janadhvani

Kannada Online News Paper

ಹನುಮಾನ್ ಚಾಲಿಸಾ ಪಠಣ- ಸಂಸದೆ ಹಾಗೂ ಶಾಸಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

ಸರ್ಕಾರ ಮತ್ತು ಮುಖ್ಯಮಂತ್ರಿಯ ವಿರುದ್ಧ ದ್ವೇಷ ಹರಡುವ ಕಾರಣಕ್ಕಾಗಿ ಅವರ ವಿರುದ್ಧ ಸೆಕ್ಷನ್ 124 ಎ ಅನ್ವಯ ದೇಶದ್ರೋಹ ಪ್ರಕರಣವನ್ನು ದಾಖಲಿಸಿದೆ.

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲಿಸಾ ಪಠಣ ಮಾಡ್ತೀವಿ ಎಂದಿದ್ದೇ ಸಂಸದೆ ನವನೀತ್ ರಾಣಾ ಹಾಗೂ ಅವರ ಪತಿ ಶಾಸಕ ರವಿ ರಾಣ ವಿರುದ್ಧ ಶಿವಸೇನೆ ಸರ್ಕಾರ ದೇಶದ್ರೋಹ ಕೇಸ್ ದಾಖಲಿಸಿದೆ.

ನಗರದಲ್ಲಿ ಇಂದು ನಡೆದ ದೊಡ್ಡ ಬೆಳವಣಿಗೆಯಲ್ಲಿ ಮಾಜಿ ನಟಿ, ಲೋಕಸಭೆ ಸಂಸದೆ ನವನೀತ್ ರಾಣಾ ಮತ್ತು ಅವರ ಶಾಸಕ ಪತಿ ರವಿ ರಾಣಾ ಅವರಿಗೆ ಬಾಂದ್ರಾ ನ್ಯಾಯಾಲಯದ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇತ್ತ ಸರ್ಕಾರ ಮತ್ತು ಮುಖ್ಯಮಂತ್ರಿಯ ವಿರುದ್ಧ ದ್ವೇಷ ಹರಡುವ ಕಾರಣಕ್ಕಾಗಿ ಅವರ ವಿರುದ್ಧ ಸೆಕ್ಷನ್ 124 ಎ ಅನ್ವಯ ದೇಶದ್ರೋಹ ಪ್ರಕರಣವನ್ನು ದಾಖಲಿಸಿದೆ.

ಮಹಾರಾಷ್ಟ್ರದ ಹನುಮಾನ್ ಚಾಲೀಸಾ ಪಠಣ ವಿವಾದದ ಕುರಿತಂತೆ ಎಂಪಿ ನವನೀತ್​ ಕೌರ್​​ ಮೇಲೆ ಮತ್ತೊಂದು ಎಫ್​ಐಆರ್ ದಾಖಲಾಗಿದೆ. ಎರಡು ಸಮುದಾಯಗಳ ನಡುವೆ ದ್ವೇಷ ಹರಡಿಸುವ ಆರೋಪದ ಅಡಿ ಈಗಾಗಲೇ ನವನೀತ್ ಕೌರ್ ಹಾಗೂ ಅವರ ಪತಿ ಅವರನ್ನು ಅರೆಸ್ಟ್​ ಮಾಡಲಾಗಿತ್ತು. ಸಿಎಂ ಉದ್ಧವ್ ಠಾಕ್ರೆ ನಿವಾಸದ ಎದುರು ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆ ಎಂದು ಎರಡು ವರ್ಗಗಳ ನಡುವೆ ಧ್ವೇಷ ಉಂಟು ಮಾಡಲು ಯತ್ನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಾಂಬೆ ಪೊಲೀಸ್ ಕಾಯ್ದೆಯ ಸೆಕ್ಷನ್ 153 ಎ, 35, 37, 135 ರ ಅಡಿಯಲ್ಲಿ ಹಾಗೂ ಐಪಿಸಿ ಸೆಕ್ಷನ್ 353 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಇಂದು ಕೋರ್ಟ್​ಗೆ ಇಬ್ಬರನ್ನು ಪೊಲೀಸರು ಹಾಜರು ಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಪೀಠ, ಜಾಮೀನು ಅರ್ಜಿಯನ್ನು ಏಪ್ರಿಲ್ 29 ರಂದು ವಿಚಾರಣೆ ಮಾಡೋದಾಗಿ ತಿಳಿಸಿ 27ರ ಒಳಗೆ ಪೊಲೀಸರಿಗೆ ಜಾಮೀನು ಅರ್ಜಿಯನ್ನು ತಿರಸ್ಕರಿಸಲು ಅರ್ಜಿ ಸಲ್ಲಿಕೆ ಮಾಡಲು ಸೂಚನೆ ನೀಡಿತ್ತು. ಆ ಬಳಿಕ ದಂಪತಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ವಿಚಾರಣೆ ಮುಂದೂಡಿತ್ತು. ಸದ್ಯ ಅಮರಾವತಿ ಸಂಸದೆಯನ್ನ ಬೈಕುಲ್ಲಾ ಜೈಲು ಹಾಗೂ ಶಾಸಕರನ್ನು ಆರ್ಥರ್ ರೋಡ್ ಜೈಲಿಗೆ ಕಳುಹಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.

error: Content is protected !! Not allowed copy content from janadhvani.com