janadhvani

Kannada Online News Paper

ಕತಾರ್‌: ಕೋವಿಡ್ ನಿರ್ಬಂಧಗಳ ಸಡಿಲಿಕೆ- ಮಸೀದಿಗಳಲ್ಲಿ ಸಾಮಾಜಿಕ ಅಂತರ ಅಗತ್ಯವಿಲ್ಲ

ದೋಹಾ: ಕತಾರ್‌ನಲ್ಲಿ ಹೆಚ್ಚಿನ ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ನಾಲ್ಕನೇ ಹಂತದ ವಿನಾಯಿತಿಗಳ ಭಾಗವಾಗಿ, ಶುಕ್ರವಾರದ ಪ್ರಾರ್ಥನೆ ಸೇರಿದಂತೆ ಮಸೀದಿಗಳಲ್ಲಿ ಸಾಮಾಜಿಕ ಅಂತರ ಅಗತ್ಯವಿಲ್ಲ.

ಆದಾಗ್ಯೂ, ಶುಕ್ರವಾರದ ಜುಮುಅ ಪ್ರಾರ್ಥನೆಯ ಮುಂಚಿನ ಖುತುಬಾದ ಸಮಯದಲ್ಲಿ ಒಂದು ಮೀಟರ್ ಅಂತರದಲ್ಲಿ ಕುಳಿತುಕೊಳ್ಳಬೇಕು. ಶೌಚಾಲಯಗಳನ್ನು ತೆರೆಯಬಹುದು. ಕಡಿಮೆ ಜನದಟ್ಟಣೆಯ ಮಸೀದಿಗಳಲ್ಲಿ ಅಂಗ ಸ್ನಾನಕ್ಕಿರುವ ಸೌಲಭ್ಯಗಳನ್ನು ತೆರೆಯಬಹುದು.

ಅದೇ ಸಮಯದಲ್ಲಿ, ಪ್ರೇಯರ್ ಮ್ಯಾಟ್, ಇಹ್ತಿರಾಸ್ಗಳಲ್ಲಿ ಹಸಿರು ಸ್ಥಿತಿ ಮತ್ತು ಮಾಸ್ಕ್ ಧರಿಸುವುದು ಮುಂತಾದ ನಿಯಮಗಳನ್ನು ಕಠಿಣವಾಗಿ ಪಾಲಿಸಬೇಕು ಎಂದು ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಹೇಳಿದೆ. ಹೊಸ ವಿನಾಯಿತಿಗಳು ಅಕ್ಟೋಬರ್ 3 ರಿಂದ ಜಾರಿಗೆ ಬರಲಿವೆ.

error: Content is protected !! Not allowed copy content from janadhvani.com