janadhvani

Kannada Online News Paper

ಇಸ್ಮಾಯಿಲ್ ಕೊಡಿಪ್ಪಾಡಿ ರಿಯಾದಿನಲ್ಲಿ ನಿಧನ- ಅಂತ್ಯ ಸಂಸ್ಕಾರಕ್ಕೆ ಕೆಸಿಎಫ್ ಸಹಕಾರ

ರಿಯಾದಿನಲ್ಲಿ ಉದ್ಯೋಗದಲ್ಲಿದ್ದ ಉಪ್ಪಿನಂಗಡಿ ನಿವಾಸಿ ಇಸ್ಮಾಯಿಲ್ ಕೊಡಿಪ್ಪಾಡಿ ಎಂಬವರು 06/09/2021ರಂದು ಹೃದಯಾಘಾತದಿಂದ ನಿಧನ ಹೊಂದಿದರು.

ಮೃತ ವ್ಯಕ್ತಿಯ ಅಂಗಡಿ ಮಾಲಕರಾದ ಮನ್ಸೂರ್‌ರವರು ನಿಧನ ವಾರ್ತೆಯನ್ನು ಕೆಸಿಎಫ್ ರಿಯಾದ್ ಝೋನ್ ಸಾಂತ್ವನ ಇಲಾಖೆಗೆ ನೀಡಿದ ತಕ್ಷಣ ಕಾರ್ಯಪ್ರವೃತ್ತರಾದ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಮಜೀದ್ ವಿಟ್ಲ ಮತ್ತು ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಭಾಷಾ ಗಂಗಾವಳಿಯವರು ಭಾರತೀಯ ರಾಯಭಾರಿ ಕಚೇರಿಯ ದಾಖಲೆಗಳನ್ನು ಸರಿಪಡಿಸಿ ಸಹಕರಿಸಿದರು. ಇತರ ದಾಖಲೆಗಳನ್ನು ಕಂಪೆನಿಯ ಸ್ಪಾನ್ಸರ್, ಮನ್ಸೂರ್ ಬಾಯ್, ಕೆಸಿಎಫ್ ನಾಯಕರಾದ ಫಾರೂಕ್ ಪಾಣೆಮಂಗಳೂರು  ಮಾಡಿಸಿದರು. ಊರಿನಿಂದ ಬೇಕಾದ ದಾಖಲೆಗಳನ್ನು ತ್ವರಿತವಾಗಿ ಮಾಡಿಸಲು ಮೃತ ವ್ಯಕ್ತಿಯ ಸಹೋದರ ಝಕರಿಯಾ ಹಾಗೂ ವಕೀಲ ಅಶ್ರಫ್ ಸಹಕರಿಸಿದರು.

ದಾಖಲೆಗಳೆಲ್ಲವೂ ಸರಿಪಡಿಸಿದ ತಕ್ಷಣ 09/09/2021 ರಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ನಾಯಕರಾದ ಅಬ್ದುಲ್ಲಾ ಮದನಿಯವರ ನೇತೃತ್ವದಲ್ಲಿ ರಿಯಾದಿನ ನಸೀಮ್ ಕಬ್ರ್ ಸ್ಥಾನದಲ್ಲಿ ದಫನ ಕಾರ್ಯವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷರಾದ ಹನೀಫ್ ಕಣ್ಣೂರು, ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷ ಮಜೀದ್ ವಿಟ್ಲ, ಝೋನ್ ನಾಯಕರುಗಳಾದ ಫಾರೂಕ್ ಪಾಣೆಮಂಗಳೂರು, ಸಮೀರ್ ಜೆಪ್ಪು, ರಮೀಝ್ ಕುಳಾಯಿ, ಲತೀಫ್ ಅಶ್ರಫಿ, ಅಶ್ರಫ್ ಗುರುಪುರ ಮತ್ತು ಮೃತ ವ್ಯಕ್ತಿಯ ಸಂಬಂಧಿಗಳಾದ ನಾಸಿರ್ ಉಪ್ಪಿನಂಗಡಿ, ಬಶೀರ್ ಮತ್ತು ಮುಹಮ್ಮದ್ ಹಾಗೂ ಮೃತ ವ್ಯಕ್ತಿಯ ಕಂಪೆನಿ ಸಂಪೂರ್ಣವಾಗಿ ಸಹಕಾರ ನೀಡಿದರು.

ಮೃತರ ಕುಟುಂಬಸ್ಥರು, ಗೆಳೆಯರು ಮತ್ತು ಕೆಸಿಎಫ್ ನಾಯಕರು, ಕಾರ್ಯಕರ್ತರು ಭಾಗಿಯಾಗಿ ಮೃತರಿಗಾಗಿ ದುಆ ನೆರವೇರಿಸಿದರು. ಮೃತರು ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

error: Content is protected !! Not allowed copy content from janadhvani.com