janadhvani

Kannada Online News Paper

ದುಬೈ: ಈ ಕಾರಣಗಳಿಂದ ವೀಸಾ ಲಭಿಸುವುದು ವಿಳಂಬವಾಗಲಿದೆ

ದುಬೈ: ಪ್ರತಿ ವರ್ಷ, ಜಗತ್ತಿನ ವಿವಿಧ ಭಾಗಗಳಿಂದ ಸಾವಿರಾರು ಜನರು ಯುಎಇಗೆ ಬರುತ್ತಾರೆ.. ಕೆಲವರು ವಿನೋದ ಸಂಚಾರಕ್ಕಾಗಿ ಬರುವವರಾದರೆ, ಇನ್ನು ಕೆಲವರು ಕೆಲಸ ಹುಡುಕುತ್ತಾ ಬರುವವರಾಗಿದ್ದಾರೆ. ಭಾರತೀಯರು ಅತ್ಯಂತ ಪ್ರೀತಿಸುವ ದೇಶಗಳ ಪೈಕಿ ಒಂದಾಗಿದೆ ಯುಎಇ. ಯುಎಇಯಲ್ಲಿ ಪ್ರತೀ ವರ್ಷ ವಿಸಾ ಪಡೆಯಲು ಲಭಿಸುವ ಅರ್ಜಿಗಳೂ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಯುಎಇ ಸಂದರ್ಶನದ ಕುರಿತು ಕೆಲವು ಮಾಹಿತಿಗಳು ಇಲ್ಲಿವೆ.

ಯುಎಇಗೆ ಸಂದರ್ಶನ ಮಾಡಬೇಕಾದರೆ ವಿಸಾ ಕಡ್ಡಾಯವಾಗಿದೆ. ಕೆಲವು ದೇಶಗಳ ಜನತೆಗೆ ಯುಎಇ ತಲುಪುವ ವಿಸಾ ಸಾಕಾದರೂ, ಯಾವ ದೇಶದಿಂದ ಯಾತ್ರಿಕರು ಬಂದಿದ್ದಾರೆ ಎನ್ನುವ ವಿವರ ಪ್ರಮುಖವಾಗಿದೆ.
ಜನರಲ್ ಡೈರಕ್ಟರೇಟ್ ಆಫ್ ರೆಸಿಡೆನ್ಸಿ ಆ್ಯಂಡ್ ಫಾರಿನ್ ಅಫೇರ್ಸ್ ಎನ್ನುವ ವೆಬ್ ಸೈಟ್ ಮೂಲಕ ಪರಿಶೋಧನೆ ನಡೆಸಿದ ನಂತರ ಯುಎಇಯ ಯಾತ್ರೆಯನ್ನು ನಿಗದಿಪಡಿಸಬಹುದು. ವಿಸಾಗೆ ಸಂಭಂದಿಸಿದ ವಿಷಯಗಳನ್ನು ತಿಳಿಯಲು ದುಬೈ ಡಿಪಾರ್ಟ್ಮೆಂಟ್ ಆಫ್ ನಾಚ್ಯುರಲೈಸೇಷನ್ ಆ್ಯಂಡ್ ರೆಸಿಡೆನ್ಸಿ ಎಂಬ ವೆಬ್ ಸೈಟ್ ನ್ನು ಸಂದರ್ಶಿಸುವುದು ಉತ್ತಮ.

ವಿಸಾಗಾಗಿನ ಅಪೇಕ್ಷೆಯನ್ನು ಸಲೀಸಾಗಿ ಸಲ್ಲಿಸಬಹುದಾಗಿದೆ. ಅಪೇಕ್ಷಾ ಫಾರಂ ಬರ್ತಿ ಮಾಡಿದ ನಂತರ ಅವಶ್ಯಕ ದಾಖಲೆಗಳನ್ನು ಸಂಗ್ರಹಿಸಬೇಕು. ಪಾಸ್‌ಪೋರ್ಟ್, ದುಬೈ ಯಲ್ಲಿ ನಿಮ್ಮನ್ನು ಬರಮಾಡಿಕೊಳ್ಳುವವರ ಅಥವಾ ಕಂಪನಿಯ ಪತ್ರ, ಮರಳುವ ಟಿಕೆಟ್ (ಟೂರಿಸ್ಟ್ ವಿಸಾ) ಮುಂತಾದವುಗಳ ಕಾಪಿಗಳು ಬೇಕು. ಹೆಚ್ಚಿನ ಮಾಹಿತಿಗಾಗಿ ಯಾತ್ರಾ ಏಜೆನ್ಸಿ ಅಥವಾ ಪಿಆರ್‌ಒ ರನ್ನು ಸಂಪರ್ಕಿಸಬಹುದು. ಸಾಧಾರಣವಾಗಿ ಯುಎಇ ವಿಸಾದ ಕಾಲಾವಧಿ ಮೂವತ್ತು ದಿವಸಗಳಾಗಿವೆ. ದೀರ್ಘ ಸಂದರ್ಶನ ವಿಸಾಗೆ ತೊಂಬತ್ತು ದಿನಗಳ ಕಾಲಾವಧಿ ಇದೆ. ಎಷ್ಟು ದಿನಗಳಿಗಾಗಿ ನೀವು ಅರ್ಜಿ ಸಲ್ಲಿಸುತ್ತೀರೋ ಅದರನುಸಾರ ಶುಲ್ಕ ಪಾವತಿಸಬೇಕಾಗಿದೆ.

ಕೆಲವು ಸಂದರ್ಭಗಳಲ್ಲಿ ವಿಸಾ ಪಡೆಯಲು ಸಲ್ಲಿಸಲಾದ ಅರ್ಜಿಗಳು  ಈ ಕೆಳಗಿನ ಕಾರಣಗಳಿಗಾಗಿ ಅಸಿಂಧುವಾಗುವ ಸಂಭವವಿದೆ.

  1. VISA-ON-ARRIVAL
    ರೆಸಿಡೆನ್ಸ್ ವಿಸಾ ಪಡೆದ ನಂತರ ಅದನ್ನು ರದ್ದುಗೊಳಿಸದೆ ಯುಎಇ ತೊರೆದರೆ ನಂತರ ಮರಳುವಾಗ ತೊಂದರೆ ಅನುಭವಿಸಬೇಕಾಗುತ್ತದೆ.ಪಿಆರ್‌ಒರನ್ನು ಭೇಟಿಯಾಗಿ ಎಮಿಗ್ರೇಷನ್ ವಿಭಾಗದಲ್ಲಿ ಹಳೆಯ ರೆಸಿಡೆನ್ಸ್ ವಿಸಾವನ್ನು ಕ್ಲೀಯರ್ ಮಾಡಿದರೆ ಎಲ್ಲವೂ ಸುಗಮವಾಗಲಿದೆ.
  2. ಹಸ್ತಾಕ್ಷರಗಳಲ್ಲಿರುವ ಪಾಸ್‌ಪೋರ್ಟ್‌ ಗಳನ್ನು ಯುಎಇ ಎಮಿಗ್ರೇಷನ್ ನಿರಾಕರಿಸುತ್ತದೆ.
  3. ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವರು, ಅಂತಹ ಹಿನ್ನೆಲೆ ಇರುವವರು, ಯುಎಇಯಲ್ಲಿ ಮೋಸ ಬಗೆದವರು, ಕೀಳಾಗಿ ನಡೆಕೊಂಡವರ ಅರ್ಜಿಗಳು   ಅಸಾದುವಾಗುತ್ತದೆ.
  4. ಈ ಹಿಂದೆ ಟೂರಿಸ್ಟ್ ವಿಸಾಕಾಗಿ ಅರ್ಜಿ ಸಲ್ಲಿಸಿ ಯುಎಇಗೆ ತೆರಳದೇ ಇದ್ದರೂ ತೊಂದರೆ ಇದೆ. ಇದು ಕಾರ್ಮಿಕ ವಿಸಾಗೂ ಅನ್ವಯವಾಗುತ್ತದೆ. ಟ್ರಾವಲ್ ಏಜೆನ್ಸಿಯ ಪಿಆರ್‌ಒ ಅಥವಾ ಸ್ಪೋನ್ಸರ್ ಹಿಂದಿನ ವಿಸಾವನ್ನು ಕ್ಯಾನ್ಸಲ್ ಮಾಡಿದರೆ ಅದು ನಿವಾರಣೆಯಾಗಬಹುದು.
  5. ವಿಸಾ ಅರ್ಜಿಯಲ್ಲಿ  ನೀಡುವ ಹೆಸರು, ಪಾಸ್‌ಪೋರ್ಟ್ ಸಂಖ್ಯೆ, ಪ್ರೊಫಶನ್ ಕೋಡ್ ಮುಂತಾದವುಗಳಲ್ಲಿನ ತಪ್ಪುಗಳು ವಿಸಾ ಅನುಮತಿ ವಿಳಂಬವಾಗಲು ಕಾರಣವಾಗಬಹುದು. ಕೆಲವೊಮ್ಮೆ ಅಸಿಂದುವಾಗಲೂ ಬಹುದು.
  6. ಪಾಸ್‌ಪೋರ್ಟ್ ನ ಚಿತ್ರ ಅಸ್ಪಷ್ಟವಾಗಿರುವುದು, ಯುಎಇ ಆನ್ಲೈನ್ ಸಿಸ್ಟಮ್ ನಲ್ಲಿ ಅರ್ಜಿ  ಸಲ್ಲಿಸುವಾಗ ವ್ಯಕ್ತವೂ ಸ್ಪಷ್ಟವೂ ಅಲ್ಲದ ಚಿತ್ರವನ್ನು ನೀಡಿದರೂ ವಿಸಾ ಕ್ರಮ ವಿಳಂಬವಾಗಬಹುದು. ಈ ಕಾರಣಕ್ಕಾಗಿ ವಿಸಾ ನಿರಾಕರಿಸಲೂ ಬಹುದು.

(ವಿಸಾ ನಿಯಮಗಳಲ್ಲಿ ಯಾವುದೇ ಸಮಯ ಬದಲಾವಣೆ ಸಾಧ್ಯತೆಯಿದೆ. ಯಾತ್ರೆ ಹೊರಡಲು ಉದ್ದೇಶಿಸಲಾದ ವಿಮಾನ ಕಂಪೆನಿಯೊಂದಿಗೆ ಅಥವಾ ವಿದೇಶಾಂಗ ಸಚಿವಾಲಯದೊಂದಿಂಗೆ ಸಂಪರ್ಕಿಸಿ, ಸ್ಪಷ್ಟತೆ ಲಭಿಸಿದ ನಂತರ ಮಾತ್ರ ಯಾತ್ರೆ ಹೊರಡುವುದು ಉತ್ತಮ)

error: Content is protected !! Not allowed copy content from janadhvani.com