janadhvani

Kannada Online News Paper

ಆಸಿಫಾಳ ಹತ್ಯೆ ಖಂಡಿಸಿ ಎಸ್ಸೆಸ್ಸೆಫ್ ತುರ್ಕಳಿಕೆ ಶಾಖಾ ವತಿಯಿಂದ ಬೃಹತ್ ಪ್ರತಿಭಟನೆ

ಉಪ್ಪಿನಂಗಡಿ: ಭಾರತೀಯ ಪ್ರಜೆಯೊಬ್ಬನಿಗೆ ದೇಶದಲ್ಲಿ ಸಿಗಬೇಕಾದ ನ್ಯಾಯವು ಸಿಗುತ್ತಿಲ್ಲ.ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸುವುದನ್ನು ಕೂಡಾ ನಿಷೇಧಿಸಲಾಗುತ್ತಿದೆ. ಇದಕ್ಕೆಲ್ಲ ಕಾರಣ ದೇಶವನ್ನು ಆಳುವ ವರ್ಗೀಯ ಆಡಳಿತವಾಗಿದೆ. ಮುಗ್ಧ ಅಪ್ರಾಪ್ತ ಹೆಣ್ಣು ಜೀವಗಳನ್ನು ಅತ್ಯಾಚಾರ ಮಾಡಿ ಕೊನೆಗೆ ಅವರನ್ನು ಹತ್ಯೆ ಮಾಡಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿದೆ ಆಸಿಫಾಳ ಅತ್ಯಾಚಾರ ಮತ್ತು ಹತ್ಯೆ. ಕಾನೂನು ಕಟ್ಟಲೆಗಳು ಸಂವಿಧಾನಗಳು ಎಲ್ಲವೂ ಇದ್ದರೂ ಕೂಡ ಕೋಮು ಕಿರಾತಕರು ಸ್ವತಂತ್ರವಾಗಿ ಅಕ್ರಮ ಅನ್ಯಾಯಗಳನ್ನು ಮಾಡುತ್ತಿದ್ದಾರೆ. ಕಾರಣ ಇಲ್ಲಿನ ಕೋಮುವಾದಿ ಪಕ್ಷಗಳು, ಇಂತಹ ಕಿರಾತಕರಿಗೆ ಅಭಯ ಮತ್ತು ರಕ್ಷಣೆ ನೀಡುತ್ತಿದೆ. ಆಶಿಫಾ ಹಂತಕರು ದೇಶವನ್ನು ಆಳುವ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಾದ ಕಾರಣ ಆಡಳಿತಗಾರರು ಅಧಿಕಾರಿಗಳು ಯಾವುದೆ ನಾಚಿಕೆಯಿಲ್ಲದೆ ಇವರನ್ನು ರಕ್ಷಿಸುತ್ತಿದೆ.ಈ ಕಿರಾತಕರು ದೇಶದ ಶತ್ರುಗಳು, ದೇಶದ್ರೋಹಿಗಳಾಗಿದ್ದಾರೆ.ಆಸಿಫಾ ಮುಗ್ಧ ಕಂದಮ್ಮಗಳನ್ನು ನಿರಂತರ ಅತ್ಯಾಚಾರ ಮಾಡಿ ಹತ್ಯೆ ಮಾಡಿದ ರಾಕ್ಷಕರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ರಾಜ್ಯದ ಸಾವಿರಾರು ಶಾಖೆಗಳಲ್ಲಿ ಆಸಿಫಾಳ ಪರ ನ್ಯಾಯಕ್ಕಾಗಿ ಎಸ್ಸೆಸ್ಸೆಫ್ ಪ್ರತಿಭಟಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಕ್ತಿಯುತವಾಗಿ ಎಸ್ಸೆಸ್ಸೆಫ್ ಹೋರಾಟ ನಡೆಸಲಿದೆ. ದೇಶದಲ್ಲಿ ಅಭದ್ರತೆ ವ್ಯಾಪಿಸುತ್ತಿದೆ, ಅನ್ಯಾಯ ಮಿತಿಮೀರುತ್ತಿದೆ. ಕೋಮುಶಕ್ತಿಗಳ ಅಟ್ಟಹಾಸ ಮೆರೆಯುತ್ತಿದೆ. ಇದೆಲ್ಲದರ ವಿರುದ್ಧ ನಾವು ಶಕ್ತವಾಗಿ ಹೋರಾಟ ನಡೆಸುತ್ತೇವೆ. ರಾಜಕೀಯ ನಾಯಕರು ಕಣ್ಣು ತೆರೆಯದಿದ್ದಲ್ಲಿ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದೇವೆ ಎಂದು ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.ಖತೀಬ್ M.H ಸುಲೈಮಾನ್ ಸಅದಿ ಅಲ್ ಅಫ್ಳಲಿಯವರು ಉಧ್ಘಾಟಿಸಿದರು. ಶಾಖಾ ಉಪಾಧ್ಯಕ್ಷರಾದ ಹಾಶಿರ್ ಸಖಾಫಿಯವರು ಘೋಷಾವಾಕ್ಯ ಹೇಳಿದ ಬಳಿಕ ಮದ್ರಸ ಪ್ರಾಂಶುಪಾಲರಾದ ಮುಹಮ್ಮದ್ ಸಅದಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಜಮಾಅತ್ ಅಡಳಿತ ಸಮಿತಿಯ ಅಧ್ಯಕ್ಷರಾದ ಅಬ್ಬಾಸ್ ಕೊಲ್ಯ, ಕಾರ್ಯದರ್ಶಿ ಅಬೂಬಕ್ಕರ್ , ಎಸ್ವೈಎಸ್ಸ್ ಕಾರ್ಯದರ್ಶಿ ಮುಸ್ತಫಾ, ಮದ್ರಸಾ ಅಧ್ಯಾಪಕವೃಂದದವರು ಉಪಸ್ಥತರಿದ್ದರು. ಹಾಶಿರ್ ಸಖಾಫಿಯವರು ಸ್ವಾಗತಿಸಿ, ಕೊನೆಗೆ ಜುನೈದ್ ಕೊಲ್ಯ ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು

error: Content is protected !! Not allowed copy content from janadhvani.com