janadhvani

Kannada Online News Paper

ಕೇರಳ – ಮೀನಿನ ಬಲೆಯಲ್ಲಿ ವಿಮಾನದ ಯಂತ್ರಾವಶೇಷಗಳು ಪತ್ತೆ

ಕ್ಯಾಲಿಕಟ್ : (ಜನಧ್ವನಿ ವಾರ್ತೆ) ಇಲ್ಲಿನ ಬೆಪೂರ್ ಹಾರ್ಬರ್ ನಿಂದ ಹೊರಟ ಮೀನುಗಾರರಿಗೆ ತಮ್ಮ ಮೀನುಗಾರಿಕಾ ಬಲೆಯಲ್ಲಿ ಅಪರೂಪದ ವಸ್ತುವೊಂದು ಪತ್ತೆಯಾಗಿದ್ದು ಇದೀಗ ಸುದ್ದಿಯಾಗಿದೆ.

ಮೀನುಗಾರಿಗಾ ಬೋಟ್ ನಲ್ಲಿ ಎಂದಿನಂತೆ ಮೀನುಗಾರಿಕೆಗೆ ಹೊರಟು ಬಲೆ ಬೀಸಿದ ಮೀನುಗಾರರು ಬಲೆಯನ್ನು ಎಳೆಯುವ ಸಂದರ್ಭ ಮಾಮೂಲಿಗಿಂತಲೂ ಹೆಚ್ಚಿನ ಭಾರ ಅನುಭವವಾಗಿದ್ದು ಪೂರ್ತಿಯಾಗಿ ಬಲೆಯನ್ನು ಯಂತ್ರದ ಸಹಾಯದೊಂದಿಗೆ ಮೇಲಕ್ಕೆತ್ತಿದಾಗ ಬೃಹತ್ ಗಾತ್ರದ ಯಂತ್ರಾವಶೇಷ ಕಾಣಸಿಕ್ಕಿದೆ. ಅಚ್ಚರಿಗೊಂಡ ಮೀನುಗಾರರು ಕ್ರೇನ್ ನ ಮೂಲಕ ಈ ಯಂತ್ರಾವಶೇಷವನ್ನು ಕಡಲಿನ ತೀರಕ್ಕೆ ಎಳೆದು ಹಾಕಿದ್ದು ಬಳಿಕ ಸಂಬಂಧಿತ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪ್ರಾಥಮಿಕ ತನಿಖೆಯಲ್ಲಿ ಇದೊಂದು ವಿಮಾನದ ಯಂತ್ರಾವಶೇಷಗಳಾಗಿದ್ದು ಹಲವಾರು ವರ್ಷಗಳ ಮುಂಚೆ ಕಡಲಿಗೆ ಬಿದ್ದ ವಿಮಾನಕ್ಕೆ ಸೇರಿದ ಭಾಗಗಳು ಎಂದು ಮಾಹಿತಿ ನೀಡಿದ್ದಾರೆ.

ಮೀನುಗಾರರ ಲಕ್ಷಾಂತರ ರೂ ಬೆಲೆಬಾಳುವ ಬಲೆ, ಹಗ್ಗ ಇನ್ನಿತರ ಸಲಕರಣೆಗಳು ಈ ಕಾರಣದಿಂದ ಹಾನಿಗೀಡಾಗಿದ್ದು ಈ ಬಗ್ಗೆ ತಮಗೆ ಸಹಾಯ ಮಾಡಲು ಸಂಬಂಧಿತ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

error: Content is protected !! Not allowed copy content from janadhvani.com