janadhvani

Kannada Online News Paper

ಜ.12: ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ನಾಯಕರ ‘SNAHP- 22’- ಕುಂದಾಪುರ ದರ್ಗಾ ಝಿಯಾರತ್ ನೊಂದಿಗೆ ಚಾಲನೆ

ಉಡುಪಿ :”Fortune Dynamically “ಭವಿಷ್ಯ ಕ್ರಿಯಾತ್ಮಕ ವಾಗಲಿ ಎಂಬ
ಘೋಷಣೆ ಯೊಂದಿಗೆ SNAHP-22
(Spiritual Network And Hopeful path) ಎಂಬ ತಲೆನಾಮದೊಂದಿಗೆ ಸಾಂಘಿಕ ಸಬಲೀಕರಣಕ್ಕಾಗಿ ಮಹತ್ವಾಕಾಂಕ್ಷೆಯ ಅಭಿಯಾನವನ್ನು ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಕ್ಯೂಡಿ ವಿಭಾಗವು ಜಿಲ್ಲೆಯಾದ್ಯಂತ ಹಮ್ಮಿಕೊಂಡಿದೆ.

ಶಾಖಾ ಮಟ್ಟ:
ಜಿಲ್ಲೆಯ ಪ್ರತಿಯೊಂದು ಶಾಖೆಗಳಲ್ಲೂ ನಡೆಯಲಿದ್ದು ಇದರ ಪ್ರಾಥಮಿಕ ಹಂತವಾಗಿ ತಿಂಗಳಿಗೊಂದು ವಿಶಿಷ್ಟ ಶೈಲಿಯ ತರಭೇತಿ ಎಂಬಂತೆ ಮೂರು ತಿಂಗಳು ನಡೆಯಲಿದೆ.

2022 ಜನವರಿ 10-20 ಡಿವಿಷನ್ ಭೇಟಿ
ಹತ್ತು ದಿನಗಳಲ್ಲಿ ಐದು ಡಿವಿಷನ್ ಭೇಟಿಯಾಗಲಿದೆ.

ಕುಂದಾಪುರ ಡಿವಿಷನ್ ಭೇಟಿ ದಿನಾಂಕ 12-01-2022 ಸಂಜೆ 5ಗಂಟೆಗೆ ಹಯಾತುಲ್ ಔಲಿಯಾ ಯೂಸುಫ್ ವಲಿಯುಲ್ಲಾಹಿ (ರ) ರ ದರ್ಗಾ ಝಿಯಾರತ್ ನೊಂದಿಗೆ ಅದಿಕೃತವಾಗಿ ಚಾಲನೆ ಗೊಳ್ಳಲಿದೆ.

ರಾತ್ರಿ 7ಗಂಟೆಗೆ ಡಿವಿಶನ್ ನಾಯಕರ ಮುಲಾಕತ್ ಕಾರ್ಯಕ್ರಮ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಲ್ಕಟ್ಟ ಅಬ್ದುರ್ರಹ್ಮಾನ್ ರಿಝ್ವಿ, ಪಿಎಂಎ ಅಶ್ರಫ್ ರಝಾ ಅಂಜದಿ, ಸುಬ್ಹಾನ್ ಅಹ್ಮದ್ ಹೊನ್ನಾಳ,
ಕೆಎಸ್ಎಂ ಮನ್ಸೂರ್ ಉಡುಪಿ, ಇಬ್ರಾಹಿಂ ಮಜೂರು, ಅಬ್ದುರವೂಪ್ ಖಾನ್ ಕುಂದಾಪುರ, ಎನ್ ಸಿ ರಹೀಂ ಕಾರ್ಕಳ, ಅಡ್ವಕೇಟ್ ಇಲ್ಯಾಸ್ ನಾವುಂದ, ಇಬ್ರಾಹಿಂ ಮಾನಿಕೊಳಲು, ಅಶ್ರಪ್ ಮುಸ್ಲಿಯಾರ್ ಕುಂದಾಪುರ, ಶಾಹುಲ್ ಹಮೀದ್ ನಈಮಿ, ಮುಹ್ಯುದ್ದೀನ್ ಸಖಾಫಿ ಪಯ್ಯಾರ್, ಮಜೀದ್ ಹನೀಫಿ, ತ್ವಾಹಿರ್ ಮೂಡುಗೋಪಾಡಿ, ರಕೀಬ್ ಕನ್ನಂಗಾರ್, ಸಮೀರ್ ಕೋಡಿ, ನಿಝಾಂ ಪಡುಕೆರೆ ಮುಂತಾದ ನಾಯಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !! Not allowed copy content from janadhvani.com