ಯುಎಇ ಗೆ ಬರುವಾಗ ಔಷಧಿ ತರುವವರ ಗಮನಕ್ಕೆ

ಅಬುಧಾಬಿ(ಜನಧ್ವನಿ): ನೀವು ಊರಲ್ಲಿ ಕಾಯಿಲೆಗೆ ಉಪಯೋಗಿಸುತ್ತಿದ್ದ ಔಷಧಿಗಳು ಕೆಲವೊಮ್ಮೆ ಯುಎಇ ಯ ಲಹರಿ ಪಟ್ಟಿಯಲ್ಲಿ ಸೇರಿರಬಹುದು. 1983-1995 ರಲ್ಲಿ ಸ್ಥಾಪಿಸಲಾದ ಫೆಡರಲ್ ಕಾನೂನಿನ ಅನುಸಾರ ನಾಲ್ಕು ಮತ್ತು ಹದಿನಾಲ್ಕರಲ್ಲಿ ಯಥಾವತ್ತಾಗಿ ಯುಎಇ ಯಲ್ಲಿ ಉಪಯೋಸಬಹುದಾದ ಔಷಧೀಯ ವಿವರಣೆ ಯನ್ನು ದಾಖಲಿಸಲಾಗಿದೆ.

ಇತರ ದೇಶಗಳಿಂದ ಯುಎಇ ಗೆ ತರಲಾಗುವ ನೋವು ನಿವಾರಕ ಔಷಧಿ ಮತ್ತು ನಾರ್ಕೋಟಿಕ್ ಸೈಕೊಟ್ರೋಪಿಕ್ ಜನರಲ್ ಮದ್ದುಗಳನ್ನು ಉಲ್ಲೇಖಿಸಲಾಗಿದೆ. ಲಹರಿ ಪದಾರ್ಥ ನಿಯಂತ್ರಣ ಇಲಾಖೆ ಮತ್ತು ಆರೋಗ್ಯ ಇಲಾಖೆಯು ಅಂಗೀಕರಿಸಿದ ಪಟ್ಟಿಯಲ್ಲಿ ಉಲ್ಲೇಖಿತ ಮದ್ದುಗಳನ್ನು ಮಾತ್ರ ಯುಎಇ ಗೆ ತರಬಹುದು. ಅದೇ ರೀತಿ ಅರೋಗ್ಯ ಇಲಾಖೆಯ ತಪಾಸಣೆ ಯ ಬಳಿಕವಷ್ಟೇ ಮದ್ದಿನೊಂದಿಗೆ ನೀವು ಪಾರಾಗಬಹುದು. ಈ ಬಗ್ಗೆ ಮಾಹಿತಿ ಇಲ್ಲದೆ ನೀವು ತರುವ ಮದ್ದುಗಳು ನಿಮ್ಮನ್ನು ಶಿಕ್ಷೆಗೆ ಗುರಿ ಪಡಿಸಬಹುದು.

ಯುಎಇಗೆ ಬರುವವರು ಗಮನಿಸಿರಿ:

  • ನಿಮ್ಮೂರ ವಿಮಾನ ನಿಲ್ದಾಣದಿಂದ ಕಾನೂನಿನ ಅನುಸಾರ ತರಬಹುದಾದ ಔಷಧಿಗಳು ಯುಎಇ ಯಲ್ಲಿ ನಿಷೇಧಿಸಲಾದ ಔಷದಿಯಾಗಿರ ಬಹುದು.
  • ನೋವು ನಿವಾರಕ ಔಷಧಿಯನ್ನು ಕಾನೂನಿನ ಅನುಸಾರವಾಗಿ ಸೇವಿಸಬಹುದಾದ ರೋಗಿಗಳು ಯುಎಇ ದೇಶದಲ್ಲಿ ಟ್ರಾನ್ಸಿಟ್ ವಿಸಾದಲ್ಲಿ ಬಂದಿಳಿಯುವ ಮುನ್ನ ಡ್ರಗ್ ಕಂಟ್ರೋಲ್ ಇಲಾಖೆ ಮತ್ತು ಆರೋಗ್ಯ ಸಚಿವಾಲಯದ ಅನುಮತಿ ಪಡೆದಿರಬೇಕು.
  • ರೋಗ ವಿವರಗಳನ್ನು ನಮೂದಿಸಿದ ಫಾರ್ಮಸಿ ಯ ಅಂಗೀಕಾರ ಲಗತ್ತಿಸಿದ ಮದ್ದಿನ ಚೀಟಿ ಇಂಗ್ಲೀಷ್ ಅಥವಾ ಅರಬಿಕ್ ಬಾಷೆಯಲ್ಲಿ ನಿಮ್ಮ ಬಳಿ ಇರಬೇಕು.
  • ಔಷಧಿ ತನ್ನ ಸ್ವಂತ ಆವಶ್ಯಕ್ಕಾಗಿ ಉಪಯೋಗಿಸುವಂತದ್ದು ಎನ್ನುವ ಬಗ್ಗೆ ನಿಮ್ಮ ದೇಶದ ಅಧಿಕೃತ ಸಾಕ್ಷ್ಯ ಬೇಕು.
  • 30 ದಿನಗಳಿಗಿಂತ ಹೆಚ್ಚು ಮದ್ದು ನೀವು ತರುವಂತಿಲ್ಲ.
  • ಪ್ರದಾನ ದಾಖಲೆಯನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ತೋರಿಸಿ ಅನುಮತಿ ಪಡೆಯಬೇಕು.
  • ಅಧಿಕೃತ ದಾಖಲೆ ಇದ್ದರೆ ಮಾತ್ರ ಮೂರು ತಿಂಗಳಿಗೆ ಸಾಕಾಗುವ ಮದ್ದು ತರುವುದು ಸಾಧ್ಯವಿದೆ.
  • ಆರೋಗ್ಯ ಇಲಾಖೆ ನಿಷೇಧಿಸಿದ ಮದ್ದುಗಳು ನಿಮ್ಮ ಬಳಿ ಇಲ್ಲ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಬೇಕು.
  • ಆರೋಗ್ಯ ಇಲಾಖೆ ನಿಷೇಧಿಸಿದ ಔಷಧಿಗಳ ಪಟ್ಟಿ ಜಾಲತಾಣದಲ್ಲಿ ಲಭ್ಯವಿದೆ. ಇದನ್ನು ಮುಂಚಿತವಾಗಿ ತಿಳಿದಿರುವುದು ಉತ್ತಮ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!