SSF ಹೂಹಾಕುವಕಲ್ಲು ಶಾಖೆ”ಜಸ್ಟಿಸ್ ಫಾರ್ ಆಸಿಫಾ” ಪ್ರತಿಭಟನಾ ಸಭೆ

ಹೂಹಾಕುವಕಲ್ಲು :ಜಮ್ಮುವಿನಲ್ಲಿ , ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಬರ್ಬರವಾಗಿ ಹತ್ಯೆಗೊಂಡ ಆಸಿಫಾಳಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಎಸ್.ಎಸ್.ಎಫ್ ಹೂಹಾಕುವಕಲ್ಲು ಶಾಖೆ ವತಿಯಿಂದ ಹೂಹಾಕುವಕಲ್ಲು ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಉಳ್ಳಾಲ ಡಿವಿಷನ್ ನಾಯಕರಾದ ಅಜೀಜ್ ಎಚ್.ಕಲ್ ಸ್ವಾಗತಿಸಿದರು. ಡಿವಿಷನ್ ನಾಯಕರಾದ ಸಿದ್ದೀಕ್ ಸಖಾಫಿ ಕಾಯಾರ್ ರವರು ಉದ್ಘಾಟಿಸಿದರು.

ಮನಾಝಿರ್ ಮಾಸ್ಟರ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಆಸಿಫಳ ಕೊಲೆ ಮತ್ತು ಸಾಮೂಹಿಕ ಅತ್ಯಾಚಾರವು ಜಾಗತಿಕ ಮಟ್ಟದಲ್ಲಿ ಭಾರತವು ತಲೆ ತಗ್ಗಿಸುವಂತಹ ಘಟನೆಯಾಗಿದ್ದು, ಪ್ರಕರಣದ ಪಾರದರ್ಶಕ ತನಿಖೆ ನಡೆಸಿ ಆರೋಪಿಗಳನ್ನು ಗಲ್ಲುಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.ಶಾಖಾ ಅಧ್ಯಕ್ಷರಾದ ಹಮೀದ್ ತೋಟಾಲ್, ಕೋಶಾಧಿಕಾರಿಯಾದ ಉಸ್ಮಾನ್ ಎನ್, ಎಸ್.ವೈ.ಎಸ್ ಬ್ರಾಂಚ್ ಅಧ್ಯಕ್ಷರಾದ ಮೋಹಿದಿನ್ ಟಿ, ಮುಂತಾದ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!