janadhvani

Kannada Online News Paper

ಐದು ವರ್ಷಗಳ ಕಾಲಾವಧಿಯ ‘ಗ್ರೀನ್ ವೀಸಾ’ ಯೋಜನೆ- ಯಾರಿಗೆಲ್ಲಾ ಲಭ್ಯ

ವೀಸಾ ರದ್ದುಗೊಂಡರೆ ಅಥವಾ ಅವಧಿ ಮುಗಿದರೆ ಇನ್ನೂ ಆರು ತಿಂಗಳ ಕಾಲ ದೇಶದಲ್ಲಿ ಉಳಿಯಲ ಗ್ರೇಸ್ ಅವಧಿಯನ್ನು ನೀಡಲಾಗುತ್ತದೆ.

ಅಬುಧಾಬಿ: ಯುಎಇ ಐದು ವರ್ಷಗಳ ‘ಗ್ರೀನ್ ವೀಸಾ’ಗಳನ್ನು ಪ್ರಕಟಿಸಿದೆ.ಹೊಸ ಯೋಜನೆಯು ನುರಿತ ವೃತ್ತಿಪರರು, ಹೂಡಿಕೆದಾರರು, ಉದ್ಯಮಿಗಳು ಮತ್ತು ಸ್ವತಂತ್ರೋದ್ಯೋಗಿಗಳನ್ನು ದೇಶಕ್ಕೆ ಆಕರ್ಷಿಸುವ ಗುರಿಯನ್ನು ಹೊಂದಿದೆ.

ಈ ವೀಸಾಗಳಿಗೆ ಅವರ ವೀಸಾ ರದ್ದುಗೊಂಡರೆ ಅಥವಾ ಅವಧಿ ಮುಗಿದರೂ ಇನ್ನೂ ಆರು ತಿಂಗಳ ಕಾಲ ದೇಶದಲ್ಲಿ ಉಳಿಯಲು ಅವಕಾಶ ನೀಡುವ ಗ್ರೇಸ್ ಅವಧಿಯನ್ನು ನೀಡಲಾಗುತ್ತದೆ.

ನುರಿತ ಕೆಲಸಗಾರರು
ಪ್ರಾಯೋಜಕರು ಅಥವಾ ಉದ್ಯೋಗದಾತರ ಅಗತ್ಯವಿಲ್ಲದೇ ನುರಿತ ಕೆಲಸಗಾರರು ಐದು ವರ್ಷಗಳ ವೀಸಾವನ್ನು ಪಡೆಯಬಹುದು. ಅರ್ಜಿದಾರರು ಮಾನ್ಯ ಉದ್ಯೋಗ ಒಪ್ಪಂದವನ್ನು ಹೊಂದಿರಬೇಕು. ಯುಎಇ ಮಾನವ ಸಂಪನ್ಮೂಲ ಮತ್ತು ಸ್ವದೇಶೀಕರಣ ಸಚಿವಾಲಯದ ಪ್ರಕಾರ, ಒಂದರಿಂದ ಮೂರು ವಿಭಾಗಗಳಲ್ಲಿ ಕೆಲಸ ಮಾಡುವವರಿಗೆ ಈ ವೀಸಾ ಲಭ್ಯವಿದೆ. ಕನಿಷ್ಠ ಪದವಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ವೇತನವು 15,000 ದಿರ್ಹಮ್‌ಗಳಿಗಿಂತ ಕಡಿಮೆಯಿರಬಾರದು.

ಸ್ವತಂತ್ರೋದ್ಯೋಗಿಗಳು, ಸ್ವಯಂ ಉದ್ಯೋಗಿಗಳು

ಹೊಸ ಪ್ರಕಟಣೆಯ ಪ್ರಕಾರ, ಸ್ವಯಂ ಉದ್ಯೋಗಿ ಮತ್ತು ಸ್ವತಂತ್ರೋದ್ಯೋಗಿಗಳು ಪ್ರಾಯೋಜಕರ ಅಗತ್ಯವಿಲ್ಲದೇ ಐದು ವರ್ಷಗಳ ಕಾಲಾವಧಿಯ ವೀಸಾಗಳನ್ನು ಪಡೆಯಲು ಸಾಧ್ಯವಿದೆ. ಇದಕ್ಕೆ ಮಾನವ ಸಂಪನ್ಮೂಲ ಮತ್ತು ಸ್ವದೇಶೀಕರಣ ಸಚಿವಾಲಯದಿಂದ ಸ್ವತಂತ್ರ ಅಥವಾ ಸ್ವಯಂ ಉದ್ಯೋಗದ ಪರವಾನಿಗೆ ಅಗತ್ಯವಿದೆ. ಕನಿಷ್ಠ ಶೈಕ್ಷಣಿಕ ಅರ್ಹತೆ ಪದವಿ ಅಥವಾ ವಿಶೇಷ ಡಿಪ್ಲೊಮಾ ಆಗಿದೆ. ಕಳೆದ ಎರಡು ವರ್ಷಗಳಿಂದ ಸ್ವತಂತ್ರ ವಲಯದಿಂದ ವಾರ್ಷಿಕ ಆದಾಯವು AED 360,000 ಕ್ಕಿಂತ ಹೆಚ್ಚಿರಬೇಕು.

ಹೂಡಿಕೆದಾರರು ಮತ್ತು ಪಾಲುದಾರರು
ವ್ಯಾಪಾರ ಆರಂಭಿಸಲು ಅಥವಾ ಪಾಲುದಾರರಾಗಲು ಯುಎಇಗೆ ಆಗಮಿಸುವವರು ಐದು ವರ್ಷಗಳ ವೀಸಾವನ್ನು ಪಡೆಯಲು ಅರ್ಹರು. ಈ ಮೊದಲು ಈ ವರ್ಗದಲ್ಲಿರುವವರಿಗೆ ಎರಡು ವರ್ಷಗಳ ವೀಸಾ ನೀಡಲಾಗುತ್ತಿತ್ತು. ದೇಶದಲ್ಲಿ ಪಾಲುದಾರಿಕೆ ಅಥವಾ ಹೂಡಿಕೆಯ ದಾಖಲೆಗಳನ್ನು ನೀಡಬೇಕು. ಹೂಡಿಕೆದಾರರು ಒಂದಕ್ಕಿಂತ ಹೆಚ್ಚು ಪರವಾನಗಿಗಳನ್ನು ಹೊಂದಿದ್ದರೆ, ಒಟ್ಟು ಬಂಡವಾಳವನ್ನು ಲೆಕ್ಕಹಾಕಲಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮೋದನೆ ಕೂಡ ಕಡ್ಡಾಯವಾಗಿದೆ.

error: Content is protected !! Not allowed copy content from janadhvani.com