ್ಯಾಸ ನೀಡಿ ಸಬಲೀಕರಿಸುವ ಪಧ್ಧತಿಗಳನ್ನು ಕಾಶ್ಮೀರದಲ್ಲಿ ಮರ್ಕಝ್ ಆಯೋಜಿಸುತ್ತಿದೆ.

ಬಖರ್ ವಾಲ್ ವಿಭಾಗಕ್ಕೆ ನಿರ್ಭಯವಾಗಿ ಬದುಕುವ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಮರ್ಕಝ್ ಮೇಧಾವಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ತುರ್ತು ಸಂದೇಶಗಳನ್ನು  ರವಾನಿಸಿದ್ದಾರೆ.

ಕಾನೂನು ನೆರವು ನೀಡುವ ಕಾರ್ಯಾಚರಣೆಗಳನ್ನು ಜಮ್ಮುವಿನ ಪೂಂಚ್ ನಲ್ಲಿ ಕಾರ್ಯಾಚರಿಸುವ ಮರ್ಕಝ್ ನ ಯಾಸೀನ್ ಇನ್ಸಿಸ್ಟಿಟ್ಯೂಟ್ ಕೇಂದ್ರವಾಗಿಸಿ ಏಕೀಕರಿಸಲಾಗುವುದು.ಸದರಿ ಪ್ರಕರಣವನ್ನು  ಸಾರ್ವಜನಿಕರ ಗಮನಕ್ಕೆ ತರಲು ಪ್ರಯತ್ನಿಸಿದ ಅಡ್ವೊಕೇಟ್ ದೀಪಿಕಾ ರಜಾವತ್ ಸಹಿತ ಕಾನೂನು ತಜ್ಞರ ಸಲಹೆ ನಿರ್ದೇಶಗಳನ್ನು ಪಾಲಿಸಿ ಕಾರ್ಯಚರಿಸಲಾಗುವುದು.

ಮುಂದಿನ ಅಧ್ಯಯನ ವರ್ಷದಿಂದ ಕಾಶ್ಮೀರದಿಂದ ಆಯ್ದ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೊಂದಿಗೆ ಮರ್ಕಝ್ ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಸೌಕರ್ಯಗಳನ್ನು ಏರ್ಪಡಿಸಲಾಗುವುದೆಂದು ಮರ್ಕಝ್ ಲಾ ಕಾಲೇಜು ಡೈರಕ್ಟರೇಟ್ ತೀರ್ಮಾನಿಸಿದೆ.

ಮರ್ಕಝ್ ಲಾ ಕಾಲೇಜು ನಿರ್ದೇಶಕರಾದ ಡಾ ಎ. ಪಿ ಅಬ್ದುಲ್ ಹಕೀಮ್ ಅಝ್ಹರಿಯವರ ಅಧ್ಯಕ್ಷತೆಯಲ್ಲಿ ಸೇರಿದ ಸಭೆಯಲ್ಲಿ ಎಕ್ಸಿಕ್ಯೂಟಿವ್ ಡೈರಕ್ಟರ್ ಅಮೀರ್ ಹಸನ್,ಸಹ ನಿರ್ದೇಶಕ ಅಡ್ವಕೇಟ್ ಸಮದ್ ಪುಲಿಕ್ಕಾಡ್ ಮುಂತಾದವರು ಉಪಸ್ಥಿತರಿದ್ದರು.

ಕನ್ನಡಕ್ಕೆ
ಅಬೂಶಝ

One thought on “‘ಜಸ್ಟೀಸ್ ಫಾರ್ ಆಸಿಫಾ’ ಮರ್ಕಝ್ ಲಾ ಕಾಲೇಜಿನಿಂದ ಕಾನೂನು ನೆರವು

Leave a Reply

Your email address will not be published. Required fields are marked *

error: Content is protected !!