ಸಂವಿಧಾನ ವಿರೋದಿ ಹೇಳಿಕೆ: ಕ್ಷಮೆ ಕೋರಿದ ಅನಂತಕುಮಾರ್ ಹೆಗ್ಡೆ

ನವದೆಹಲಿ(ಜನಧ್ವನಿ):‘ಅಪ್ಪ ಅಮ್ಮನ ಗುರುತು ಇಲ್ಲದಿರುವವರು ಜಾತ್ಯತೀತರು. ನಾವು ಸಂವಿಧಾನ ಬದಲಿಸುತ್ತೇವೆ. ಸಂವಿಧಾನ ಬದಲಿಸಲೆಂದೇ ನಾವು ಬಂದಿರುವುದು’ ಎಂಬ ಸಂವಿಧಾನ ಮತ್ತು ಜಾತ್ಯತೀತರ ಬಗ್ಗೆ ತಾವು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಗುರುವಾರ ಲೋಕಸಭೆಯಲ್ಲಿ ಕ್ಷಮೆ ಕೋರಿದ್ದಾರೆ.

‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೋರುತ್ತೇನೆ’ ಎಂದು ಹೆಗಡೆ ಹೇಳಿದ್ದಾರೆ.‘ನನಗೆ ಸಂವಿಧಾನ, ಸಂಸತ್ತು ಮತ್ತು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಬಗ್ಗೆ ಅಪಾರ ಗೌರವವಿದೆ. ನನಗೆ ಸಂವಿಧಾನವೇ ಸರ್ವೋಚ್ಛ. ದೇಶದ ಪ್ರಜೆಯಾಗಿ ನಾನು ಸಂವಿಧಾನಕ್ಕೆ ವಿರುದ್ಧವಾಗಿ ನಡೆಯಲಾರೆ’ ಎಂದು ಹೆಗಡೆ ತಿಳಿಸಿದ್ದಾರೆ.

ಹೇಳಿಕೆಯನ್ನು ಖಂಡಿಸಿದ್ದ ಕಾಂಗ್ರೆಸ್‌ ಸದಸ್ಯರು ಅನಂತಕುಮಾರ್‌ ಹೆಗಡೆ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವಂತೆ ಆಗ್ರಹಿಸಿ ಬುಧವಾರ ಸಂಸತ್‌ನ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿದ್ದರು.

Leave a Reply

Your email address will not be published. Required fields are marked *

error: Content is protected !!