janadhvani

Kannada Online News Paper

ಹಿರಿಯ ವಿದ್ವಾಂಸ ಪಿ.ಎಸ್. ಇಬ್ರಾಹಿಂ ಮದನಿ ವಫಾತ್- ‘ಮದನೀಸ್’ ತೀವ್ರ ಸಂತಾಪ

ಮಂಗಳೂರು: ಉನ್ನತ ವಿದ್ವಾಂಸರೂ, ಹಲವಾರು ಮೊಹಲ್ಲಾಗಳಲ್ಲಿ ಮುದರ್ರಿಸರಾಗಿ ಸೇವೆ ಗೈದಿರುವ ಬಹು ಪಿ.ಎಸ್ ಇಬ್ರಾಹೀಂ ಮದನಿ ತುರ್ಕಳಿಕೆ(60) ವಫಾತಾದರು.

ಅಜಿಲಮುಗೇರು, ಉರುವಾಲು ಪದವು, ಚಿಕ್ಕಮಗಳೂರು ಆಲ್ ದೂರು, ಕೊಂಡಂಗೇರಿ ಮುಂತಾದ ಮೊಹಲ್ಲಾಗಳಲ್ಲಿ ಮುದರ್ರಿಸರಾಗಿ ಸೇವೆ ಗೈದಿದ್ದಾರೆ. ಪ್ರಮುಖ ವಿದ್ವಾಂಸರಾದ ಮರ್ಹೂಂ ಪಿ.ಎ.ಉಸ್ತಾದ್ ಕುಂಬೋಲ್ ಮತ್ತು ಮರ್ಹೂಮ್ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಗುರುವರ್ಯರಾಗಿದ್ದರು.

ಮದನೀಸ್ ಅಸೋಸಿಯೇಷನ್ ಕೇಂದ್ರ ಸಮಿತಿ ಸದಸ್ಯರೂ, ಮದನೀಸ್ ಕರ್ನಾಟಕ ರಾಜ್ಯ ಸಮಿತಿಯ ಕ್ಷೇಮನಿಧಿ ವಿಭಾಗದ ಅಧ್ಯಕ್ಷರು, ಬೆಳ್ತಂಗಡಿ ತಾಲೂಕು ಮದನೀಸ್ ಕೋಶಾಧಿಕಾರಿಯೂ ಆಗಿ ಸಂಘಟನಾ ರಂಗದಲ್ಲಿ ಕಾರ್ಯಾಚರಿಸುತ್ತಿದ್ದರು.

ಅವರು ಪತ್ನಿ, ಆರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನೂ ಶಿಷ್ಯ ವೃಂದವನ್ನೂ ಅಗಲಿದ್ದಾರೆ. ಮಹಾನರ ವಫಾತಿಗೆ ಮದನೀಸ್ ಕೇಂದ್ರ ಸಮಿತಿ ತೀವ್ರ ಸಂತಾಪ ಸೂಚಿಸಿದ್ದು, ಅವರ ಹೆಸರಲ್ಲಿ ಖುರ್ ಆನ್ ಪಾರಾಯಣ, ತಹ್ಲೀಲ್, ಹಾಗೂ ಪ್ರತ್ಯೇಕ ದುಆ ನಡೆಸುವಂತೆ ಮದನೀಸ್ ಅಸೋಸಿಯೇಷನ್ ಕೇಂದ್ರ ಸಮಿತಿ ಅಧ್ಯಕ್ಷರಾದ ಸಯ್ಯಿದ್ ಅಬೂಬಕರ್ ಸಿದ್ದೀಕ್ ತಂಙ್ಙಳ್ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಎ.ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಮನವಿ ಮಾಡಿದ್ದಾರೆ.

error: Content is protected !! Not allowed copy content from janadhvani.com