ಲೀಗ್ ನಡೆಸಿದ ಹತ್ಯೆಗಳನ್ನು ಸುನ್ನೀ ಸಂಘಟನೆಗಳ ಮೇಲೆ ಎತ್ತಿಕಟ್ಟುವುದು ಖಂಡನೀಯ-SKSSF

ತಿರುವನಂತಪುರಂ: ಮುಸ್ಲಿಮ್ ಲೀಗ್ ನಡೆಸಿದ ಹತ್ಯೆಗಳನ್ನು ಸುನ್ನೀ ವಿಭಾಗಗಳ ನಡುವಿನ ತರ್ಕದ ಭಾಗವಾಗಿ ಚಿತ್ರೀಕರಿಸುವುದರ ವಿರುದ್ದ ಎಸ್ಕೆಎಸ್ಸೆಸ್ಸೆಫ್ ರಂಗಪ್ರವೇಶ ಗೈದಿದೆ. ಸಚಿವ ಕೆ.ಟಿ ಜಲೀಲ್ ವಿಧಾನ ಸಭೆಯಲ್ಲಿ ನಡೆಸಿದ ಪ್ರಸಂಗಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷ ನಡೆಸಿದ ಗದ್ದಲದ ನಡುವೆ ಬಂದ ಪರಾಮರ್ಶೆಯ ವಿರುದ್ದ ಎಸ್ಕೆಎಸ್ಸೆಸ್ಸೆಫ್‌ನ , ರಾಜ್ಯ ಕಾರ್ಯದರ್ಶಿ ಸತ್ತಾರ್ ಪಂದಲ್ಲೂರ್ ರಂಗಪ್ರವೇಶ ಗೈದಿದ್ದಾರೆ.

ಲೀಗ್ ಕಾರ್ಯಕರ್ತರು 44 ಮಂದಿಯನ್ನು ಕೊಲೆ ಮಾಡಿರುವುದಾಗಿ ವಿಧಾನ ಸಭೆಯಲ್ಲಿ ಸಚಿವ ಜಲೀಲ್ ತಮ್ಮ ಭಾಷಣದಲ್ಲಿ ತಿಳಿಸಿದ್ದರು.ಇದರ ವಿರುದ್ದ ಮುಸ್ಲಿಂ ಲೀಗ್ ಪ್ರತಿನಿಧಿಗಳು ಪ್ರತಿಭಟಸಿ, ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಲ, ‘ಎ.ಪಿ., ಇ.ಕೆ. ವಿಭಾಗಗಳ ನಡುವಿನ ತರ್ಕವನ್ನು ಮುಸ್ಲಿಂ ಲೀಗ್ ನ ಹೆಗಲ ಮೇಲೆ ಹೊರಿಸುವುದು ಖಂಡನೀಯ ಎಂದು ತಿಳಿಸಿದ್ದರು. ಇದರ ವಿರುದ್ದ ಎಸ್ಕೆಎಸ್ಸೆಸ್ಸೆಫ್ ಧ್ವನಿ ಎತ್ತಿದೆ.

ಮಂತ್ರಿಯ ಆರೋಪವನ್ನು ಸಂಪೂರ್ಣವಾಗಿ ತಿಳಿಯುವ ಮೊದಲು ಅದನ್ನು ಸುನ್ನೀ ವಿಭಾಗಗಳ ಸಂಘರ್ಷದಿಂದಾಗಿ ಸಂಭವಿಸಿದ ಹತ್ಯೆಯಾಗಿತ್ತು ಎನ್ನುವಂತಹ ರಮೇಶ್ ಚೆನ್ನಿತ್ತಲ ಅವರ ವಾದವನ್ನು ಅವರು ಸಾಬೀತು ಪಡಿಸಬೇಕು ಎಂದು ಒತ್ತಾಯಿಸಿದ ಸತ್ತಾರ್ ಪಂದಲ್ಲೂರ್ ,ವಿಧಾನಸಭೆಯಲ್ಲಿ ಮಂಡಿಸಿದ 44 ಕೊಲೆಗಳ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಸಚಿವ ಜಲೀ ಲ್‌ರನ್ನು ಪಂದಲ್ಲೂರ್ ಫೇಸ್ ಬುಕ್ ಪೋಸ್ಟ್‌ನಲ್ಲಿ ಆಗ್ರಹಿಸಿದ್ದಾರೆ.

ಮಣ್ಣಾರ್ಕಾಡ್ ಜೋಡಿಕೊಲೆಯು ಮಸೀದಿ ತರ್ಕದಲ್ಲಿ ಉಂಟಾಗಿದ್ದೆಂದು ಎನ್. ಶಂಸುದ್ದೀನ್ ಮತ್ತು ಕುಂಡೂರ್ ಕುಂಜು ಅವರ ಕೊಲೆಯು ಸುನ್ನಿಗಳ ತರ್ಕ ಮೂಲಕ ಉಂಟಾಗಿದ್ದು ಎಂದು ಪಿ.ಕೆ. ಅಬ್ದುರ್ರಬ್ಬ್ ವಿಧಾನಸಭೆಯಲ್ಲಿ ವ್ಯಕ್ತ ಪಡಿಸಿದ್ದರು.ಈ ಹಿಂದೆ ಉಣ್ಯಾಲಿಯ ಮಿಲಾದ್ ರ‌್ಯಾಲಿಯ ನಡುವೆ ಲೀಗ್- ಸಿಪಿಎಂ ನಡುವಿನ ಸಂಘರ್ಷ ವನ್ನು ಸುನ್ನಿಗಳ ನಡುವಿನ ಘರ್ಷಣೆಯಾಗಿ ಚಿತ್ರಿಕರಿಸುವುದರ ವಿರುದ್ದವೂ ಎಸ್ಕೆಎಸ್ಸೆಸ್ಸೆಫ್ ರಂಗಪ್ರವೇಶ ಗೈದಿತ್ತು.

Leave a Reply

Your email address will not be published. Required fields are marked *

error: Content is protected !!