ಸೌದಿ: ಟ್ರಾಫಿಕ್ ನಿಯಮ ಉಲ್ಲಂಘಿಸದ ಚಾಲಕರಿಗೆ ಇನ್ಸೂರೆನ್ಸ್‌ನಲ್ಲಿ ರಿಯಾಯಿತಿ

ರಿಯಾದ್(ಜನಧ್ವನಿ)ಡಿ.29: ಟ್ರಾಫಿಕ್ ನಿಯಮಗಳನ್ನು ಪಾಲಿಸುತ್ತಾ ಅಪಘಾತಗಳು ಸಂಭವಿಸದಂತೆ ವಾಹನ ಚಲಾಯಿಸುವ ಚಾಲಕರಿಗೆ ವಾಹನ ಇನ್ಸೂರೆನ್ಸ್ ಪಾಲಿಸಿಯಲ್ಲಿ ರಿಯಾಯಿತಿ ನೀಡಲಾಗುವುದು ಎಂದು ಸೌದಿ ಅರೇಬಿಯಾದ ಮಣಿಟರಿ ಅಥಾರಿಟಿಯ ಪ್ರಕಟನೆ ತಿಳಿಸಿದೆ. ಈ ಕುರಿತ ಮಾಹಿತಿಯನ್ನು ಇನ್ಸೂರೆನ್ಸ್ ಕಂಪೆನಿಗಳಿಗೂ ತಿಳಿಸಲಾಗಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಜಾಗರೂಕತೆಯಿಂದ ವಾಹನ ಚಲಾಯಿಸುವವರಿಗೆ ಪ್ರಸ್ತುತ ಇನ್ಸೂರೆನ್ಸ್ ಪಾಲಿಸಿಯಲ್ಲಿ ಸೌಜನ್ಯವಿದ್ದು, ಮುಂದಿನ ವರ್ಷ ಜೂನ್ ವರೆಗೆ ಮುಂದುವರಿಸುವಂತೆ ಇನ್ಸೂರೆನ್ಸ್ ಕಂಪೆನಿಗಳಿಗೆ ತಿಳಿಸಲಾಗಿದೆ.ಒಂದು ವರ್ಷ ಇನ್ಸೂರೆನ್ಸ್ ಕ್ಲೈಂ ಮಾಡದ ಪಾಲಿಸಿದಾರರಿಗೆ 15 ಶೇಕಡಾ ರಿಯಾಯಿತಿ ಲಭಿಸುತ್ತದೆ. ಎರಡು ವರ್ಷ ಕ್ಲೈಂ ಮಾಡದವರಿಗೆ 25 ಶೇಕಡಾ ರಿಯಾಯತಿ ಲಭಿಸಲಿದೆ. ಮೂರು ವರ್ಷ ಕ್ಲೈಂ ಮಾಡದವರಿಗೆ 30 ಶೇಕಡಾ ರಿಯಾಯಿತಿ ನೀಡುವುದಾಗಿ ಅಥಾರಿಟಿ ತಿಳಿಸಿದೆ.

ಒಂದೇ ಕಂಪೆನಿಯ ಇನ್ಸೂರೆನ್ಸ್ ಪಾಲಿಸಿಯನ್ನು ಮುಂದುವರಿಸುವವರಿಗೆ ಶೇಕಡಾ 10 ಅಧಿಕ ರಿಯಾಯಿತಿ ನೀಡಲಿದೆ. ಹೊಸ ವಾಹನ ಖರೀದಿಸುವವರು, ಇನ್ಸೂರೆನ್ಸ್ ಮಾಡಿಸದವರು, ಪಾಲಿಸಿ ವಾಯಿದೆ ಮುಗಿದು ನವೀಕರಣ ಮಾಡದವರಿಗೆ ಪ್ರೇರಣೆ ನೀಡುವ ಸಲುವಾಗಿ ಈ ಕಾನೂನು ಜಾರಿಗೆ ತರಲಾಗಿದೆ.

ಇನ್ಸೂರೆನ್ಸ್ ಮಾಡಿಸದೆ ವಾಹನ ಚಲಾಯಿಸುವವರಿಗೆ ಟ್ರಾಫಿಕ್ ಇಲಾಖೆ ದಂಡ ವಿಧಿಸುತ್ತದೆ. ದೇಶದ ಸರ್ವ ವಾಹನಗಳನ್ನು ಇನ್ಸೂರೆನ್ಸ್ ಪಾಲಿಸಿಯ ಸುರಕ್ಷೆ ಇರುವಂತೆ ಮಾಡಲು ಮಣಿಟರಿ ಅಥಾರಿಟಿ ಮತ್ತು ಟ್ರಾಫಿಕ್ ಡೈರೆಕ್ಟರೇಟ್ ಕರಾರು ಮಾಡಿತ್ತು.

Leave a Reply

Your email address will not be published. Required fields are marked *

error: Content is protected !!