janadhvani

Kannada Online News Paper

ಲಗೇಜ್‌ನಲ್ಲಿ ಝಮ್ ಝಮ್ ನೀರನ್ನು ಒಯ್ಯುವುದಕ್ಕೆ ನಿರ್ಬಂಧ- ಉಲ್ಲಂಘಿಸಿದರೆ ವಿಮಾನಯಾನ ಸಂಸ್ಥೆಗಳ ವಿರುದ್ಧ ಕ್ರಮ

ದ್ರವ ಪದಾರ್ಥಗಳನ್ನು ಲಗೇಜ್ ಗಳಲ್ಲಿ ಸಾಗಿಸುವ ನಿರ್ಬಂಧವು ಹಿಂದಿನಿಂದಲೇ ಜಾರಿಯಿದ್ದು, ಆದರೆ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಬಿಗಿಗೊಳಿಸಲಾಗುತ್ತಿದೆ.

ರಿಯಾದ್: ಸೌದಿ ಅರೇಬಿಯಾದಿಂದ ಹೊರಡುವ ವಿಮಾನಗಳಲ್ಲಿ ಝಮ್ ಝಮ್ ನೀರನ್ನು ಲಗೇಜ್ ನ ಒಳಗಡೆ ಇರಿಸಿ ಸಾಗಿಸುವುದನ್ನು ನಿಷೇಧಿಸಲಾಗಿದೆ. ಸಿವಿಲ್ ಏವಿಯೇಷನ್‌ನ ಜನರಲ್ ಅಥಾರಿಟಿಯು ವಿವಿಧ ದ್ರವಗಳನ್ನು ಸಾಮಾನು ಲಗೇಜ್ ಗಳಲ್ಲಿ ಕೊಂಡೊಯ್ಯುವ ನಿಷೇಧವನ್ನು ಬಿಗಿಗೊಳಿಸಿದೆ. ಉಲ್ಲಂಘಿಸಿದರೆ ವಿಮಾನಯಾನ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ವಿಶೇಷವಾಗಿ ಪ್ಯಾಕೇಜ್ ಮಾಡಿದ ವಸ್ತುಗಳನ್ನು ಮಾತ್ರ ಅನುಮತಿಸಲಾಗುತ್ತದೆ.

ದ್ರವ ಪದಾರ್ಥಗಳನ್ನು ಲಗೇಜ್ ಗಳಲ್ಲಿ ಸಾಗಿಸುವ ನಿರ್ಬಂಧವು ಹಿಂದಿನಿಂದಲೇ ಜಾರಿಯಿದ್ದು, ಆದರೆ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಬಿಗಿಗೊಳಿಸಲಾಗುತ್ತಿದೆ. ಚೆಕ್-ಇನ್ ಲಗೇಜ್ ಒಳಗೆ ಝಮ್ ಝಮ್ ನೀರನ್ನು ಒಯ್ಯುವುದಕ್ಕೂ ನಿಷೇಧವಿದೆ. ಝಮ್ ಝಮ್ ನೀರನ್ನು ಸಾಗಿಸಲು ಬಯಸುವವರು ಪ್ರತ್ಯೇಕವಾಗಿ ಏರ್ಪ್ಯಾಕ್ ಮಾಡಬೇಕು. ವಿಮಾನದೊಳಗೆ ಲಗೇಜ್ ಗಳನ್ನು ಒಟ್ಟಿಗೆ ಜೋಡಿಸಿ ಇಡುವುದು  ವಿಧಾನವಾಗಿದೆ. ಇದರ ಅಡಿಯಲ್ಲಿ, ಲಗೇಜ್‌ನೊಳಗಿನ ದ್ರವ ಬಾಟಲಿಗಳು ಸ್ಫೋಟಗೊಳ್ಳದಂತೆ ತಡೆಯುವುದಾಗಿದೆ ನಿಷೇಧವನ್ನು ಬಿಗಿಗೊಳಿಸುವ ಉದ್ದೇಶ. ವಿಶೇಷವಾಗಿ ಪ್ಯಾಕ್ ಮಾಡಲಾದ ಝಮ್ ಝಮ್ ಸೇರಿದಂತೆ ವಸ್ತುಗಳನ್ನು ವಿಶೇಷ ಕನ್ವೇಯರ್ ಬೆಲ್ಟ್ ಕೌಂಟರ್ ಮೂಲಕ ಸ್ವೀಕರಿಸಲಾಗುತ್ತದೆ.

ದ್ರವಗಳ ಲಗೇಜ್ ಮೇಲಿನ ನಿಷೇಧವು ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಂದ ಹೊರಡುವ ವಿಮಾನಗಳಿಗೆ ಅನ್ವಯಿಸುತ್ತದೆ. GAKA,  ವಿಮಾನಯಾನ ಸಂಸ್ಥೆಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ಝಮ್ ಝಮ್ ಅನ್ನು ಚೆಕ್-ಇನ್ ಲಗೇಜ್‌ನಲ್ಲಿ ಸಾಗಿಸಲು ಅನುಮತಿಸಬಾರದು ಎಂದು ಉಲ್ಲೇಖಿಸಲಾಗಿದೆ. ನಿರ್ದೇಶನವನ್ನು ಪಾಲಿಸದಿರುವುದು ಸರ್ಕಾರದ ಆದೇಶಗಳ ಉಲ್ಲಂಘನೆಯಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ. ಜಿದ್ದಾ ಸೇರಿದಂತೆ ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಝಮ್ ಝಮ್ ಏರ್‌ಪ್ಯಾಕ್ ಸೌಲಭ್ಯಗಳನ್ನು ಹೊಂದಿವೆ. ಹೊರಗಿನಿಂದಲೂ ಏರ್ಪ್ಯಾಕ್ ಮಾಡಬಹುದಾಗಿದೆ.

error: Content is protected !! Not allowed copy content from janadhvani.com