janadhvani

Kannada Online News Paper

ಸೌದಿ: ಅ.10 ರಿಂದ 2 ಡೋಸ್ ವ್ಯಾಕ್ಸಿನ್ ಪಡೆದವರಿಗೆ ಮಾತ್ರ ಹೊರಹೋಗಲು ಅನುಮತಿ

ರಿಯಾದ್: ಸೌದಿ ಅರೇಬಿಯಾದಲ್ಲಿ, ಎರಡು ಡೋಸ್ ಲಸಿಕೆ ತೆಗೆದುಕೊಳ್ಳದವರಿಗೆ ವಾಸ ಸ್ಥಳದಿಂದ ಹೊರಹೋಗಲು ಅವಕಾಶವಿಲ್ಲ. ಈ ಆದೇಶವು ಅಕ್ಟೋಬರ್ 10, 2021 ರಿಂದ ಜಾರಿಗೆ ಬರಲಿದೆ.

ಮೊದಲು ಒಂದು ಡೋಸ್ ತೆಗೆದುಕೊಂಡವರು ಕೂಡ ಎರಡು ಡೋಸ್ ತೆಗೆದುಕೊಳ್ಳಬೇಕು. ಸೌದಿ ವ್ಯಾಪಾರ ಸಂಸ್ಥೆಗಳು, ಶಾಪಿಂಗ್ ಮಾಲ್‌ಗಳು, ಟ್ಯಾಕ್ಸಿಗಳು, ಸಾರ್ವಜನಿಕ ಸಾರಿಗೆ, ವಿಮಾನಗಳು ಮತ್ತು ರೈಲು ಸೇವೆಗಳಿಗೆ ಪ್ರವೇಶ ಪಡೆಯಲು ಈಗ ಎರಡು ಡೋಸ್ ಲಸಿಕೆ ಕಡ್ಡಾಯವಾಗಿದೆ. ಗೃಹ ಸಚಿವಾಲಯ ಈ ಆದೇಶ ಹೊರಡಿಸಿದೆ.

error: Content is protected !! Not allowed copy content from janadhvani.com