janadhvani

Kannada Online News Paper

60 ವರ್ಷ ದಾಟಿದ ವಿದೇಶಿಯರಿಗೆ ಕಠಿಣ ಷರತ್ತುಗಳೊಂದಿಗೆ ಇಕಾಮಾ ನವೀಕರಣೆ

ಕುವೈತ್ ಸಿಟಿ: ಕುವೈತ್‌ನಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟ, ಪದವಿ ಇಲ್ಲದ ವಿದೇಶಿಯರಿಗೆ ಕಠಿಣ ಷರತ್ತುಗಳೊಂದಿಗೆ ಇಕಾಮಾವನ್ನು ನವೀಕರಿಸಲಾಗುವುದು. ವಾರ್ಷಿಕ 2,000 ದಿನಾರ್ ಶುಲ್ಕ ಮತ್ತು ಆರೋಗ್ಯ ವಿಮಾ ರಕ್ಷಣೆಯೊಂದಿಗೆ ನಿವಾಸ ಪರವಾನಗಿಯನ್ನು ನವೀಕರಿಸಲು ತೀರ್ಮಾನಿಸಲಾಗಿದೆ.

60 ವರ್ಷ ದಾಟಿದ ಪದವಿ ಇಲ್ಲದ ವಿದೇಶಿಯರು ವಾರ್ಷಿಕ 2,000 ದಿನಾರ್ ಶುಲ್ಕ ಪಾವತಿಸಿ ಕೆಲಸದ ಪರವಾನಗಿಯನ್ನು ನವೀಕರಿಸಲು ಮಾನವಶಕ್ತಿ ಪ್ರಾಧಿಕಾರದ ನಿರ್ದೇಶಕರ ಮಂಡಳಿಯು ಅನುಮೋದಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇಕಾಮಾವನ್ನು ನವೀಕರಿಸುವಾಗ ಆರೋಗ್ಯ ವಿಮೆಯನ್ನು ಹೆಚ್ಚುವರಿಯಾಗಿ ಪಾವತಿಸಬೇಕಿದೆ.ವಿಮಾ ಪ್ರೀಮಿಯಂ ಕುರಿತು ಮಾಹಿತಿ ಲಭ್ಯವಿಲ್ಲ.

ಕಳೆದ ಜನವರಿಯಲ್ಲಿ, ಮಾನವಶಕ್ತಿ ಪ್ರಾಧಿಕಾರವು ಕೌಶಲ್ಯರಹಿತ ಕಾರ್ಮಿಕರನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ ಜನಸಂಖ್ಯಾ ಸಮತೋಲನವನ್ನು ಸಾಧಿಸುವ ಉದ್ದೇಶದಿಂದ ವಯಸ್ಸಿನ ಮಿತಿಯನ್ನು ಜಾರಿಗೆ ತಂದಿದೆ. ಈ ನಿಯಮದಿಂದಾಗಿ ಉದ್ಯಮಗಳ ಮೇಲೆ ಪರಿಣಾಮ ಬೀರಿದೆ ಎಂದು ಉದ್ಯಮಿಗಳು ದೂರಿದ ಕಾರಣ, ಷರತ್ತುಗಳೊಂದಿಗೆ ಇಖಾಮಾ ನವೀಕರಿಸಬಹುದು ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ.

ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಕುವೈತ್ ಸಂಪುಟ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಿಗೆ ಸೂಚನೆ ನೀಡಿತ್ತು.ಸಚಿವರ ಶಿಫಾರಸನ್ನು ಆಧರಿಸಿ ಮಾನವಶಕ್ತಿ ಪ್ರಾಧಿಕಾರವು ಈ ನಿರ್ಧಾರಕ್ಕೆ ಬಂದಿದೆ.

error: Content is protected !! Not allowed copy content from janadhvani.com