janadhvani

Kannada Online News Paper

ಎಸ್ಸೆಸ್ಸೆಫ್ ಮೋಂಟುಗೋಳಿ ಸೆಕ್ಟರ್ ವಾರ್ಷಿಕ ಮಹಾಸಭೆ

ಮೋಂಟುಗೋಳಿ: SSF ಮೋಂಟುಗೋಳಿ ಸೆಕ್ಟರ್ ಇದರ ವಾರ್ಷಿಕ ಮಹಾಸಭೆಯು ಇಚೀಚಿಗೆ ಗೌಸಿಯಾ ಕಮ್ಯುನಿಟಿ ಹಾಲ್ ಮೋಂಟುಗೋಳಿನಲ್ಲಿ ಸೆಕ್ಟರ್ ಅಧ್ಯಕ್ಷ ಮನ್ಸೂರ್ ಹಿಮಮಿ ಮೊಂಟೆಪದವು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಸ್ತುತ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಉದ್ಘಾಟಿಸಿದರು.ಡಿವಿಷನ್ ಅಧ್ಯಕ್ಷರಾದ ಇಬ್ರಾಹಿಮ್ ಅಹ್ಸನಿ ಮಂಜನಾಡಿ ತರಗತಿ ನಡೆಸಿದರು. ಸೆಕ್ಟರ್ ಕಾರ್ಯದರ್ಶಿ ಮಹಮ್ಮದ್ ನಿಯಾಜ್ ಪಡಿಕ್ಕಲ್ ಅವರು ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಮುದಸ್ವೀರ್ ಲೆಕ್ಕ ಪತ್ರ ಮಂಡಿಸಿದರು. ವೀಕ್ಷಕರಾಗಿ ಆಗಮಿಸಿದ ನೌಷಾದ್ ಮದನಿಯವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಝರ್ ಮರಿಕ್ಕಳ , ಪ್ರಧಾನ ಕಾರ್ಯದರ್ಶಿಯಾಗಿ ಸಮದ್ ಮೊಂಟೆಪದವು ಹಾಗೂ ಕೋಶಾಧಿಕಾರಿಯಾಗಿ ನಾಸೀರ್ ಮೋಂಟುಗೋಳಿ ಉಪಾಧ್ಯಕ್ಷರಾಗಿ ಮಹಮ್ಮದ್ ನಿಯಾಜ್ ಪಡಿಕ್ಕಲ್, ನಾಝೀಮ್ ಮೊಂಟೆಪದವು, ಕಾರ್ಯದರ್ಶಿಗಳಾಗಿ ಮಹಮ್ಮದ್ ಸಿನಾನ್ ಸುಟ್ಟ, ಶರೀಪ್ ಪೊಟ್ಟೋಳಿಕೆ, ಸಹೀರ್ ಕಲ್ಲರ್ಭೆ, ಶರೀಫ್ ವಿದ್ಯಾನಗರ, ಯಾಝೀದ್ ಮರಿಕ್ಕಳ, ರಾಪಿ ಡಿ.ಜಿ ಕಟ್ಟೆ ಹಾಗೂ ಇತರ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಅತೀ ಹೆಚ್ಚು ಸದಸ್ಯರನ್ನು ಸೇರ್ಪಡೆ ಗೊಳಿಸಿದ ಮೊಂಟೆಪದವು ಶಾಖೆ ಹಾಗೂ ಅತ್ಯುತ್ತಮ U.C ಅರ್ವಾಡ್ ನ್ನು ನಾಝೀಮ್ ಮೊಂಟೆಪದವು ರವರಿಗೆ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳಿಯ ಜಮಾಅತ್ ಖತೀಬರು , ಪದಾಧಿಕಾರಿಗಳು, ನಾಯಕರು, ಹಾಗೂ ಡಿವಿಷನ್ ನಾಯಕರು ಉಪಸ್ಥಿತಿದ್ದರು.

error: Content is protected !! Not allowed copy content from janadhvani.com