janadhvani

Kannada Online News Paper

ಸೌದಿ: ಪಶ್ಚಿಮ ಬಂಗಾಳದ ಸಹೋದರರಿಗೆ ಆಸರೆಯಾದ ಕೆ.ಸಿ.ಎಫ್

ಅಲ್ ಕೋಬರ್ : ಸೌದಿ ಅರೇಬಿಯಾದ ಪ್ರತಿಷ್ಠಿತ ಕಂಪನಿಯೊಂದಕ್ಕೆ ಉದ್ಯೊಗ ನಿಮಿತ್ತ ಆಗಮಿಸಿದ ಕೊಲ್ಕತ್ತಾ ನಿವಾಸಿಗಳಿಬ್ಬರು ಉದ್ಯೋಗ ಮತ್ತು ವೇತನ ಲಭಿಸದೆ ಸಂಕಷ್ಟಕ್ಕೆ ಸಿಲುಕಿದ್ದು,ಅವರನ್ನು ಊರಿಗೆ ಕಳಿಸುವ ವ್ಯವಸ್ಥೆಯನ್ನು ಸೌದಿ ಕೆಸಿಎಫ್ ಮಾಡಿದೆ.

ಕಳೆದ ಒಂದುವರೆ ವರ್ಷಗಳ ಹಿಂದೆ ಸೌದಿಗೆ ಆಗಮಿಸಿದ ಶದಬ್ ಇಮಾಮ್ ಹಾಗೂ ಹಸನ್ ಅಬ್ಬಾಸ್ ಇವರಿಗೆ ಕಂಪನಿಯು ಯಾವುದೇ ಉದ್ಯೊಗವೋ,ವೇತನವೋ ನೀಡದ ಕಾರಣ ದೈನಂದಿನ ಖರ್ಚಿಗಾಗಿ ಪರದಾಡುತ್ತಿದ್ದ ಸಂದರ್ಭದಲ್ಲಿ ಅವರ ಕಷ್ಟದ ಪರಿಸ್ಥಿತಿಯನ್ನು ಮನಗಂಡ ಕೆ.ಸಿ.ಎಫ್ ಕಾರ್ಯಕರ್ತ ಅಬ್ದುಲ್ ಸತ್ತಾರ್ ಉಚ್ಚಿಲ ಎಂಬುವವರು ಸಮಿತಿಯ ಗಮನಕ್ಕೆ ತಂದು ಕೂಡಲೇ ಅವರಿಗೆ ಬೇಕಾದ ಎಲ್ಲಾ ರೀತಿಯ ದೈನಂದಿನ ರೇಷನ್ ವ್ಯವಸ್ಥೆಗಳನ್ನು ಏರ್ಪಡಿಸಲಾಯಿತು.

ಅದೇ ರೀತಿ, ಸೌದಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ನ್ಯಾಯಲಯವು ಅನುಕೂಲಕರ ತೀರ್ಪನ್ನು ನೀಡಿ ಸಹಕರಿಸಿದೆ.ನಂತರ ಅವರಿಗೆ ಊರಿಗೆ ಮರಳಲು ಬೇಕಾದ ಎಕ್ಸಿಟ್ ವಿಷಯದಲ್ಲಿ ಉತ್ತಮ ರೀತಿಯಲ್ಲಿ ಸ್ಪಂದಿಸಿದೆ.

ಕೆ.ಸಿ.ಎಫ್ ದಮ್ಮಾಮ್ ಝೋನ್ ಹಾಗೂ ಕೋಬರ್ ಸೆಕ್ಟರ್ ಸಮಿತಿ ವತಿಯಿಂದ ಪ್ರಯಾಣದ ಖರ್ಚು ಮತ್ತು ಟಿಕೇಟ್ ನೀಡಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿ ಕೊಡಲಾಯಿತು.
ಈ ಸಂದರ್ಭದಲ್ಲಿ ಅವರ ಎಲ್ಲ ವಿಷಯದಲ್ಲಿ ಸಹಾಯಿಗಳಾಗಿ ಕೆ.ಸಿ.ಎಫ್ ರಾಷ್ಟ್ರೀಯ ಸಾಂತ್ವನ ಚೇರ್ಮನ್ ಮುಹಮ್ಮದ್ ಮಲೆಬೆಟ್ಟು, ಕೋಬರ್ ಸೆಕ್ಟರ್ ಸಾಂತ್ವನ ಕನ್ವೀನರ್ ಶರೀಫ್ ಪೂಂಜಲ್ ಕಟ್ಟೆ, ಅದೇ ರೀತಿ ಇತರ ಸೆಕ್ಟರ್ ನಾಯಕರು ಕಾರ್ಯಾಚರಿಸಿದ್ದಾರೆ.

error: Content is protected !! Not allowed copy content from janadhvani.com