ಆಶಿಫಾ ಪ್ರಕರಣ – ಕೆ.ಸಿ ಎಫ್  ಸೌದಿ ಅರೇಬಿಯಾ ಖಂಡನೆ

ಸೌದಿಅರೇಬಿಯ:(ಜನಧ್ವನಿ ವಾರ್ತೆ) ಕಥುವಾದಲ್ಲಿ 8 ವರ್ಷದ ಬಾಲಕಿಯ   ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ಕೆ.ಸಿ ಎಫ್ ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ. ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೆ.ಸಿ ಎಫ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ರವರು  ಇದೊಂದು  ಅತ್ಯಂತ ಅಮಾನವೀಯ  ಹೀನ ಕೃತ್ಯ ಮತ್ತು   ಭಾರತ ವಿಶ್ವದ ಮುಂದೆ ತಲೆತಗ್ಗಿಸುವಂತೆ ಮಾಡಿದೆ. ಎಂದು ಅಭಿಪ್ರಾಯಪಟ್ಟರು. ಈ ಪೈಶಾಚಿಕ ಕೃತ್ಯವೆಸಗಿಸ ಕಾಮಪಿಪಾಸುಗಳನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಮತ್ತು ಅಪರಾಧಿಗಳ ಪರ ವಾಗಿ ಪ್ರತಿಭಟನೆ ಮಾಡಿದ ಬಿ.ಜೆಪಿ ಸಂಸದರಿಬ್ಬರ  ವಿರುದ್ದ ಮೊಕ್ಕದ್ದಮೆ ದಾಖಲಿಸಬೇಕೆಂದು  ಕೆ.ಸಿ ಎಫ್   ಸೌದಿ ಅರೇಬಿಯಾ ಅಗ್ರಹಿಸುತ್ತದೆ ಹಾಗೂ  ಕ್ರೈಮ್ ಬ್ರಾಂಚ್ ತನಿಖೆಯನ್ನು ಅಡ್ಡಿಪಡಿಸಿದ  ಜಮ್ಮುವಿನ ಬಾರ್ ಅಸೋಸಿಯೇಶನ್  ವಿರುದ್ದ  ಸುಪ್ರಿಮ್ ಕೋರ್ಟ್ ಕಠಿನ ಕ್ರಮ ತೆಗೆದುಕೊಳ್ಳಬೇಕೆಂದು ಕೆ.ಸಿ ಎಫ್ ಅಪೇಕ್ಷಿಸುತ್ತದೆ.

ಈ ಸಂಧರ್ಭದಲ್ಲಿ  ರಾಷ್ಟ್ರೀಯ ಕಾರ್ಯದರ್ಶಿ   ಪಾರೂಖ್ ಕಾಟಿಪಲ್ಲ  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!