ಫ್ರೀ ವಿಸಿಟ್ ವೀಸಾ: ಖತ್ತರಿನತ್ತ ವಿನೋದ ಪ್ರೀಯರ ಯಾತ್ರಾ ವಿಶ್ಮಯ

ದೋಹಾ: ಭಾರತ ಸಮೇತ 80 ರಾಷ್ಟ್ರಗಳಿಗೆ ಉಚಿತವಾಗಿ ಆನ್ ಅರೈವಲ್ ವಿಸಾ ಸಮೇತ ಗೃಹ ಸಚಿವಾಲಯದ ಕೆಲವು ಚಟುವಟಿಕೆಗಳು ದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿಗಳನ್ನು ಬರಮಾಡಿಕೊಳ್ಳುತ್ತಿದೆ. ಅದೇ ರೀತಿ ಕಳೆದ ವರ್ಷ ಅಂತ್ಯದಲ್ಲಿ ಹಮದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಡಿಮೆ ಪಕ್ಷ ಐದು ಗಂಟೆಗಳನ್ನು ಮುಂದಿನ ಯಾತ್ರೆಗಾಗಿ ವ್ಯಯಿಸುವವರಿಗೆ ನಾಲ್ಕು ದಿವಸಗಳ ಉಚಿತ ಟ್ರಾನ್ಸಿಟ್ ವಿಸಾ ಕೊಡುಗೆ ಕೂಡ ವಿದೇಶೀಯರನ್ನು ಬರ ಸೆಳೆದಿದೆ.

ಹಿಂದಿನ ವರ್ಷಗಳ ಲೆಕ್ಕಾಚಾರಕ್ಕಿಂತ 2017 ಜನವರಿಯಿಂದ ನವೆಂಬರ್ ವರೆಗೆ ಸ್ಟಾಪ್ ಓವರ್ ಯಾತ್ರಿಕರಲ್ಲಿ 34 ಶೇಕಡಾ ಹೆಚ್ಚಳ ಕಂಡುಬಂದಿದೆ ಎಂದು ಖತ್ತರ್ ಟೂರಿಸಂ ಅಥಾರಿಟಿ ವ್ಯಕ್ತಪಡಿಸಿದೆ.240 ಕ್ಕಿಂತಲೂ ಹೆಚ್ಚಿನ ದೇಶೀಯರಿಗೆ ಇ -ವಿಸಾ ಮತ್ತು ಎಲೆಕ್ಟ್ರಾನಿಕ್ ಟ್ರಾವೆಲ್ ಆರ್ಥರೈಸೇಷನ್ ವ್ಯವಸ್ಥೆಯನ್ನು ಪ್ರಾಬಲ್ಯಕ್ಕೆ ತಂದ ಕಾರಣ ಹೆಚ್ಚಿನ ವಿನೋದ ಪ್ರಯರನ್ನು ಆಕರ್ಷಿಸಿದೆ ಎಂದು ಅಥಾರಿಟಿ ತಿಳಿಸಿದೆ.

ವಿಸಾ ಕಾನೂನು ಸಡಿಲೀಕರಣ, ಸೂಖ್ ವಾಫಿಕ್, ಪೆರ್ಲ್ ಖತ್ತರ್, ಮ್ಯೂಸಿಯಂ ಆಫ್ ಇಸ್ಲಾಮಿಕ್ ಆರ್ಟ್, ಖತ್ತಾರ ಕಲ್ಚರಲ್ ವಿಲ್ಲೇಜ್ ಮುಂತಾದೆಡೆಗಳ ವ್ಯಾಪಾರ ಸ್ಥಾಪನೆಗಳ ವ್ಯಾಪರ ವೃದ್ದಿಯಾಗಲು ಆ ಮೂಲಕ ಸಾಧ್ಯವಾಯಿತು.ಹಡಗು ಯಾತ್ರಿಗಳ ನಗರ ಯಾತ್ರಾ ಪ್ಯಾಕೇಜ್ ‌ನ ಭಾಗವಾಗಿ ದೇಶದ ಪ್ರಧಾನ ಕೇಂದ್ರಗಳಲ್ಲಿನ ಸಂದರ್ಶನದಿಂದ ಆ ವಲಯಗಳಲ್ಲಿ ವ್ಯಾಪಾರ ಸಜೀವವಾಗಿತ್ತು.ಚಳಿ ಪ್ರಾರಂಭಗೊಂಡ ನಂತರ ಸೂಖ್ ವಾಫಿಕ್‌ನ ಕಾಫಿ ಶಾಪ್‌ಗಳು ಅಮೆರಿಕ, ಬ್ರಿಟಿಷ್, ಚೈನಾ ಮುಂತಾದ ದೇಶೀಯರಿಂದ ತುಂಬಿ ತುಳುಕುತ್ತಿದೆ. ಸೂಖ್ನಲ್ಲಿ ವಸಂತೋತ್ಸವಕ್ಕೆ ಚಾಲನೆ ನೀಡಿದ ಕಾರಣ ಸಂಜೆ ಜನದಟ್ಟಣೆ ಏರುತ್ತಿದೆ.

ಅಕ್ಟೋಬರ್ ‌ನಲ್ಲಿ ಹಡಗು ಪ್ರವಾಸೋದ್ಯಮ ಪ್ರಾರಂಭಿಸಿದ ಕಾರಣ ಹಡಗು ಯಾತ್ರಿಕರು. ಟ್ರಾನ್ಸಿಟ್ ಯಾತ್ರಿಕರು ಮತ್ತು ಸ್ಥಳೀಯರು ಹೆಚ್ಚಿನ ಪ್ರಮಾಣದಲ್ಲಿ ಸೂಖ್ ವಾಫಿಯ ತಳುಪುತ್ತಿದ್ದಾರೆ. ಇತ್ತೀಚೆ 4,000 ಯಾತ್ರಿಕರೊಂದಿಗೆ ಜರ್ಮನಿಯ ಬೃಹತ್ ಯಾತ್ರಾ ಹಡಗಾದ ಮೈನ್ ಸ್ಕಿಪ್ ಫೈವ್ ಖತ್ತರ್ ‌ಗೆ ತಳುಪಿತ್ತು.

ಎಪ್ರಿಲ್‌ ತಿಂಗಳಲ್ಲಿ ಕೊನೆಗೊಳ್ಳುವ ಹಡಗು ಟೂರೀಸಂ ನಲ್ಲಿ 50,000 ಯಾತ್ರಿಕರ ನಿರೀಕ್ಷೆ ಇದೆ. ಪಾರಂಪರಿಕ ಟೂರಿಸ್ಟ್ ಕೇಂದ್ರಗಳ ಹೊರತಾಗಿ ದೇಶದಾದ್ಯಂತ ಇರುವ ಒರಿಕ್ಸ್ ಫಾಮ್‌ಗಳು ಸಂದರ್ಶಕರನ್ನು ಆಕರ್ಷಿಸಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಜನವರಿ ಏಳಕ್ಕೆ ಶಾಪಿಂಗ್ ಮೇಳವಾದ ‘ಶಾಪ್ ಖತ್ತರ್’ ಇನ್ನಷ್ಟು ವಿನೋದ ಪ್ರಿಯರನ್ನು ಖತ್ತರ್‌ನತ್ತ ಆಕರ್ಷಿಸಲು ಸಾಧ್ಯತೆ ಇದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!