janadhvani

Kannada Online News Paper

ಪ್ರಪಂಚವನ್ನು ಸುತ್ತುವ ಬದಲು, ಜಗತ್ತನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಸ ಬಹುದಾದ “ರಿಯಾದ್ ಸೀಸನ್”

ಇಸ್ಹಾಕ್ ಸಿ.ಐ.ಫಜೀರ್

ಸೌದಿ ಅರೇಬಿಯಾ: ರಾಜಧಾನಿ ರಿಯಾದ್‌ನಲ್ಲಿ ಬುಧವಾರ ಐತಿಹಾಸಿಕ “ರಿಯಾದ್ ಸೀಸನ್” ವಿದ್ಯುಕ್ತವಾಗಿ
ಆರಂಭಗೊಂಡವು.

ರಿಯಾದ್ ಸೀಸನ್‌ನಲ್ಲಿ ಎಲ್ಲಾ ವಯೋಮಾನದವರಿಗೆ ಸೂಕ್ತವಾದ ಹಲವಾರು ಮನರಂಜನಾ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳು ನಡೆಯಲಿವೆ. ವರ್ಣರಂಜಿತ ಪಟಾಕಿಗಳು ರಾಜಧಾನಿಯ ಆಕಾಶವನ್ನು ವಿವಿಧ ಸ್ಥಳಗಳಲ್ಲಿ ಬಣ್ಣದ ಚಿತ್ತಾರವನ್ನು ಮೂಡಿಸಲಿವೆ.

ಅಕ್ಟೋಬರ್ 26 ರಿಂದ ಆರಂಭಗೊಂಡು 2022 ರ ಮಾರ್ಚ್ ಅಂತ್ಯದವರೆಗೆ ನಡೆಯಲಿರುವ ರಿಯಾದ್ ಸೀಸನ್‌ನಲ್ಲಿ
ಪ್ರೇಕ್ಷಕರ ಗಮನ ಸೆಳೆಯುವ103 ಕ್ಕೂ ಹೆಚ್ಚು ಆಟಗಳು ನಡೆಯಲಿವೆ.

ಡ್ರೀಮ್ ಲ್ಯಾಂಡ್ ಕಾರ್ನಿವಲ್, ಸ್ನೋ ಫಾರೆಸ್ಟ್, ಮ್ಯಾಜಿಕ್ ಬಾಕ್ಸ್, ಭಯಾನಕ ಸಾಹಸಗಳು, ವಂಡರ್ ರೋಡ್, ಮತ್ತು ಚಳಿಗಾಲದ ಹಬ್ಬ, ಪ್ರವಾಸಿಗರ ಆಟಗಳು, ಸ್ಕೇಟಿಂಗ್‌ ರಿಂಕ್ ಪ್ರದರ್ಶನಗಳು ಮತ್ತು ಮನರಂಜನೆ, ಸಾಂಸ್ಕೃತಿಕ ಅನುಭವಗಳನ್ನು ಪ್ರೇಕ್ಷಕರಿಗೆ ಇಲ್ಲಿ ಕಣ್ತುಂಬಿಕೊಂಡು ಸಂಭ್ರಮಿಸಬಹುದು.

“ರಿಯಾದ್ ಸೀಸನ್” ಅನ್ನು 5.4 ಮಿಲಿಯನ್ ಚದರ ಮೀಟರ್ ಪ್ರದೇಶದಲ್ಲಿ 14 ವಿವಿಧ ವಲಯಗಳೊಂದಿಗೆ ಆಯೋಜಿಸಲಾಗಿದೆ,
ಪ್ರತಿಯೊಂದೂ ವೈವಿಧ್ಯಮಯ ಘಟನೆಗಳು ಮತ್ತು ಹೊಸ ಅನುಭವಗಳನ್ನು ಒಳಗೊಂಡಿರುತ್ತದೆ.

“ಪ್ರಪಂಚವನ್ನು ಸುತ್ತುವ ಬದಲು, ನಾವು ಜಗತ್ತನ್ನು ಒಂದೇ ಸ್ಥಳದಲ್ಲಿ ನಿಮ್ಮ ಮುಂದೆ ತಂದಿದ್ದೇವೆ” ಎಂದು ರಿಯಾದ್ ಸೀಸನ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ.

error: Content is protected !! Not allowed copy content from janadhvani.com