ಬೆಂಗಳೂರು:ಐಟಿ-ಬಿಟಿ ಉದ್ಯೋಗಿಗಳು ಹಾಗೂ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿರುವಂತೆ ರಾಜ್ಯದಲ್ಲಿಯೂ ಐದು ದಿನ ಕೆಲಸ, ಎರಡು ದಿನ ರಜಾ ಪದ್ಧತಿ ಜಾರಿಗೆ ಬರಲಿದೆ!
ಹೌದು, ಸರ್ಕಾರಿ ನೌಕರರ ಸಂಘ ಇಂಥದ್ದೊಂದು ಮನವಿಯನ್ನು 6ನೇ ವೇತನ ಆಯೋಗಕ್ಕೆ ಮಾಡಿಕೊಂಡಿದ್ದು, 5 ದಿನ ಕೆಲಸ ಹಾಗೂ 2ದಿನ (ಶನಿವಾರ ಮತ್ತು ಭಾನುವಾರ) ರಜಾ ಜಾರಿ ಕುರಿತಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಸಾಧಕ-ಬಾಧಕಗಳ ಬಗ್ಗೆ ಆಯೋಗ ಅಧ್ಯಯನ ನಡೆಸುತ್ತಿದೆ.
ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚನೆಯಾಗಿರುವ 6ನೇ ವೇತನ ಆಯೋಗ, ಮನವಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಪರಿಷ್ಕರಣೆ ಮೇಲೆಯೂ ತನ್ನ ಗಮನ ಹರಿಸಿದೆ. ವಾರದಲ್ಲಿ ಎರಡು ದಿನ ರಜಾ ನೀಡುವ ಪದ್ಧತಿ ಆಡಳಿತಕ್ಕೆ ಉತ್ತಮವೆಂದು ಮನವರಿಕೆಯಾಗಿ, ಸರ್ಕಾರ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದಲ್ಲಿ ಸರ್ಕಾರಿ ನೌಕರರು ಸಹ ವಾರದಲ್ಲಿ 2 ದಿನ ರಜೆಯ ಮಜಾ ಅನುಭವಿಸುವ ಕಾಲ ದೂರವಿಲ್ಲ.