janadhvani

Kannada Online News Paper

ಮಂಗಳೂರು ವಿಮಾನ ನಿಲ್ದಾಣದಲ್ಲಿ ತಕ್ಷಣ ರಾಪಿಡ್ ಟೆಸ್ಟ್‌ಗೆ ಕರ್ನಾಟಕ ಮುಸ್ಲಿಂ ಜಮಾಅತ್,ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ

ಮಾನ್ಯ ಜಿಲ್ಲಾಧಿಕಾರಿಗಳು

ದಕ್ಷಿಣ ಕನ್ನಡ ಜಿಲ್ಲೆ

ವಿಷಯ: ಮಂಗಳೂರು ವಿಮಾನ ನಿಲ್ದಾನದಲ್ಲಿ ರಾಪಿಡ್ ಟೆಸ್ಟ್ ವ್ಯವಸ್ಥೆಗೊಳಿಸುವ ಬಗ್ಗೆ

ಮಾನ್ಯರೇ…

ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸೌದಿ ಅರೇಬಿಯಾ, ಯುಎಇ, ಓಮಾನ್, ಬಹರೈನ್, ಖತ್ತರ್, ಕುವೈತ್ ರಾಷ್ಟ್ರಗಳು ಮತ್ತು ಮಲೇಷ್ಯ ಲಂಡನ್ ನಲ್ಲಿ ಕಾರ್ಯಾಚರಿಸುತ್ತಿರುವ ಅನಿವಾಸಿ ಕನ್ನಡಿಗರ ಅತೀ ದೊಡ್ಡ ಸಂಘಟನೆಯಾಗಿ ಗುರುತಿಸಿಕೊಂಡಿದೆ. ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯು ಕಾರ್ಯಾಚರಿಸುತ್ತಿದ್ದು ಇದರಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಅತ್ಯುನ್ನತ ಹುದ್ದೆಯಲ್ಲಿರುವಂತಹ ಕನ್ನಡಿಗರು ಹಾಗೂ ಬೃಹತ್ ಉದ್ಯಮಿಗಳು, ಉನ್ನತ ವಿದ್ಯಾವಂತರಾಗಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಮಾನವೀಯ ಸೇವೆಗಳನ್ನು ಗುರಿಯಾಗಿಟ್ಟುಕೊಂಡು ಬರೊಬ್ಬರಿ ಹತ್ತು ಸಾವಿರಕ್ಕೂ ಸದಸ್ಯರನ್ನೊಳಗೊಂಡು ಕನ್ನಡಿಗರ ಪಾಲಿನ ಆಶಾಭಾವನೆಯಾಗಿ ಬೆಳೆದು ಬರುತ್ತಿದೆ. ಕೋವಿಡ್ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಆಹಾರ ಕಿಟ್, ಅಂಬ್ಯುಲೆನ್ಸ್ ಸೇವೆ, ಕ್ವಾರೇಂಟೇನ್ ವ್ಯವಸ್ಥೆ, ಚಾರ್ಟರ್ ವಿಮಾನ ಸೇವೆ ಮೊದಲಾದ ಮಾನವೀಯ ಸೇವೆಗಳನ್ನು ನೀಡಿ ಸಾರ್ಥಕತೆಯನ್ನು ಮೆರೆದಿದೆ.

ವಿಶ್ವದಾದ್ಯಂತ ಕೋವಿಡ್-19 ವ್ಯಾಪಕವಾಗಿ ಹರಡಿ ನಿಂತು ಎಲ್ಲಾ ಆರ್ಥಿಕ ವಲಯಗಳ ಮೇಲೆ ದುಷ್ಪರಿಣಾಮ ಬೀರಿ ಜನರ ಬದುಕು ಅತಂತ್ರವಾಗಿದೆ. ಜಗತ್ತಿನ ಎಲ್ಲಾ ಆರೋಗ್ಯ ಇಲಾಖೆಗಳು ಸಂಪೂರ್ಣವಾಗಿ ಕೋವಿಡ್-19 ನಿಯಂತ್ರಣಕ್ಕಾಗಿ ಹರಸಾಹಸಪಡುತ್ತಿದ್ದು ಅದರಲ್ಲಿ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯವರು ರಾತ್ರಿ ಹಗಲೆನ್ನದೆ ಉತ್ತಮ ಸೇವೆಯೊಂದಿಗೆ ಜನರ ಹಿತ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕೊರೋಣ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಬೇಕಾದ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ನಿಯಂತ್ರಣಕ್ಕೆ ತರುವಲ್ಲಿ ತಮ್ಮ ಯುಕ್ ತಿಪೂರ್ವಕ ಕೈಗೊಳ್ಳುವ ತೀರ್ಮಾನಗಳೇ ಸಾಕ್ಷಿ. ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯು ತಮ್ಮ ನಿಸ್ವಾರ್ಥ ಸೇವೆಯನ್ನು ಮುಕ್ತ ಕಂಠದಿಂದ ಅಭಿನಂದಿಸುತ್ತದೆ.

ಇದೀಗ ಕೆಲವು ಕಟ್ಟುನಿಟ್ಟಿನ ನಿಯಮ ನಿರ್ದೇಶನಗಳೊಂದಿಗೆ ಅರಬ್ ರಾಷ್ಟ್ರಗಳು ನಿಮಾನಯಾನ ಸೇವೆಯನ್ನು ಪುನರಾರಂಭಿಸಿದ್ದು ವಿದೇಶದಲ್ಲಿ ದುಡಿಯುತ್ತಿರುವ ಅನಿವಾಸಿ ಕನ್ನಡಿಗರಿಗೆ ಸಂತೋಷದಾಯಕ ವಿಚಾರವಾಗಿದೆ. ತಾಯ್ನಾಡಿಗೆ ಬಂದು ಮರಳಿ ಹೋಗಲು ಸಾಧ್ಯವಾಗದೆ ಅತಂತ್ರವಾದ ಹಲವಾರು ಕುಟುಂಬಗಳು, ಉದ್ಯಮಿಗಳು, ಕಾರ್ಮಿಕರು, ವಿಧ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದೆ.

ದಕ್ಷಿಣ ಕನ್ನಡದ ಯಾತ್ರಾರ್ಥಿಗಳು ಮಂಗಳೂರು ವಿಮಾನ ನಿಲ್ದಾನವನ್ನೇ ಆಶ್ರಯಿಸುತ್ತಿದ್ದು ಯಾತ್ರಾರ್ಥಿಗಳಿಗೆ ಯುಎಇ ಗೆ ಯಾತ್ರೆ ಮಾಡಲು ರಾಪಿಡ್ ಟೆಸ್ಟ್ ಅನಿವಾರ್ಯವಾಗಿದೆ. ಈ ಸೇವೆಯು ಮಂಗಳೂರು ವಿಮಾನ ನಿಲ್ದಾನದಲ್ಲಿಲ್ಲದ ಕಾರಣ ಬೆಂಗಳೂರು, ಕಣ್ಣೂರು, ಕೋಝಿಕ್ಕೋಡು, ತಿರುವನಂತಪುರಂ, ಕೊಚ್ಚಿ ವಿಮಾನ ನಿಲ್ದಾನಗಳಿಂದ ಯಾತ್ರೆ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಕೇರಳ ಹಾಗೂ ಇತರ ರಾಜ್ಯಗಳ ಗಡಿ ದಾಟಲು ಹಲವಾರು ಕಷ್ಟನಷ್ಟಗಳನ್ನು ಎದುರಿಸುವಂತಾಗಿದೆ..

ಆದ್ದರಿಂದ ತಾವುಗಳು ತುರ್ತಾಗಿ ಈ ಸಮಸ್ಯೆಯನ್ನು ಬಗೆ ಹರಿಸಿ ಯಾತ್ರಾರ್ಥಿಗಳಿಗೆ ಸುಗಮ ವ್ಯವಸ್ಥೆಯನ್ನು ಒದಗಿಸಿಕೊಡಬೇಕಾಗಿ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿಯು ತಮ್ಮೊಂದಿಗೆ ವಿನಂತಿಯನ್ನು ಮಾಡುತ್ತಿದೆ.

error: Content is protected !! Not allowed copy content from janadhvani.com