janadhvani

Kannada Online News Paper

ಅಸ್ಸಾಂ: ಜನಸಾಮಾನ್ಯರ ಮೇಲೆ ಮಾರಕ ಹಲ್ಲೆ ಮತ್ತು ಮಾಧ್ಯಮದವನ ಕ್ರೌರ್ಯ- ಎಸ್ಸೆಸ್ಸೆಫ್ ತೀವ್ರ ಖಂಡನೆ

ಮಂಗಳೂರು: ಹೊಸ ಅಮಾನವೀಯ ಕಾನೂನುಗಳ ಮೂಲಕ ನಾಗರಿಕರನ್ನು ಸ್ವಂತ ನೆಲದಿಂದ ಹೊರಹಾಕುವ ನೆಪ ಒಡ್ಡಿ ಅನ್ಯಾಯವಾಗಿ ದೌರ್ಜನ್ಯಗಳ ಮೂಲಕ ಮಾನವ ಹಕ್ಕುಗಳನ್ನು ದಮನಿಸುವುದನ್ನು ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಖಂಡಿಸುತ್ತದೆ ಎಂದು ಸಂಘಟನೆಯ ಅಧ್ಯಕ್ಷ ಅಬ್ದುಲ್ ಲತೀಫ್ ಸ’ಅದಿ ಶಿವಮೊಗ್ಗ ರವರು ಹೇಳಿದರು.ಮಂಗಳೂರಿನ ಸಮೀಪದ ಮಿತ್ತೂರಿನಲ್ಲಿ ನಡೆದ ರಾಜ್ಯ ಸೆಕ್ರೆಟರಿಯೇಟ್ ಸಭೆಯಲ್ಲಿ ಈ ಖಂಡನೆಯನ್ನು ನೀಡಲಾಯಿತು.

ಯಾವುದೇ ಕಾರಣವಿಲ್ಲದೆ ಮುಸ್ಲಿಮರೆಂಬ ಏಕೈಕ ಕಾರಣದಿಂದ ಅಸ್ಸಾಮಿನ ಸರಕಾರವು ಮಿಲಿಟರಿ ಮತ್ತು ಪೋಲಿಸ್ ಪಡೆಯ ಮೂಲಕ ಅಮಾಯಕರನ್ನು ಹಿಂಸಿಸುತ್ತಿದ್ದು ಸುಮಾರು 800 ಕ್ಕೂ ಮಿಕ್ಕ ಕುಟುಂಬಗಳು ದೌರ್ಜನ್ಯಕ್ಕೀಡಾಗುತ್ತಿದೆ. ಕೂಡಲೇ ಈ ಹಿಂಸೆಯನ್ನು ಕೊನೆಗಾಣಿಸಿ ಭಾರತೀಯರಿಗೆ ರಕ್ಷಣೆಯನ್ನು ನೀಡಬೇಕು ಎಂದು ಅಸ್ಸಾಂ ಸರಕಾರ ಹಾಗೂ ಕೇಂದ್ರ ಸರಕಾರಕ್ಕೆ ಒತ್ತಾಯ ಮಾಡಿತು. ಇಲ್ಲವಾದಲ್ಲಿ ಸೂಕ್ತ ಕಾನೂನು ಹೋರಾಟವನ್ನು ನಡೆಸಲಾಗುವುದು ಎಂದು ಪ್ರ‌.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com