janadhvani

Kannada Online News Paper

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ನಿಂದನೆ ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಖಂಡನೆ

ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ಧರ್ಮ, ಪ್ರವಾದಿ ಹಾಗೂ ಮುಸ್ಲಿಂ ಮಹಿಳೆಯರ ವಿರುದ್ಧ ಅತ್ಯಂತ ನಿಂದನಾತ್ಮಕವಾದ ಪದ ಬಳಸಿ ಧ್ವನಿ ಹರಿಯಬಿಟ್ಟಿರುವುದನ್ನು ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ತೀವ್ರವಾಗಿ ಖಂಡಿಸುತ್ತದೆ. ಮಂಗಳೂರು ಸೈಬರ್ ಕ್ರೈಂ ಪೋಲೀಸರು ಯುವಕನನ್ನು ಬಂಧಿಸಿರುವುದು ಅಭಿನಂದನಾರ್ಹವಾಗಿದ್ದು.


ನಾಡಿನ ಶಾಂತಿ, ಸೌಹಾರ್ದತೆಯನ್ನು ಕೆಡಿಸುವ ಹುನ್ನಾರವಾಗಿರುತ್ತದೆ ಇದು.
ಧರ್ಮ ಧರ್ಮಗಳ ನಡುವೆ ಕಂದಕವನ್ನು ಸೃಷ್ಟಿಸಿ ಅನ್ಯೋನ್ಯತೆಯಿಂದ ಜೀವಿಸುವ ಜನರಲ್ಲಿ ಅನೈಕ್ಯತೆಯನ್ನು ಸೃಷ್ಟಿಸುವ ಇಂತಹ ವಿಕೃತ ಮನೋಸ್ಥಿತಿಯನ್ನು ಹೊಂದಿದವರ ವಿರುದ್ಧ ನಿರ್ದಾಕ್ಷಿಣ್ಯವಾದ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೌಹಾರ್ದಯುತ ಸಮಾಜವನ್ನು ಕಟ್ಟಲು ಕಾನೂನು ಪಾಲಕರು ಮುಂದಾಗಬೇಕೆಂದು ಎಸ್ಸೆಸ್ಸಫ್ ಪುತ್ತೂರು ಡಿವಿಶನ್ ಪತ್ರಿಕಾ ಹೇಳಿಕೆಯ ಮೂಲಕ ವಿನಂತಿಸಲಾಗಿದೆ.

error: Content is protected !! Not allowed copy content from janadhvani.com