ಬಿಜೆಪಿ ಪ್ರತಿನಿಧಿಗಳ ಮಧ್ಯೆ ವಾಕ್ಸಮರ: ಮೃತ ಶರೀರ ಕೊಂಡೊಯ್ಯಲು ಏಕೀಕೃತ ದರ ಸದ್ಯಕ್ಕಿಲ್ಲ?

ದುಬೈ: ಏರ್ ಇಂಡಿಯಾ ವಿಮಾನದಲ್ಲಿ ಊರಿಗೆ ಕೊಂಡೊಯ್ಯಲಾಗುವ ಮೃತದೇಹಗಳ ಸಾಗಾಟಕ್ಕೆ ಸಧ್ಯ ಚಾಲ್ತಿಯಲ್ಲಿರುವಂತೆ ತೂಕದ ಅನುಸಾರ ಪಾವತಿಸುವ ವಿಧಾನವನ್ನು ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕುರಿತ ಘೋಷಣೆಗಾಗಿ ಕರೆಯಲಾದ ಸಭೆಯಲ್ಲಿ ಭಾರೀ ಗದ್ದಲ ಉಂಟಾಗಿತ್ತು. ನಂತರ ಏಕೀಕೃತ ಪಾವತಿ ಮೂಲಕ ಊರಿಗೆ ಮೃತದೇಹವನ್ನು ಸಾಗಿಸುವ ತೀರ್ಮಾನವನ್ನು ತಕ್ಷಣ ಜಾರಿಗೆ ತರುವುದು ಬೇಡೆವೆನ್ನುವ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ.

ದುಬೈನಲ್ಲಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಜನರಲ್ ಸೇಲ್ಸ್ ಏಜೆಂಟ್ ಆದ ಅರೇಬ್ಯನ್ ಟ್ರಾವೆಲ್ಸ್ ಅಧಿಕಾರಿಗಳು ಕರೆದ ಸಭೆಯು ಗದ್ದಲದಲ್ಲಿ ಪರ್ಯಾವಸಾನಗೊಂಡಿತ್ತು. ಸಭೆಯ ವೇದಿಕೆ ಹತ್ತಿದ ಬಿಜೆಪಿಯ ಎನ್ಆರೈ ವಕ್ತಾರ ಹರಿಕುಮಾರ್ ಮತ್ತು ಮತ್ತೋರ್ವ ಬಿಜೆಪಿ ಪ್ರತಿನಿಧಿ ಪದ್ಮಕುಮಾರ್ ನಡುವೆ ಪ್ರಾರಂಭದಲ್ಲಿ ವಾಗ್ವಾದ ಉಂಟಾಯಿತು. ಬಿಜೆಪಿಯನ್ನು ಅಧಿಕೃತವಾಗಿ ಯಾರು ಪ್ರತಿನಿಧಿಸುತ್ತಾರೆ ಎನ್ನುವ ವಿಷಯದಲ್ಲಿ ತರ್ಕ ಉಂಟಾಗಿತ್ತು. ಈ ಮಧ್ಯೆ ವೇಧಿಕೆಯಲ್ಲಿ ಇರಬೇಕಾದ ಸಾಮಾಜಿಕ ಕಾರ್ಯಕರ್ತರ ಬಗ್ಗೆಯೂ ಬಣಗಳು ಸೇರಿ ಗದ್ದಲವೆಬ್ಬಿಸಿದರು. ಈ ಕಾರಣಕ್ಕಾಗಿ ಏಕೀಕೃತ ದರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ.

ದುಬೈ, ಶಾರ್ಜಾ ಮತ್ತು ದಕ್ಷಿಣದ ಎಮಿರೇಟ್ಸ್ ಗಳಿಂದ ಭಾರತೀಯರ ಮೃತದೇಹವನ್ನು ದೇಶೀಯ ವಿಮಾನ ಕಂಪನಿಯಾದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ನಿಶ್ಚಿತ ದರದಲ್ಲಿ ಸಾಗಿಸುವುದಾಗಿ ಒಪ್ಪಂದಕ್ಕೆ ಬಂದಿತ್ತು. ಈ ಕಂಪೆನಿಗಳ ವಲಯದ ಏಜೆಂಟ್ ಆದ ಅರೇಬಿಯನ್ ಟ್ರಾವಲ್ಸ್ ಈ ಕುರಿತ ಘೋಷಣೆ ನಡೆಸಲು ಕರೆಯಲಾದ ಸಭೆಯಲ್ಲಿ ಈ ಗದ್ದಲ ಉಂಟಾಗಿದೆ. ಅಬುಧಾಬಿ ಹೊರತಾದ ಎಮಿರೇಟ್ಸ್ ಗಳಿಂದ  ಈ ಸೌಕರ್ಯವನ್ನು ಜಾರಿಗೆ  ತರುವ ಬಗ್ಗೆ ಯೋಚಿಸಲಾಗಿತ್ತು.

ಮೃತದೇಹವನ್ನು ಉಚಿತವಾಗಿ ಸಾಗಾಟ ಮಾಡುವ ಬಗ್ಗೆ ಕೇಂದ್ರ ಸರಕಾರದೊಂದಿಗೆ ಬಿಜೆಪಿ ಎನ್ ಆರೈ ಮತ್ತು ಸಾಮಾಜಿಕ ಕಾರ್ಯಕರ್ತರು ಸೇರಿ ಒತ್ತಡ ಹೇರುತ್ತಿದ್ದರು. ಆದರೆ ಖಾಸಗಿ ವಿಮಾನ ಕಂಪನಿಗಳನ್ನು ಈ ವಿಷಯದಲ್ಲಿ ಒಪ್ಪಿಸುವುದು ಕಷ್ಟಕರವಾಗಿದೆ ಎನ್ನಲಾಗಿದೆ.

ವರ್ಷಗಳಿಂದ ಅನಿವಾಸಿ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಮೃತ ಶರೀರವನ್ನು ಉಚಿತವಾಗಿ ಕೊಂಡೊಯ್ಯುವಂತೆ ರಾಜ್ಯ, ಕೇಂದ್ರಸರಕಾರಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರು. ಈ ಕಾರ್ಯದಲ್ಲಿ ಭಾಗಶಃ ಅನುಕೂಲಕರ ತೀರ್ಮಾನ ಬರುವ ವೇಳೆಯಲ್ಲೇ ಬಿಜೆಪಿ ಪರ ವಕ್ತಾರ ನ ನೇಮಕ ದಲ್ಲಿ ಗೊಂದಲ ಉಂಟಾಗಿದ್ದು ದುರದೃಷ್ಟ ಕರವಾಗಿದೆ.ಏತನ್ಮದ್ಯೆ ಇದು ಬಿಜೆಪಿ ಪರ ಸಂಘತನೆಯಲ್ಲೂ ವಿವಾದವನ್ನೆಬ್ಬಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕೇರಳದ ನಾಯಕರು ಯುಎಇಯ ಪ್ರಮುಖ ವ್ಯಕ್ತಿಗಳೊಂದಿಗೆ ಸಂವಹನ ನಡೆಸಿದ್ದಾರೆ. ಸಮಸ್ಯೆಯನ್ನುಂಟು ಮಾಡಿರುವ ಕೆಲವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

error: Content is protected !!