janadhvani

Kannada Online News Paper

ಬಹರೈನ್ : ಕೆ.ಸಿ.ಎಫ್ ಫೌಂಡೇಶನ್ ಡೇ ಆಚರಣೆ

ಮನಾಮ: ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆಗಳ ಮೂಲಕ ಗಲ್ಫ್ ಮತ್ತು ಯೂರೋಪ್ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಅನಿವಾಸಿ ಕನ್ನಡಿಗರ ಏಕೈಕ ಸಂಘಟನೆಯಾಗಿದೆ ಕೆಸಿಎಫ್. ಗಲ್ಫ್ ಕನ್ನಡಿಗರ ನಾಡಿಮಿಡಿತವನ್ನು ಅರಿತು ಅವರ ಸಂಕಷ್ಟಗಳಿಗೆ ಬೆನ್ನೆಲುಬಾಗಿ ನಿಂತು ಸಾಂತ್ವಾನ ನೀಡುತ್ತಾ ಬರುತಿದ್ದು ಅನಿವಾಸಿ ಕನ್ನಡಿಗರ ಪಾಲಿಗೆ ಭರವಸೆಯ ಬೆಳಕಾಗಿರುವ ಕೆಸಿಎಫ್ ಗೆ ಫೆಬ್ರವರಿ 15ರಂದು 8ರ ಸಂವತ್ಸರ.

“ಸತ್ಯ-ಸಹನೆ-ಸಮರ್ಪಣೆ” ಘೋಷ ವಾಕ್ಯದೊಂದಿಗೆ ಕೆ.ಸಿ.ಎಫ್ ಫೌಂಡೇಶನ್ ಡೇ ಪ್ರಯುಕ್ತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಸಮಾರೋಪ ಕಾರ್ಯಕ್ರಮವನ್ನು ತಾಜುಲ್ ಫುಖಹಾಅ್ ವೇದಿಕೆಯಲ್ಲಿ ಝೂಮ್ ಒನ್ಲೈನ್ ಮೂಲಕ ಬಹಳ ಯಶಸ್ವಿಯಾಗಿ ನಡೆಸಲಾಯಿತು.

ಫೆಬ್ರವರಿ 19,2021 ಶುಕ್ರವಾರ ರಾತ್ರಿ 6 ಗಂಟೆಗೆ ಸರಿಯಾಗಿ ಆರಂಭಗೊಂಡ ಕಾರ್ಯಕ್ರಮ ದಲ್ಲಿ ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಸಂಯುಕ್ತ ಖಾಝಿ ಬಹು| ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ರವರು ದುಃಆ ಆಶೀರ್ವದಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಟಲ್ ರವರ ಅಧ್ಯಕ್ಷತೆ ವಹಿಸಿದ್ದರು.

ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ರವರು ಮುಖ್ಯ ಪ್ರಭಾಷಣಗೈದರು.ಮುಖ್ಯ ಅತಿಥಿಗಳಾದ
ಕೆಸಿಎಫ್ ಐಎನ್ಸಿ ಸಂಘಟನಾ ವಿಭಾಗದ ಅಧ್ಯಕ್ಷರು ಪಿಎಮ್ಎಚ್ ಅಬ್ದುಲ್ ಹಮೀದ್ ಸಾಹಿಬ್ ಈಶ್ವರಮಂಗಿಲ, ಐಎನ್ಸಿ ಇಹ್ಸಾನ್ ವಿಭಾಗದ ಅಧ್ಯಕ್ಷರಾದ ಅಬೂಬಕ್ಕರ್ ರಾಯಿಸ್ಕೊ ಹಾಜಿ ,
ಆರ್ ಎಸ್ ಸಿ ಗಲ್ಫ್ ಕೌನ್ಸಿಲ್ ಎಕ್ಸಿಕ್ಯೂಟಿವ್ ಅಬ್ದುಲ್ ರಹೀಮ್ ಸಖಾಫಿ ವರವೂರು, ಕೇರಳ ಸರ್ಕಾರದ ಎನ್ ಆರ್ ಐ ಕಮಿಷನ್ ಸದಸ್ಯರು ಝುಬೈರ್ ಕಣ್ಣೂರು, ಕನ್ನಡ ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಹಾಗೂ 4PM ಬಹರೈನ್ ನ್ಯೂಸ್ ನ ಎಕ್ಸಿಕ್ಯೂಟಿವ್ ಎಡಿಟರ್ ಪ್ರದೀಪ್ ಪುರವಂಕರ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಕೆಸಿಎಫ್ ಬಹರೈನ್ ನ ರಾಷ್ಟ್ರೀಯ ಸಮಿತಿ ಇಹ್ಸಾನ್ ವಿಂಗ್ ಕಾರ್ಯದರ್ಶಿ ಹನೀಫ್ ಕೀನ್ಯಾ ,
ಪ್ರಕಾಶನ ವಿಭಾಗದ ಅಧ್ಯಕ್ಷರು ಲತೀಫ್ ಪೆರೋಲಿ, ಕಾರ್ಯದರ್ಶಿ ತೌಫೀಕ್ ಬೆಳ್ತಂಗಡಿ ಹಾಗೂ, ಸಾಂತ್ವನ ವಿಭಾಗದ ಕಾರ್ಯದರ್ಶಿ ಹನೀಫ್ ಜಿಕೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಅಶ್ರಫ್ ಕಿನ್ಯಾ ,ಅಶ್ರಫ್ ಬೇಂಗಿಲ ಹಾಗೂ ರಝಾಕ್ ಆನಕಲ್ ರವರು ಉಪಸ್ಥಿತರಿದ್ದರು.

ಕೆಸಿಎಫ್ ನ ರಾಷ್ಟ್ರೀಯ ಸಮಿತಿ ನೇತಾರರು ಝೋನ್ ಮತ್ತು ಸೆಕ್ಟರ್ ಗಳ ನೇತಾರರು, ಬಹರೈನ್ ನ ವಿವಿಧ ಸಂಘಟನೆಗಳ ಸಾರಥಿಗಳು ಕಾರ್ಯ ಕರ್ತರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಝೂಮ್ ಒನ್ಲೈನ್ ನಲ್ಲಿ ಭಾಗವಹಿಸಿದ್ದರು.

ಕೆಸಿಎಫ್ ಬಹರೈನ್ ನ ರಾಷ್ಟ್ರೀಯ ಸಮಿತಿಯ ಕಾರ್ಯದರ್ಶಿ ಹಾರಿಸ್ ಸಂಪ್ಯ ರವರು ಸ್ವಾಗತಿಸಿ, ಸಂಘಟನಾ ವಿಭಾಗದ ಅಧ್ಯಕ್ಷರಾದ ಕಲಂದರ್ ಮುಸ್ಲಿಯಾರ್ ಕಕ್ಕೆಪದವು ವಂದಿಸಿದರು.
ಕೆಸಿಎಫ್ ಬಹರೈನ್ ಐಎನ್ಸಿ ಎಕ್ಸಿಕ್ಯೂಟಿವ್ ಬಷೀರ್ ಕಾರ್ಲೆರವರು ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !! Not allowed copy content from janadhvani.com