ಬಹುನಿರೀಕ್ಷಿತ ಚಿತ್ರದುರ್ಗ ಇಹ್ಸಾನ್ ಸಮುಚ್ಚಯಕ್ಕೆ ಶಿಲಾನ್ಯಾಸ

ತ್ರದುರ್ಗ(ಜನಧ್ವನಿ)ಡಿ.28:ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಇಹ್ಸಾನ್ ಕರ್ನಾಟಕ ಇದರ ಬಹು ನಿರೀಕ್ಷಿತ ಚಿತ್ರದುರ್ಗ ಇಹ್ಸಾನ್ ಸಮುಚ್ಚಯಕ್ಕೆ ಇಂದು ಶಿಲ್ಯಾನ್ಯಾಸ ಮಾಡುವ ಮೂಲಕ ಬಹುದಿನಗಳ ಕನಸು ನನಸಾಗುವಂತಾಯ್ತು.ಈ ಸಮುಚ್ಚಯದಲ್ಲಿ ಆರಂಭಿಸಲಾಗುವ ಇಸ್ಲಾಮಿಕ್ ದಅ್’ವಾ ಕಾಲೇಜ್ ಕಟ್ಟಡಕ್ಕೆ ಇಹ್ಸಾನ್ ರಾಜ್ಯಾಧ್ಯಕ್ಷರಾದ  ಬಹು:ಎನ್.ಕೆ.ಎಂ ಶಾಫಿ ಸಅದಿ ಬೆಂಗಳೂರು ರವರು ಶಿಲಾನ್ಯಾಸ ಗೈದರು. ಬಹು ಸಯ್ಯಿದ್ ಶಹೀದುದ್ದೀನ್ ತಂಙಳ್ ದುವಾ ನೆರವೇರಿಸಿದರು.ಇಹ್ಸಾನ್ ನಾಯಕರಾದ ಬಹು:ಯಾಖೂಬ್ ಯೂಸುಫ್, ಹಮೀದ್ ಮುಸ್ಲಿಯಾರ್, ಬಿ.ಎ ಇಬ್ರಾಹಿಂ ಸಖಾಫಿ ದಾವಣಗೆರೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!